ನಾಗೇಶ ಟಿ. ಅಳ್ವೆಗದ್ದೆರವರಿಂದ ದಿನಸಿ ಸಾಮಾಗ್ರಿ ವಿತರಣೆ

0
917

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಕೋವಿಡ್ 19 ಲಾಕ್ ಡೌನ್ ಕಾರಣದಿಂದ ತೊಂದರೆಯಲ್ಲಿ ಸಿಲುಕಿದ ಅಳ್ವೆಗದ್ದೆಯ ಮೀನುಗಾರರ, ಮೇಸ್ತ ಹಾಗೂ ಬಿಲ್ಲವ ಸಮಾಜದವರ ಕಷ್ಟವನ್ನು ಮನಗಂಡು ಅವರಿಗೆ ತಮ್ಮಿಂದಾದ ಸಹಾಯ ಮಾಡುವ ಉದ್ದೇಶದಿಂದ ನಾಗೇಶ ಟಿ. ಅಳ್ವೆಗದ್ದೆ ಉಪಾಧ್ಯಕ್ಷರು ಗ್ರಾಮ ಪಂಚಾಯತ ಶಿರೂರು ಇವರು ಆಯ್ದ ಕುಟುಂಬದವರಿಗೆ ವೈಯುಕ್ತಿಕವಾಗಿ ದಿನನಿತ್ಯದ ದಿನಸಿ ವಸ್ತುಗಳನ್ನು ನೀಡಬೇಕೆಂದು ನಿರ್ಧಾರ ಮಾಡಿ ಪ್ರಥಮ ಹಂತದಲ್ಲಿ ಕೆಲವು ದಿನದ ಹಿಂದೆ 35 ( ಕುಟುಂಬ) ಕಿಟ್ ನೀಡಿದ್ದರು . ಅದರ ಮುಂದುವರಿದ ಭಾಗವಾಗಿ ಇಂದು 60 ಕುಟುಂಬಗಳಿಗೆ ಕಿಟ್ ವಿತರಿಸಿದರು.

 ತಮ್ಮ ಅಭೂತವಾದ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡ ಕೋವಿಡ್ ವಾರಿಯರ್ಸ ಆಗಿ ನಮ್ಮೆಲ್ಲರಿಗೆ ಅತ್ಯುತ್ತಮ ಸೇವೆ ನೀಡಿದ ಅಳ್ವೆಗದ್ದೆಯ ಆಶಾ ಕಾರ್ಯಕರ್ತೆಯರಿಗೂ ಹಾಗೂ ಅಂಗನಾಡಿ ಶಿಕ್ಷಕಿಯವರಿಗೂ ಈ ಸಂದರ್ಭದಲ್ಲಿ ಕಿಟ್ ವಿತರಿಸಿ ಅವರ ಸೇವೆ ಪ್ರಶಂಶಿಸಲಾಯಿತು.

 ಈ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಟಿ. ಅಳ್ವೆಗದ್ದೆ ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಶ್ರೀ ತಿಮ್ಮಪ್ಪ ಎನ್. ಅಧ್ಯಕ್ಷರು ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಗಣಪತಿ ಎಸ್ ಉಪಾಧ್ಯಕ್ಷರು ಶ್ರೀ ಮಹಾಗಣಪತಿ ದೇವಸ್ಥಾನ , ಶ್ರೀ ರಾಮಾ. ಎನ್. ಶ್ರೀ ಮಹಾದೇವ ಎನ್. ಶ್ರೀ ನಾಗೇಶ ಸುಬ್ರಾಯ ಮೊಗೇರ ಹಾಗೂ ಊರಿನ ನಾಗರೀಕರು ಭಾಗವಹಿಸಿದ್ದರು. ಶ್ರೀ ನಾಗೇಶ ಟಿ ಇವರ ಸೇವೆಯನ್ನು ಊರಿನ ನಾಗರಿಕರು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದವರು ಪ್ರಶಂಶಿಸಿ ಮುಂದೆಯೂ ಇನ್ನೂ ಹೆಚ್ಚಿನ ಸೇವೆಯನ್ನು ಊರಿನವರಿಗೆ ಒದಗಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಶುಭ ಹಾರೈಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)