ಬೈಂದೂರು ಆಸ್ಪತ್ರೆಗೆ ಭೇಟಿಕೊಟ್ಟ ಕೊರೊನೊ ಶಂಕಿತ ವ್ಯಕ್ತಿ

0
2507

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (3) ಅಸಮ್ಮತ (3) ಖಂಡಿಸುವೆ (16) ಅಭಿಪ್ರಾಯವಿಲ್ಲ (0)

ಇಷ್ಟು ದಿನ ಆರಾಮವಾಗಿದ್ದ ಬೈಂದೂರಿನ ಹೆಸರು ಈಗ ಕೊರೊನೊದೊಂದಿಗೆ ಸುದ್ದಿಯಾಗಿದೆ.ಬೆಳಗಾಂ ನಿಂದ ಬಂದ ವ್ಯಕ್ತಿಗೆ ಕೊರೊನೊ ಕಂಡು ಬಂದಿದ್ದು ಬೆಳಿಗ್ಗೆ ಸರಕಾರಿ ಆಸ್ಪತ್ರೆಗೆ ಬಂದಿದ್ದಾನೆ.

ಬೆಳಗಾಮ್ ನಲ್ಲಿ ಈತ ನಿನ್ನೆ ಕೊರೊನೊ ಪರೀಕ್ಷೆ ಮಾಡಿದ್ದ.ಅಲ್ಲಿದ್ದ ಆರೋಗ್ಯ ಇಲಾಖೆಯವರು ವರದಿ ಬಂದ ಬಳಿಕ ತೆರಳಬೇಕು ಅಂತಿದ್ದರು ಸಹ ಈತ ರಿಪೋರ್ಟ್ ಮೊಬೈಲ್ ಗೆ ಬರುತ್ತದೆ ಎಂದು ತೆರಳಿದ್ದಾನೆ.ರಾತ್ರಿ ಅಲ್ಲಿಂದ ಪ್ರಯಾಣ ಬೆಳೆಸಿದ್ದುka 22 c 1280 ವಾಹನದಲ್ಲಿ ರಾತ್ರಿ 1 .40ಗಂಟೆ ಸುಮಾರಿಗೆಬೈಂದೂರಿನ ಕಳವಾಡಿಗೆ ಪ್ರಯಾಣ ಮಾಡಿದ್ದ.ಇಂದು ಬೆಳಿಗ್ಗೆ ಈತನ ಮೊಬೈಲ್ಗೆ ಕೊರೊನೊ ಪರೀಕ್ಷೆ ವರದಿ ಬಂದಿದ್ದು ಅದನ್ನು ನೊಡಿದ ಬಳಿಕ ಬೈಂದೂರಿನ ಸರಕಾರಿ ಆಸ್ಪತ್ರೆಗೆ ತೆರಳಿ ವೈದ್ಯರಿಗೆ ತಿಳಿಸಿದ್ದಾನೆ.ಪ್ರಸ್ತುತ ಬೈಂದೂರು ಪರಿಸರ ಸೀಲ್ ಡೌನ್ ಪರಿಸ್ಥಿತಿ ಇದ್ದು ಆರೋಗ್ಯ ಮತ್ತು ಆರಕ್ಷಕ ಇಲಾಖೆ ಈತನ ಟ್ರಾವೆಲ್ ಹಿಸ್ಟರಿ ಮಾಹಿತಿ ಪಡೆಯುತಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (3) ಅಸಮ್ಮತ (3) ಖಂಡಿಸುವೆ (16) ಅಭಿಪ್ರಾಯವಿಲ್ಲ (0)