ಸಂಚಾರಿ ಪ್ರಯೋಗಾಲಯ ಚಾಲನೆ : ಆರ್ಥಿಕ ನೆರವು ನೀಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

0
744

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಮೇಲೆ ತೋರಿಸಿದ ಯೋಜನೆ ಉಡುಪಿ ಜಿಲ್ಲಾಡಳಿತ ಮಾಡುತ್ತಿದ್ದು, ಮಾರುತಿ ಓಮಿನಿ ವಾಹನದ ಮೂಲಕ ಪ್ರತೀ ಗ್ರಾಮಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆ ತಿರುಗಿ ಪ್ರತಿ ಮನೆಯ ಸದಸ್ಯರ ಗಂಟಲ ದ್ರವ ಸಂಗ್ರಹಕ್ಕೆ ಮಾನ್ಯ ಜಿಲ್ಲಾಧಿಕಾರಿಯವರು ಪ್ರಯತ್ನ ನಡೆಸಿದ್ದು, ಈ ಪ್ರಯುಕ್ತ ವಿಶೇಷವಾಗಿ ಎಲ್ಲಾ ಸೌಲಭ್ಯ ಹೊಂದಲು ಈ ವಾಹನವನ್ನು ವಿನ್ಯಾಸಗೊಳಿಸಲು ಆರ್ಥಿಕ ನೆರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವರು ಬರಿಸಿದ್ದಾರೆ. ಜಿಲ್ಲಾಧಿಕಾರಿಯವರ ಮಾರ್ಗದರ್ಶನದಂತೆ ಡಾ . ನಾಗಭೂಷಣ ಉಡುಪ ಇವರ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ಈ ಯೋಜನೆ ಕುಂದಾಪುರ ತಾಲೂಕಿನಲ್ಲಿ ಕಾರ್ಯಾರಂಭ ಮಾಡುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹ್ಲೂಟ್ ,ಎ.ಡಿ.ಸಿ ಸದಾಶಿವ ಪ್ರಭು , ಕುಂದಾಪುರದ ಎ.ಸಿ ರಾಜು, ಡಿ.ಹೆಚ್.ಓ ಸುದೀರ್ ಚಂದ್ರ ಸೂಡ, ಡಾ. ಪ್ರೇಮಾನಂದ, ಕುಂದಾಪುರ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೆ ದಿನಕರ ಶೆಟ್ಟಿ ಅಂಪಾರು, ಕಾರ್ಯದರ್ಶಿ ದಿವಾಕರ್‌ ಖಾರ್ವಿ, ಉಪಾಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ರಮೇಶ್ ಶೆಟ್ಟಿ, ಚಂದ್ರಕಾಂತ ಬಿ , ಸದಸ್ಯರಾದ ರಾಧಾಕೃಷ್ಣ ಶೇರಿಗಾರ , ಗಣೇಶ ಶೆಟ್ಟಿ ಮೊಳಹಳ್ಳಿ ಇವರು ಉಪಸ್ಥಿತರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)