ಜೆಸಿಐ ಉಪ್ಪುಂದದ ವತಿಯಿಂದ ನಿರಾಶ್ರಿತರಿಗೆ ನೆರವು

0
387

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಜೆಸಿಐ ಉಪ್ಪುಂದ : ಕುಂದಾಪುರ ಸಿಟಿ ಜೇಸಿಯವರು ಲಾಕ್ ಡೌನ್ ಸಮಯದ 34 ದಿನಗಳಿಂದ ಕುಂದಾಪುರ ಪರಿಸರದಲ್ಲಿರುವ ನಿರಾಶ್ರಿತರಿಗೆ ಹಾಗೂ ಸರಕಾರಿ ಆಸ್ಪತ್ರೆಯ ಸುತ್ತಮುತ್ತಲಿನಲ್ಲಿ ಊಟಕ್ಕೆ ತೊಂದರೆಯಾದವರಿಗೆ ದಿನಂಪ್ರತಿ ನಡೆಸುತ್ತಿರುವ ಮದ್ಯಾಹ್ನದ ಊಟದ ಯೋಜನೆಯ ಇಂದಿನ ಸೇವೆಯನ್ನು ಜೆಸಿಐ ಉಪ್ಪುಂದದ ವತಿಯಿಂದ ಪ್ರಾಯೋಜಿಸಲಾಯಿತು.

ಈ ಸಂದರ್ಭದಲ್ಲಿ ಉಸ್ತುವಾರಿ ಯು. ಪ್ರಕಾಶ್ ಭಟ್, ಜೆಸಿಐ ಉಪ್ಪುಂದದ ಅಧ್ಯಕ್ಷ ದೇವರಾಯ ದೇವಾಡಿಗ, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಹಾಗೂ ಕುಂದಾಪುರ ಸಿಟಿ ಜೆಸಿಐನ ಅಧ್ಯಕ್ಷ ನಾಗೇಶ್ ನಾವುಡ, ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಭಾಗಿಯಾಗಿದ್ದರು.

ಪ್ರತಿ ದಿನವೂ 200,ರಿಂದ 250 ಜನರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿರುವ ಕುಂದಾಪುರ ಸಿಟಿ ಜೇಸಿ ಯವರಿಗೆ ಅಭಿನಂದಿಸಲಾಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)