ಗೋಪಾಲಕೃಷ್ಣ ವಿ. ಸ. ಸಂಘದಿಂದ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಕಿಟ್ ವಿತರಣೆ

0
481

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗೋಪಾಲಕೃಷ್ಣ ವಿವಿಧೋದ್ದೇಶ ಸಹಕಾರಿ ಸಂಘ ನಿ., ಕುಂದಾಪುರ ಇದರ ವತಿಯಿಂದ ತೀರಾ ಆರ್ಥಿಕವಾಗಿ ಹಿಂದುಳಿದ ಸದಸ್ಯ ಕುಟುಂಬದವರಿಗೆ ಆಹಾರ ಸಾಮಾಗ್ರಿ ಕಿಟ್‍ನ್ನು ನೀಡಲಾಯಿತು. ಸಂಘದ ವ್ಯಾಪ್ತಿಯಲ್ಲಿನ ತೀರಾ ಆರ್ಥಿಕವಾಗಿ ಹಿಂದುಳಿದವರ ಮನೆಗೆ ತೆರಳಿ ಕಿಟ್ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೊಲ್ಲೂರು ರಮೇಶ ಗಾಣಿಗ, ಉಪಾಧ್ಯಕ್ಷರಾದ ಸುಧೀರ್ ಪಂಡಿತ್, ನಿರ್ದೇಶಕರಾದ ಸುಬ್ರಹ್ಮಣ್ಯ ಪಡುಕೋಣೆ, ನಾಗರಾಜ ಗಾಣಿಗ ಬೈಂದೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಗಾಣಿಗ ಹಿಲ್ಕೋಡು ಮುಂತಾದವರು ಉಪಸ್ಥಿತರಿದ್ದರು. ಈ ಕಾರ್ಯದಲ್ಲಿ ಸಂದೀಪ, ವಿನಾಯಕ, ರಾಜ್‍ಗುರು ಸಹಕರಿಸಿದರು. ಕುಂದಾಪುರ ಮತ್ತು ಬೈಂದೂರು ತಾಲೂಕಿನ ಗ್ರಾಮೀಣ ಭಾಗದಲ್ಲಿನ ಆರ್ಹರನ್ನು ಗುರುತಿಸಿ ಆಹಾರ ಸಾಮಗ್ರಿ ಕಿಟ್‍ನ್ನು ನೀಡಲಾಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)