ಮೇ 3ರ ವರೆಗೆ ದೇಶದಾದ್ಯಂತ ಕಠಿಣ ಲಾಕ್ ಡೌನ್ : ಪ್ರಧಾನಿ ಮೋದಿ ಘೋಷಣೆ

0
362

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ಇನ್ನೂ 19 ದಿನಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದ್ದು, ಮೇ 3ರ ವರೆಗೆ ದೇಶದಾದ್ಯಂತ ಲಾಕ್ ಡೌನ್ ಆದೇಶ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲಾಕ್ ಡೌನ್ ಆದೇಶ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಕೊರೊನಾ ವಿರುದ್ದದ ಹೋರಾಟಕ್ಕೆ ಲಾಕ್ ಡೌನ್ ಒಂದೇ ಮಾರ್ಗ ಹೀಗಾಗಿ, ಹೀಗಾಗಿ ದೇಶದ ಪ್ರತೀ ಏರಿಯಾ, ಪ್ರತೀ ಪೊಲೀಸ್ ಠಾಣೆ, ಪ್ರತೀ ಜಿಲ್ಲೆಯಲ್ಲಿಯೂ ಲಾಕ್ ಡೌನ್ ಆದೇಶವನ್ನು ಕಠಿಣಗೊಳಿಸಲಾಗುತ್ತದೆ. ಇನ್ನೂ 19 ದಿನಗಳ ಕಾಲ ಕಠಿಣವಾಗಿ ಲಾಕ್ ಡೌನ್ ಆದೇಶವನ್ನು ವಿಸ್ತರಣೆ ಮಾಡಲಾಗುತ್ತದೆ. ಲಾಕ್ ಡೌನ್ ಆದೇಶವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ. ಈ ಕುರಿತು ಕೇಂದ್ರ ಸರಕಾರ ನಾಳೆ ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ಹೇಳಿದ್ದಾರೆ.

ಕೊರೊನಾ ವಿರುದ್ದ ಭಾರತೀಯರ ಹೋರಾಟ ಅದ್ಬುತವಾಗಿದೆ. ನಿಮ್ಮ ತ್ಯಾಗದಿಂದ ಭಾರತ ಸುರಕ್ಷಿತವಾಗಿದೆ. ಇದರಿಂದಾಗಿ ಹಾನಿಯ ಪ್ರಮಾಣವೂ ಕಡಿಮೆಯಾಗಿದೆ. ಕೊರೊನಾದಿಂದ ಆಗುತ್ತಿದ್ದ ಹಾನಿಯನ್ನು ತಡೆಯವಲ್ಲಿ ನಾವು ಸಕ್ಸಸ್ ಆಗಿದ್ದೇನೆ. ಎಲ್ಲರೂ ಶಿಸ್ತಿನ ಸಿಫಾಯಿಗಳಂತೆ ಕಾರ್ಯನಿರ್ವಹಿಸಿದ್ದೀರಿ. ಎಲ್ಲರ ತಾಳ್ಮೆಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದಿದ್ದಾರೆ.

ಬಡವರ ಬದುಕಿನ ತೊಂದರೆಯನ್ನು ಕಡಿಮೆ ಮಾಡುತ್ತೇವೆ. ರೈತರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಆದೇಶವನ್ನು ಇನ್ನಷ್ಟು ಕಠಿಣ ಮಾಡಲಾಗುತ್ತದೆ. ಎಪ್ರಿಲ್ 20ರ ನಂತರ ಸುರಕ್ಷಿತ ಪ್ರದೇಶಗಳಲ್ಲಿ ಲಾಕ್ ಡೌನ್ ಆದೇಶವನ್ನು ಸಡಿಲಗೊಳಿಸಲಾಗುತ್ತದೆ. ಆಯುಷ್ ಇಲಾಖೆಯ ಮಾರ್ಗಸೂಚಿಯನ್ನು ಪಾಲನೆ ಮಾಡಿ, ಪ್ರತಿಯೊಬ್ಬರೂ ಕೂಡ ಆರೋಗ್ಯ ಸೇತು ಆ್ಯಪ್ ಬಳಕೆ ಮಾಡುವಂತೆ ಮೋದಿ ಮನವಿ ಮಾಡಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)