ಬೈಂದೂರು: ದೀಪ ಬೆಳಗಿಸಿದ ಜನತೆ

0
1127

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮಹಾಮಾರಿ ಕರೊನಾ ವಿರುದ್ಧದ ಹೋರಾಟದಲ್ಲಿ ಯಾರು ಏಕಾಂಗಿಯಲ್ಲ. ನಾವೆಲ್ಲರೂ ಒಂದೇ ಎಂದು ಸಾರಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದ ದೀಪ ಬೆಳಗುವ ಸಂಕಲ್ಪಕ್ಕೆ ಇಡೀ ರಾಷ್ಟ್ರದ ಜನತೆ ಭರ್ಜರಿ ಬೆಂಬಲ ನೀಡಿದರು. ಇಡೀ ರಾಷ್ಟ್ರವೇ ದೀಪದ ಬೆಳಕಿನಲ್ಲಿ ಕರೊನಾ ಅಂಧಕಾರವನ್ನು ತೊಲಗಿಸುವ ಪ್ರಧಾನಿ ಕರೆಗೆ ಓಗೊಟ್ಟರು.

ಕೆಲವರ ವ್ಯಂಗ್ಯ, ಟೀಕೆ-ಟಿಪ್ಪಣಿಗಳು ನಡುವೆಯೂ ಪ್ರಧಾನಿ ಮಾತಿಗೆ ಭಾವನಾತ್ಮಕವಾಗಿ ಬೆಸೆದುಕೊಂಡ ಜನತೆ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಬೆಳಗಿಸಿದರು. ಮೊಬೈಲ್​ ಫ್ಲ್ಯಾಶ್​ ಲೈಟ್​, ಮೇಣದ ಬತ್ತಿ ಹಾಗೂ ಎಣ್ಣೆ ದೀಪಗಳನ್ನು ಹಿಡಿದು ಮನೆಯಿಂದ ಆಚೆ ಬಂದು ಬೆಳಕು ಉಕ್ಕಿಸಿ, ಏಕತೆಯ ಮಂತ್ರ ಸಾರಿದರು. ಮನೆಯ ಮಹಡಿಗಳ ಮೇಲೆ ಜನರು ದೀಪ ಕ್ರಾಂತಿ ಮಾಡಿದರು. ಇಡೀ ಭಾರತವೇ ಬೆಳಕಿನ ಚಿತ್ತಾರದಲ್ಲಿ ಮಿಂದೆದ್ದಿತು.

9 ನಿಮಿಷಗಳ ಕಾಲ ದೀಪ ಬೆಳಗಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳೂ ಪ್ರಧಾನಿ ಕರೆಗೆ ಸ್ಪಂದಿಸಿದ್ದಾರೆ. ಶಾಸಕರು, ಸಂಸದರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿದ್ದಾರೆ.

         

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)