ಕರೋನಾ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆ

0
544

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೊರೊನಾ ನಿಯಂತ್ರಣ ಕ್ರಮಗಳ ಪರಿಶೀಲನೆ ಸಭೆ ನಡೆಸಲಾಯಿತು.

ಬೈಂದೂರು ಸಂಸದರಾದ ಬಿ.ವೈ. ರಾಘವೇಂದ್ರ ಮಾತನಾಡಿ ಹೊರರಾಜ್ಯ ಹೊರಜಿಲ್ಲೆ ಹಾಗೂ ಹೊರದೇಶದಿಂದ ಬಂದವರ ಮಾಹಿತಿಯನ್ನು ಕಲೆ ಹಾಕಿ ಅವರಿಗೆ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಹೇಳಿ , ಅಂಗನವಾಡಿ, ಶಾಲಾ ವಿದ್ಯಾರ್ಥಿಗಳ ಪಡಿತರ ವಿತರಿಸುವ ಕ್ರಮ, ಪಡಿತರ ಚೀಟಿ ಅಕ್ಕಿಯನ್ನು ಒಪಿಡಿ ಇಲ್ಲದೆ ವಿತರಿಸಿ ಎಂದು ಹೇಳಿದರು. ಭಾರತ ಲಾಕ್ ಡೌನ್ ಗೆ ಶೇ. 80 ಜನ ಮಾತ್ರ ಬೆಂಬಲವನ್ನು ಕೊಡುತ್ತಿದ್ದಾರೆ.ಕೊಡುತ್ತಿದ್ದಾರೆ. ಇನ್ನುಳಿದ ಶೇ. 20 ಜನರು ಹೊರಗಡೆ ಅಡ್ಡಾಡುತ್ತಿದ್ದಾರೆ. ಅವರು ಕೂಡಾ ಬೆಂಬಲವನ್ನು ಕೊಡಬೇಕು ಎಂದರು. ಹಾಗೇ ಪೊಲೀಸರ ಹಾಗೂ ಮಾಧ್ಯಮ ವರ್ಗದವರ ಕೆಲಸಕ್ಕೆ ಪ್ರಶಂಶೆ ವ್ಯಕ್ತಪಡಿಸಿದರು.

ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ ಚಕ್‍ಪೋಸ್ಟ್ ತನಕ ಈಗಾಗಲೇ ಬಂದಿರುವ ಜನರನ್ನು ಪರೀಕ್ಷೆ ಮಾಡಿಸಿ ಒಳಗೆ ಬಿಡಿ ಅವರನ್ನು ಹೋಮ್ ಕ್ವಾರಂಟೈನಲ್ಲಿ ಇರುವಂತೆ ತಿಳಿಸಿ ಎಂದು ಹೇಳಿದರು.

ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ, ಪೊಲೀಸ ಇಲಾಖೆ ಸಿಬ್ಬಂದಿವರ್ಗ ಮೊದಲಾದವರು ಉಪಸ್ಥಿತರಿದ್ದರು.

  

 

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)