ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ 2 ಬಡ ಕೂಲಿ ಕಾರ್ಮಿಕ ಕುಟುಂಬಕ್ಕೆ ನೆರವು

0
579

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಭಾರತ ಸರ್ಕಾರವು ಕೊರೊನಾ ವೈರಸ್ ಕಾರಣದಿಂದಾಗಿ 21 ದಿನದ ಲಾಕ್ ಡೌನ ಘೋಷಿಸಿದ್ದರಿಂದ ದಾವಣಗೆರೆಯ ಕೂಲಿ ಕಾರ್ಮಿಕ 2 ಬಡ ಕುಟುಂಬಗಳು ಅನ್ನ ನೀರಿಲ್ಲದೆ ಶಿರೂರಿನ ದಾಸನಾಡಿ ಮತ್ತು ಮುದ್ರಮಕ್ಕಿಯಲ್ಲಿ ವಾಸವಾಗಿದ್ದರು. ಈ ವಿಷಯ ತಿಳಿದೊಡನೆಯೇ ದಿನಾಂಕ 29 ಮಾರ್ಚ್ ಭಾನುವಾರದಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಹಸನ್ ಮಾವಡ್ ನವರು ಬೈಂದೂರು ಠಾಣಾ ಅಧೀಕ್ಷಕಿ ಸಂಗೀತ ಮೇಡಂ ಅವರ ಉಪಸ್ಥಿತಿಯಲ್ಲಿ ಆಹಾರ ಧಾನ್ಯಗಳನ್ನು ನೀಡಿದರು ಮತ್ತು ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ತಬ್ರೇಜ್ ನಾಗೂರು (ಜಿಲ್ಲಾ ಸಮಿತಿ ಸದಸ್ಯರು UJMO) ಠಾಣಾ ಸಿಬ್ಬಂದಿ ಅಶೋಕ್, ಸಂತೋಷ್, ನಾಗೇಶ್ ಮತ್ತು ಚಾಲಕ ಸುಧೀರ್ ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)