ಪುರಾಣದ ಪ್ರಸಿದ್ಧ ಶ್ರೀ ಗುಹೇಶ್ವರನ ಸಾನಿಧ್ಯದಲ್ಲಿ ಶ್ರೀ ಭದ್ರಕಾಳಿ ಅಮ್ಮನವರ ಪ್ರತಿಷ್ಠಾಪನೆ

0
368

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯ ಶ್ರೀ ಗುಹೇಶ್ವರ ದೇವರ ಸನ್ನಿಧಾನದಲ್ಲಿ ಶಕ್ತಿ ಸ್ವರೂಪಿಣಿ ಶ್ರೀ ಭದ್ರಕಾಳಿ ಅಮ್ಮನವರ ಪ್ರತಿಷ್ಠಾಪನೆ ಮತ್ತು ಶ್ರೀ ನಾಗ ದೇವರ ಪ್ರತಿಷ್ಠೆ ವೇದಮೂರ್ತಿ ಶ್ರೀ ಶ್ರೀಶ ಅಡಿಗ ಅರಾಟೆ ಇವರ ನೆತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು

ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಭಿಲಾಷ ಸೋಮಯಾಜೀ ಕೋಟ ಇವರು ಧರ್ಮದ ಬಗ್ಗೆ ಋಷಿಮುನಿಗಳು ಕವಿಗಳು ಇತಿಹಾಸ ಕಾರರು ಸಾಮಾಜಿಕ ಧರ್ಮ,ಧಾರ್ಮಿಕ ಧರ್ಮ ಎನ್ನುವ ವ್ಯಾಖ್ಯಾನವನ್ನು ಕೊಟ್ಟಿದ್ದಾರೆ ಧರ್ಮ ಎಂದರೆ ನಾವು ಧಾರ್ಮಿಕವಾಗಿ ಇರಬೇಕು ಎನ್ನುದಾಗಿದೆ,ಅರ್ಜೀಣ ಅವಸ್ಥೆಯಲ್ಲಿ ಇರುವ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಮುಂದೆ ಬರುವ ವ್ಯಕ್ತಿಯನ್ನು ಧಾರ್ಮಿಕ ವ್ಯಕ್ತಿ ಎಂದು ಕರೆಯಲಾಗುತ್ತದೆ ಜೀವಿ ಸಂಕುಲದಲ್ಲಿ ಮಾನವನ ಜನ್ಮ ಶ್ರೆಷ್ಠ ವಾಗಿದೆ ಸಾತ್ವಿಕ ಸ್ವಭಾವವನ್ನು ರೂಢಿಸಿಕೊಳ್ಳುವುದುರಿಂದ ಜನ್ಮ ವನ್ನು ಸಾರ್ಥಕ ಗೊಳಿಸಬೇಕು ಎಂದರು ಹಿಂದೂ ಧರ್ಮದ ಉಳಿವಿಗಾಗಿ ಈ ಹಿಂದೆ ರಾಜರು ಪ್ರತಿಯೊಂದು ಗ್ರಾಮದಲ್ಲಿ ದೇವಾಲಯವನ್ನು ನಿರ್ಮಿಸಿದರು ಎಂದರು.

ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭಾ ಅಧ್ಯಕ್ಷತೆಯನ್ನು ವೇದ ಮೂರ್ತಿ ಶ್ರೀ ಶ್ರೀಶ ಅಡಿಗರು ವಹಿಸಿದ್ದರು ವೇದಿಕೆಯಲ್ಲಿ ಗುಜ್ಜಾಡಿ ಗ್ರಾಮ ಪಂ ಅಧ್ಯಕ್ಷರಾದ ಶ್ರೀ ತಮ್ಮಯ್ಯ ದೇವಾಡಿಗ,ಗುಹೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ನರಸಿಂಹ ಗಾಣಿಗ, ಕ್ಷೇತ್ರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಮಯ್ಯರು ಉಪಸ್ಥಿತರಿದ್ದರು.

ಸ್ವಾಗತವನ್ನು ಕ್ಷೇತ್ರಾಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಗಾಣಿಗ ಮಾಡಿದರು,ರಾಜೇಶ್ ಶಿಕ್ಷಕರು ಕಂಚಗೋಡು ಕಾರ್ಯ ಕ್ರಮ ನಿರೂಪಿಸಿ, ಪ್ರದೀಪ ಆಚಾರ್ಯ ವಂದಿಸಿದರು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅನ್ನ ಪ್ರಸಾದ ಸ್ವಿಕರಿಸಿದರು

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)