ಬೈಂದೂರು : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾಮಿ೯ಕರ ಸಭೆ

0
71

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸೂರ್ಕುಂದ ಪ್ರದೇಶದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾಮಿ೯ಕರ ಸಭೆ ಯಶಸ್ವಿಯಾಗಿ ಜರಗಿತು.

ಕೃಷೀ ಕೂಲಿಕಾರರ ಸಂಘದ ಮುಖಂಡರಾದ ವೆಂಕಟೇಶ ಕೋಣಿ,ನಾಗರತ್ನ ನಾಡ ಸಭೆಯನ್ನುದ್ದೇಶಿಸಿ ಮಾತನಾಡಿ,ಕೂಲಿಕಾರರಾದ ನಾವು, ನರೇಗಾ ಕೂಲಿ ಕೆಲಸ ಮಾಡುವುದರಿಂದ ಊರಿನ ಅಭಿವೃದ್ಧಿ ಜತೆಯಲ್ಲಿ ಊರಿಗೊಂದು ಆಸ್ತಿ,ಕೈಗೊಂದು ಕೆಲಸ ಸಿಕ್ಕಿದಂತಾಗುವುದು.ಆದ್ದರಿಂದ ಕೇಂದ್ರ ಸರಕಾರದ ಕಾನೂನು ಬದ್ಧ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಾದ ನಾವೆಲ್ಲರು ಸಕ್ರೀಯವಾಗಿ ಭಾಗ ವಹಿಸೋಣ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಬೈಂದೂರು ಗ್ರಾಮದ ಕೆರೆಯ ಹೂಳೆತ್ತುವ ಅಭಿವೃದ್ಧಿ ಕಾಮಗಾರಿ ಕೆಲಸವನ್ನು ನಾಳೆಯಿಂದಲೇ ಆರಂಭಿಸುವುದಕ್ಕೆ ಸವಾ೯ನುಮತದ ತೀಮಾ೯ನ ಮಾಡಲಾಯಿತು.ಇಲ್ಲಿಯ ಪ್ರದೇಶ ಸಮಿತಿಗೆ ಶಾರದ ರಾಜು(ಅಧ್ಯಕ್ಷೆ),ಶೈಲಜ ರಾಜೇಶ್(ಕಾಯ೯ದಶಿ೯)ಇವರನ್ನು ಆಯ್ಕೆ ಮಾಡಲಾಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)