ಮರವಂತೆ ಗ್ರಾಮ ಪಂಚಾಯತ್ ಗ್ರಾಮ ಸಭೆ, ಗ್ರಾಮ ಸಭೆಗೆ ಹೆಚ್ಚು ಗ್ರಾಮಸ್ಥರು ಭಾಗವಹಿಸಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತದೆ : ಅನಿತಾ ಆರ್,ಕೆ.

0
67

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ : ಮರವಂತೆ ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಮಂಗಳವಾರ ಮರವಂತೆ ಗ್ರಾಮ ಪಂಚಾಯತ್ ಸಭಾಭವನ ಅಟಲ್ ಬಿಹಾರಿ ವಾಜಪೇಯಿ ವೇದಿಕೆಯಲ್ಲಿ ನಡೆಯಿತು.

ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದ ಹೆಚ್ಚು ಹೆಚ್ಚು ಜನರು ಗ್ರಾಮಸಭೆಯಲ್ಲಿ ಭಾಗವಹಿಸಿದಾಗ ನಿಜವಾದ ಪ್ರಜಾಪ್ರಭುತ್ವದ ಅನುಕರಣೆಗೆ ಅರ್ಥ ಬರುತ್ತದ ಇದರಿಂದ ಗ್ರಾಮದ ನೈಜ್ಯ ಅಭಿವೃದ್ಧಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಪ್ರತಿ ಗ್ರಾಮಸಭೆ ಮತ್ತು ಇತರೆ ಸಭೆಗಳಲ್ಲಿ ಭಾಗವಹಿಸಿ ಪ್ರಶ್ನೆಗಳನ್ನು ಕೇಳುವ ಲೀನಾ ಕ್ರಾಸ್ತಾ ಇವರಿಗೆ ಅಭಿನಂದಿಸಿದರು. ಇಂತವರು ಇತರರಿಗೆ ಮಾದರಿ ಎಂದ ಅವರು ಕಳೆದ ಐದು ವರ್ಷಗಳ ಅವ„ಯಲ್ಲಿ ನಡೆದ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿದರು.

ಗ್ರಾಮದ ಗ್ರಾಮಸ್ಥರು ಗ್ರಾಮ ಪಂಚಾಯತ್‍ನ ಮನೆ ತೆರಿಗೆ , ಕಸ ವಿಲೇವಾರಿ ಬಿಲ್ಲು , ನೀರಿನ ಕರ ಕ್ಲಪ್ತ ಸಮಯಕ್ಕೆ ಪಾವತಿಸಿ ಸತತ ಗ್ರಾಮ ಪಂಚಾಯತ್ ಶೇ. 100 ಸಾಧನೆ ಮಾಡಲು ಸಹಕರಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ವಿವಿಧ ಇಲಾಖೆಗಳ ಮಾಹಿತಿ : ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಜನರಿಗೆ ಸಿಗುವ ಸೇವಾ ಸೌಲಭ್ಯಗಳ ಕುರಿತು ಅಂಗನವಾಡಿ ಸೂಪರವೈಸರ್ ಪದ್ಮಾವತಿ ಶೆಟ್ಟಿ , ಆರೋಗಯ ಇಲಾಖೆಯ ಬಗ್ಗೆ ವೈದ್ಯಾ„ಕಾರಿ ಡಾ| ಸನ್ಮಾನ ಶೆಟ್ಟಿ , ಕೃಷಿ ಇಲಾಖೆಯ ಬಗ್ಗೆ ಪರುಶರಾಮ , ಅರಣ್ಯ ಇಲಾಖೆಯ ಬಗ್ಗೆ ಸದಾಶಿವ , ಪಶುಸಂಗೋಪನಾ ಇಲಾಖೆ ಕುರಿತು ಸಹಾಯಕ ನಿದೇಶಕರಾದ ಶಂಕರ ಶೆಟ್ಟಿ , ಶಿಕ್ಷಣ ಇಲಾಖೆಯ ಪರ ಮುಖ್ಯೋಪಧ್ಯಾಯರಾದ ಸತ್ಯನಾ ಕೊಡೇರಿ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ದಿ ಅ„ಕಾರಿ ರಿಯಾಜ್ ಅಹಮದ್ ಪಂಚಾಯತ್ ನಿಂದ ಸಿಗುವ ವಸತಿ ಯೋಜನೆಗಳು ಮತ್ತು ಇತರ ಯೋಜನೆಗಳ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ ಪೂಜಾರಿ ಹಾಗೂ ಸದಸ್ಯರು, ನೋಡೆಲ್ ಅ„ಕಾರಿ ಡಾ| ಶಂಕರ ಶೆಟ್ಟಿ ಉಪಸ್ಥಿತರಿದ್ದರು.

ಗ್ರಾಮಸ್ಥರಾದ ಸಂಜೀವ ಖಾರ್ವಿ , ಬೇಬಿ ಪೂಜಾರಿ ಗೋರಿಕೆರೆ , ಲೀನಾ ಕ್ರಾಸ್ತಾ , ಶೇಷಗಿರಿ ಆಚಾರ್ ತಮ್ಮ ಸಮಸ್ಯೆಗಳ , ಆಗಬೇಕಾದ ಕಾಮಗಾರಿಗಳ ಕುರಿತು ಸಭೆಯಲ್ಲಿ ಮಾಹಿತಿ ಕೇಳಿದರು.

ಗ್ರಾಮ ಪಂಚಾಯತ್ ಕಾರ್ಯದರ್ಶಿ ಪಾರ್ವತಿ ಹಿಂದಿನ ಗ್ರಾಮಸಭೆ ಮತ್ತು ಈ ಬಾರಿಯ ವಾರ್ಡ ಸಭೆಗಳ ನಡಾವಳಿಯನ್ನು ವಾಚಿಸಿದರು. ಗ್ರಾಮ ಪಂಚಾಯತ್ ಬಿಲ್ಲು ವಸೂಲಿಗರಾದ ಶೇಖರ ಮರವಂತೆ ಕಳೆದ ವರ್ಷದಲ್ಲಿ 14ನೇ ಹಣಕಾಸು , ಶಾಸಕರ ನಿ„ ಹಾಗೂ ಇತರೆ ನಿ„ಯಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ವಿವಿಧ ಅಭಿವೃದ್ದಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಗಣಕಯಂತ್ರ ನಿರ್ವಾಹಕ ಗುರುರಾಜ ಬಿಲ್ಲವ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)