ಋಷಿಮುನಿಗಳ ತಪಸ್ಸಿಗೆ ವಲಿದ ಗುಹೇಶ್ವರ

0
243

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿಯಲ್ಲಿ ನೆಲೆಸಿರುವ ಗುಹೇಶ್ವರ ಸಾನಿಧ್ಯಕ್ಕೆ 1125 ವರ್ಷಕ್ಕೂ ಮಿಕ್ಕಿದ ಇತಿಹಾಸವಿದ್ದು ಬಹಳ ಹಿಂದೆ ರಾಜವಂಶಸ್ಥರು ಆರಾಧನೆ ಮಾಡಿಕೊಂಡು ಬಂದಿರುವ ಸಾನಿಧ್ಯವಾಗಿದ್ದು ಗುಜ್ಜಾಡಿ, ತ್ರಾಸಿ,ಗಂಗೋಳ್ಳಿ,ಹೊಸಾಡು,ಈ ನಾಲ್ಕು ಗ್ರಾಮಕ್ಕೆ ಸೇರಿದ ಗ್ರಾಮದೇವರು ಮಹೇಶ್ವರನಾಗಿದ್ದು ಈ ಗ್ರಾಮಕ್ಕೆ ಸೇರಿದ ಸುತ್ತಮುತ್ತಲಿನ 700 ಎಕರೆ ಗಿಂತ ಹೆಚ್ಚು ಭೂಮಿ ದೇವರಿಗೆ ಸೇರಿದ್ದಾಗಿದ್ದು ,ಸೌರ್ಪಣಿಕ,ಚಕ್ರನದಿ ಪಂಚಗಂಗಾವಳಿಯ ತಪ್ಪಲು ಪ್ರದೇಶ ಅರಬಿ ಸಮುದ್ರಕ್ಕೆ ಹೊಂದಿಕೊಂಡ ತಪೋ ಭೂಮಿ ಸುತ್ತಲೂ ನೀರಿನಿಂದ ಆವೃತವಾಗಿದ್ದು ದಕ್ಷಿಣ ಭಾರತದ ಪ್ರಮುಖ ಪಿಠಗಳಲ್ಲಿ ಗುಹೇಶ್ವರವೂ ಒಂದು

ಮುನಿವರ್ಯರ ತಪಸ್ಸಿಗೆ ಕೈಲಾಸದಿಂದ ಧರೆಗಿಳಿದು ಬಂದ ಈಶ್ವರ: ವೇದವ್ಯಾಸ,ಕಣ್ವ, ಅಗಸ್ತ್ಯ,,ಋಷಿವರ್ಯರ ತಪಸ್ಸನ್ನಾಚರಿಸಿದ ಫಲವಾಗಿ ಮುನಿಗಳ ತಪಸ್ಸಿಗೆ ಮೆಚ್ಚಿದ ಶಿವನು ಸಪರಿವಾರ ಸಮೇತನಾಗಿ ಧರೆಗಿಳಿದು ಬಂದ ಶಿವ ಲಿಂಗ ರೂಪದಲ್ಲಿ ಗುಹೇಯಲ್ಲಿ ಉದ್ಧಬವಿಸಿದ್ದು ಗುಹೇಶ್ವರನಾಗಿ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದ್ದಾನೆ,ಈಶ್ವರ ಸೇರಿದಂತೆ ಸ್ಕಂದ, ಗಣಪತಿ, ಭದ್ರಕಾಳಿ, ಕ್ಷೇತ್ರಪಾಲ,ನಾಗನ ಸಾನಿಧ್ಯವೂ ಇದ್ದು ಇತ್ತಿಚೆಗೆ ನಡೆದ ಪ್ರಶ್ನೆಯಲ್ಲಿ ಗೋಚರಗೊಂಡಿದ್ದು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಸೇರಿದಂತೆ ಹಲವಾರು ಪ್ರಾಯಶ್ಚಿತ್ತ ಕಾರ್ಯಕ್ರಮಗಳು ನಡೆಯುತ್ತಾ ಇದ್ದು ಪೂಜಾ ವಿಧಿ ವಿಧಾನಗಳೊಂದಿಗೆ ಧಾರ್ಮಿಕ ಕಾರ್ಯಕ್ರಮ ನೆರವೆರುತ್ತಾ ಇದೆ.

ಸ್ವರ್ಣರೂಢ ಪ್ರಶ್ನೆಯಲ್ಲಿ ಕಂಡು ಬಂದಂತೆ ಗುರು ಪೀಠ ಪ್ರತಿಷ್ಠಾಪನೆ: ಸಾನಿಧ್ಯದ ಅಭಿವೃದ್ಧಿ ಕುರಿತು ಇತ್ತಿಚೆಗೆ ನಡೆದ ಸ್ವರ್ಣರೂಢ ಪ್ರಶ್ನೆಯ ವಿಮರ್ಶೆಯಂತೆ ಶ್ರೀ ಗುಹೇಶ್ವರ ದೇವರ ಸನ್ನಿಧಿಯಲ್ಲಿ ಋಷಿಮುನಿಗಳ ತಪೋ ಶಕ್ತಿಯ ಮಹಿಮೆ ಹಾಗೂ ಪುಣ್ಯದ ಫಲವು ಇರುವುದರಿಂದ ಶ್ರೀ ಕ್ಷೇತ್ರದ ಪಶ್ಚಿಮ ದಿಕ್ಕಿನಲ್ಲಿ ಸನ್ಯಾಸಿ ಬಲ್ಲೆಯಲ್ಲಿ ಇರುವ ಮಹಿಮಾತೀತ ಗುರುಗಳನ್ನು “ಜ್ಯೋತಿ”ಮೂಲಕ ವಿಜೃಂಭಣೆಯಿಂದ ದೇವಸ್ಥಾನಕ್ಕೆ ಕರೆ ತಂದು ಪೀಠದಲ್ಲಿ ಜ್ಯೋತಿ ಸ್ವರೂಪವಾದ ಗುರುಗಳನ್ನು ಸಂಕೇತವಾಗಿ ಗುರು ಪೀಠದಲ್ಲಿ ಈಗಾಗಲೇ ಪ್ರತಿಷ್ಠಾಪಿಸಲಾಗಿದ್ದು ಗುರುಗಳನ್ನು ಭಕ್ತಿಯಿಂದ ನಿತ್ಯವೂ ಆರಾಧಿಸಲಾಗುತ್ತಿದೆ

ಮಹಾಶಿವರಾತ್ರಿ ದಿನದಂದು ಗುಹೇ ಪ್ರವೇಶ: ಈ ಹಿಂದೆ ಹಲವಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯದಂತೆ ಮಹಾಶಿವರಾತ್ರಿ ದಿನದಂದು ಗುಹೇ ಪ್ರವೇಶ ಮಾಡಿ ಗುಹೇಶ್ವರನ ಲಿಂಗ ನೋಡುವ ಅವಕಾಶವಿದ್ದಿತ್ತು ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಲಿಂಗ ದರ್ಶನ ಮಾಡುತ್ತಿದ್ದರು
ಮುನಿಗಳ ತಪಸ್ಸಿಗೆ ಒಲಿದು ಬಂದ ಶಿವನು ಲಿಂಗ ರೂಪದಲ್ಲಿ ಗುಹೇ ಒಳಗೆ ಉದ್ಧಬವಿಸಿದ್ದು ಈ ಗುಹೇಯ ದ್ವಾರವೆ ಶಿವಾಲಯದ ಗರ್ಭ ಗುಡಿಯಾಗಿದೆ ಪ್ರಶ್ನೆಯಲ್ಲಿ ಕಂಡು ಬಂದಂತೆ ಅರ್ಚಕರ ವಿನಃ ಸಾರ್ವಜನಿಕರಿಗೆ ಗುಹಾ ಪ್ರವೇಶ ಕಳೆದೆರಡು ವರ್ಷಗಳಿಂದ ನಿಷೇಧವಾಗಿದ್ದು ಕಾಲಾನುಕಾಲಕ್ಕೂ ಹೀಗೆ ಮುಂದುವರಿಯಲಿದೆ

ಅಪ್ಪನ ಜೊತೆಗೆ ಮಗನಿಗೆ ಪೂಜೆ : ಮಹಾಗಣಪತಿಯ ಸನ್ನಿಧಾನವು ಕ್ಷೇತ್ರದಲ್ಲಿ ಇದ್ದು ಮೊದಲ ಪೂಜೆ ಗಣಪನಿಗೆ ಸಲ್ಲುತ್ತದೆ

ನಿಂತು ಹೋದ ಹಣಬಿನ ಸೇವೆ ಪುನರ್ ಆರಂಭ: ಮಹಾಶಿವರಾತ್ರಿ ದಿನದಂದು ಈ ಹಿಂದೆ ಹಣಬಿನ ಸೇವೆ ನಡೆದಿದ್ದು ಕಾಲನ ಪ್ರಭಾವಕ್ಕೆ ಒಳಗಾಗಿ ಅದೆಷ್ಟೊ ವರ್ಷಗಳಿಂದ ಸೇವೆ ನಿಂತು ಹೋಗಿತ್ತು ಕ್ಷೇತ್ರದಲ್ಲಿ ಇಟ್ಟ ಪ್ರಶ್ನೆಯಲ್ಲಿ ಕಂಡು ತಿಳಿದು ಬಂದಂತೆ ಕಳೆದ ವರ್ಷದಿಂದಲೇ ಹಣಬಿನ ಸೇವೆ ಶಿವನಿಗೆ ಸಮರ್ಪಣೆ ಕೊಳ್ಳುತ್ತಿದೆ. ಶಿವರಾತ್ರಿಯ ದಿನದಂದು ಬೆಳ್ಳಿಗ್ಗೆ ಯಿಂದಲೇ ಗಣಹೋಮದ ಜೊತೆಗೆ ಹಲವಾರು ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯುತ್ತದೆ ಈಶ್ವರನಿಗೆ ರುದ್ರಾಭಿಷೇಕ ಸೇವೆ ಅಚ್ಚು ಮೆಚ್ಚಿನ ಸೇವೆಯಾಗಿದೆ,ಪಂಚ ಕಜ್ಜಾಯ, ಪ್ರಸಾದ ವಿತರಣೆ,ಪಾನಕ ಮಜ್ಜಿಗೆ ಯನ್ನು ಭಕ್ತರಿಗೆ ವಿತರಿಸಲಾಗುತ್ತದೆ.

ಪ್ರದೋಷ ಪೂಜೆ, ವರ್ಷದ ಎಲ್ಲಾ ದಿನಗಳಲ್ಲಿಯೂ ರಂಗ ಪೂಜೆ, ಶ್ರಾವಣ ಮಾಸದಲ್ಲಿ ಸೋಣೆ ಆರತಿ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ತುಲಾಭಾರ ಸೇವೆ,ತಿರ್ಥ ಸ್ನಾನ ಕೂಡ ನಡೆಯುತ್ತದೆ ದಿನ ನಿತ್ಯದ ಪೂಜೆ ಜೊತೆಗೆ ಪ್ರತಿ ಸೋಮವಾರ ವಿಶೇಷ ಪೂಜೆಗಳು ನಡೆಯುತ್ತವೆ
ಜಾಗರಣೆ ಪ್ರಯುಕ್ತ ಸೂರ್ಯ, ಹಸ್ತದಿಂದ ಸೂರ್ಯೋದಯದ ವರೆಗೆ ಭಜನೆ ಕಾರ್ಯಕ್ರಮ ನಡೆಯುತ್ತದೆ
ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)