ಮೀನುಗಾರರ ಮಹಿಳೆಯರ ಪ್ರಾಥಮಿಕ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಅಧ್ಯಕ್ಷಯಾಗಿ ಶ್ರೀಮತಿ ಶಶಿಕಲಾ ಮಂಜುನಾಥ ಆಯ್ಕೆ

0
81

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ವಲಯದ ಮೀನುಗಾರರ ಮಹಿಳೆಯರ ಪ್ರಾಥಮಿಕ ವಿವಿಧೋದ್ದೇಶ ಸಹಕಾರಿ ಸಂಘ ನಿ., ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷೆಯಾಗಿ ಶ್ರೀಮತಿ ಶಶಿಕಲಾ ಮಂಜುನಾಥ ಅವಿರೋಧವಾಗಿ ಆಯ್ಕೆಯಾದರು.

ಫೆ.13ರಂದು ನೆಡದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಹಿರಿಯ ಸಹಕಾರಿ ಅಧಿಕಾರಿಯಾದ ಅರುಣ್ ಕುಮಾರ್ ಎಸ್ ವಿರವರು ನಡೆಸಿಕೊಟ್ಟರು.

ಉಪಾಧ್ಯಕ್ಷರಾಗಿ ಲೀಲಾವತಿ ಖಾರ್ವಿ ಉಪ್ಪುಂದ ಸವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷೆಯಾಗಿ ಆಯ್ಕೆಯಾದ ಶಶಿಕಲಾ ಮಂಜುನಾಥರವರು ಮಾತನಾಡಿ ಸಹಕಾರಿ ಸಂಘದ ಸದಸ್ಯರ ಸುಸ್ತಿ ಸಾಲದ ವಸೂಲಿ ಮತ್ತು ಸಂಘದ ಶೀಘ್ರ ಬೆಳವಣಿಗೆಯ ಬಗ್ಗೆ ಶ್ರಮಿಸುದಾಗಿ ಹೇಳಿದರು.

ನಿರ್ದೇಶಕರುಗಳಾದ ನಾಗಮ್ಮ ಖಾರ್ವಿಕೊಡೇರಿ, ಚಂದ್ರಾವತಿ ಖಾರ್ವಿ ಉಪ್ಪುಂದ, ಲಕ್ಷ್ಮೀ ಖಾರ್ವಿ ಕಾಸಾನಾಡಿ ಉಪ್ಪುಂದ, ಇಂದಿರಾ ಖಾರ್ವಿ ಉಪ್ಪುಂದ, ಸುಜಾತ ಖಾರ್ವಿ ಬಿಜೂರು, ಲಕ್ಷ್ಮೀ ಖಾರ್ವಿ ಉಪ್ಪುಂದ. ಕು|| ಅಕ್ಷತಾ ಮೊಗವೀರ ಉಪಸ್ಥಿತರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)