ಬೈಂದೂರು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಬೈಂದೂರು ತಾಲೂಕಿಗೆ ಕೇಂದ್ರ ಬಜೆಟ್‍ನಲ್ಲಿ ವಿಶೇಷ ಅನುದಾನ ಮಾಡುವಂತೆ ಮನವಿ

0
62

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ತಾಲೂಕು ರಚನೆ ಮಾಡಿ ಸುಮಾರು 2 ವರ್ಷ ಕಳೆದಿದೆ. ಆದರೆ ತಾಲೂಕಿಗೆ ಸಂಬಂಧ ಪಟ್ಟ ನ್ಯಾಯಾಲಯ ತಾಲೂಕು ಪಂಚಾಯತ್ ಆಹಾರ ಇಲಾಖೆ ಹಾಘೂ ಇತರ ಪ್ರಮುಖ ಸರ್ಕಾರಿ ಕಛೇರಿಗಳು ಮೊದಲಿನ ಕುಂದಾಪುರ ತಾಲೂಕಿನಿಂದ ವಿಂಗಡನೆಗೊಂಡು ಬೈಂದೂರು ತಾಲೂಕಿನಲ್ಲಿ ಇನ್ನು ಸಹ ಸ್ಥಾಪನೆಗೊಂಡಿಲ್ಲಾ ಹಾಗೂ ಪಟ್ಟಣ ಪಂಚಾಯತ್ ಇನ್ನು ಘೋಷಣೆಯಾಗಿಲ್ಲಾ. ಈ ಎಲ್ಲಾ ಬೇಡಿಕೆಯನ್ನು ಈ ಕೂಡಲೇ ಈಡೇರಿಸಿ ಸಾರ್ವಜನಿಕ ಸೇವೆಗೆ ಒದಗಿಸಲು ಈ ಸಾಲಿನ ಬಜೆಟ್‍ನಲ್ಲಿ ಬೈಂದೂರು ತಾಲೂಕಿಗೆ ವಿಶೇಷ ಅನುದಾನ ಘೋಷಿಸುವಂತೆ ಬೈಂದೂರು ನಾಗರಿಕ ಹಿತರಕ್ಷಣಾ ಸಮಿತಿ ಬೈಂದೂರು ತಹಶಿಲ್ದಾರರಾದ ಬಸಪ್ಪ ಪೂಜಾರ್ ಮೂಲಕ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಗದೀಶ್ ಪಟಗಾಲ್, ಕಾರ್ಯದರ್ಶಿ ಪ್ರಕಾಶ್ ಬೈಂದೂರು, ಬಿಂದು ನಾರಾಯಣ ಮೋಗವೀರ, ಮಹೇಶ್ ಪೂಜಾರಿ, ನಾಗರಾಜ್ ಶೆಟ್ಟಿ ಉಪಸ್ಥತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)