ಕೃಷಿಯಲ್ಲಿಯಲ್ಲಿ ಬತ್ತದ ಉತ್ಸಾಹ, ಕೋಳಿ ಸಾಕಾಣಿಕೆ ಜೊತೆಗೆ ಕೈ ಹಿಡಿದ ಉಪ ಬೆಳೆ

0
829

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (20) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)

  

ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಭತ್ತದ ಬೆಳೆಯ ಜೊತೆಗೆ ಕಳೆದ ಆರು ವರ್ಷಗಳಿಂದ ಕೋಳಿ ಸಾಕಾಣಿಕೆ ಮಾಡಿಕೊಂಡು ತರಕಾರಿ ಬೆಳೆಗಳನ್ನು ಜೊತೆಯಾಗಿಸಿಕೊಂಡು ಲಾಭದ ಫಲಿತಾಂಶ ಪಡೆದು ಕೃಷಿಯಲ್ಲಿ ಹೊಸತನವನ್ನು ಅಳವಡಿಸಿ ಕೊಳ್ಳಲು ಮುಂದುಡಿ ಇಡುತ್ತಾ ಇದ್ದಾರೆ ಯುವ ರೈತ ಕುಂದಾಪುರ ತಾಲೂಕಿನ ಗಂಗೋಳ್ಳಿ ಗ್ರಾಮದ ಗೋವಿಂದ ಸರೋಜಾ ಪೂಜಾರಿ ದಂಪತಿಯ ಪುತ್ರ ವಿಜಯ್ ಡಿಪ್ಲೊಮಾ ಕಂಪ್ಯೂಟರ್ ವಿಜ್ಞಾನ ಶಿಕ್ಷಣ ಪಡೆದರು ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು ಕೃಷಿ ಕ್ಷೇತ್ರ 6 ಎಕ್ರೆ ಭೂಮಿಯಲ್ಲಿ ಕೃಷಿಯನ್ನು ಅಳವಡಿಸಿಕೊಂಡಿದ್ದು ಜಾಗತೀಕರಣದ ಯುಗದ ಓಟದಲ್ಲಿ ಕೃಷಿ ಜೊತೆ ಮುನ್ನೆಡೆಯುತ್ತಾ ಇದ್ದಾರೆ ಶಾಲಾ ದಿನಗಳಿಂದಲೂ ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಹಸಿರು ಗಿಡಗಳ ಜೊತೆಗೆ ವಡನಾಟ ಮಾಡಿಕೊಂಡಿರುವುದೇ ವಿಜಯ್ ಕೃಷಿಯತ್ತಾ ಒಲವನ್ನು ಬೆಳೆಸಲು ಕಾರಣ ತಂತ್ರಜ್ಞಾನದ ಅಳವಡಿಕೆ ಜೊತೆಗೆ ತನ್ನದೇ ರೀತಿಯ ಆಲೋಚನೆಗಳನ್ನು ಬಳಸಿಕೊಂಡು ಸ್ವಂತ ಜಮೀನಿನ ಜೊತೆಗೆ ಹಡಿಲು ಬಿದ್ದಿರುವ ಕೃಷಿ ಭೂಮಿಯನ್ನು ಗೇಣಿಗೆ ಪಡೆದು ಕೃಷಿಯಲ್ಲಿ ಆಸಕ್ತಿಯಿಂದ ಕೆಲಸವನ್ನು ಮಾಡುತ್ತಾ ಇದ್ದಾರೆ.

ಹನಿ ನೀರಾವರಿ ಪದ್ಧತಿ ಅಳವಡಿಕೆ : ನೀರಿನ ಬವಣೆಯನ್ನು ತಪ್ಪಿಸಲು ಮೀತ ಹಿತವಾಗಿ ಬಳಕೆ ಮಾಡಲು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಸಾವಯವ ಗೊಬ್ಬರದ ಜೊತೆಗೆ ಗಂಜಳವನ್ನು ಉಪಯೋಗಿಸಿ ರಾಸಾಯನಿಕ ಗೊಬ್ಬರಗಳನ್ನು ಅವಲಂಬಿಸದೆ ಭತ್ತದ ಬೆಳೆಯ ಜೊತೆಗೆ ಉಪ ಬೆಳೆಯಾಗಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆದು ಲಾಭಾಂಶದ ಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಸರ್ವ ರೀತಿಯಲ್ಲೂ ಪ್ರಯತ್ನಿಸುತ್ತಾ ಇದ್ದಾರೆ

ಯಾಂತ್ರಿಕ ಉಪಕರಣಗಳ ಸಂಪೂರ್ಣ ಬಳಕೆ : ಮುಂಗಾರಿನಲ್ಲಿ ಭತ್ತದ ಬೆಳೆಯನ್ನು ಬೆಳೆಯುವ ವಿಜಯ್ ಬಳಿ ಒಂದು ಪವರ್ ಟಿಲ್ಲರ್, ಒಂದು ಭತ್ತದ ಕಟ್ಟಿಂಗ್ ಮೆಷಿನ್, ಒಂದು ನಾಟಿ ಯಂತ್ರ ಕೂಡ ಇದ್ದು ಇತರರ ಗದ್ದೆ ಉಳುಮೆ ಮಾಡುದರ ಮುಖಾಂತರ ಮಳೆಗಾಲದ ಎರಡು ತಿಂಗಳ ಪೂರ್ತಿ ಕೆಲಸದಲ್ಲಿ ನಿರತರಾಗುತ್ತಾರೆ.

ಹಿಂಗಾರಿ ನಲ್ಲಿ ತರಕಾರಿ ಬೆಳೆ : ಎರಡು ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯನ್ನು ಬೆಳೆದಿದ್ದು 30 ಸೆಂಟ್ಸ್ ಜಾಗದಲ್ಲಿ ಹೀರೆಕಾಯಿ 20 ಸೆಂಟ್ಸ್ ಜಾಗದಲ್ಲಿ ಮುಳ್ಳು ಸವತೆ,30 ಸೆಂಟ್ಸ್ ಜಾಗದಲ್ಲಿ ಕರಬೂಜ, ಅಲಸಂದೆ,ಬೆಂಡೆ ಬೆಳೆಯನ್ನು ಬೆಳೆದಿದ್ದು ಸ್ವಲ್ಪ ದಿನಗಳಲ್ಲೇ ಕೈ ಸೆರಲಿದೆ ಎರಡು ಲಕ್ಷ ರೂಪಾಯಿ ವೆಚ್ಚ ತಗುಲಿದ್ದು ಹಾಕಿದ ಬಂಡವಾಳದ ಜೊತೆಗೆ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ

ಕಂಪೆನಿಯ ಕೆಲಸದ ಕಡೆ ಮೂಖ ಮಾಡದೆ ಕೃಷಿಯಲ್ಲಿ ಒಲವಿನ ಗೆಲುವುವನ್ನು ಕಂಡುಕೊಂಡು ಇತರರಿಗೂ ಮಾಹಿತಿ ಹಂಚಿಕೊಂಡು ಮಾದರಿ ಯುವಕ ಎನಿಸಿಕೊಂಡಿದ್ದಾರೆ ವಿಜಯ್ ಪೂಜಾರಿ

ಕೋಳಿ ಸಾಕಾಣಿಕೆ: ಮೂರು ಸಾವಿರ ಯೂನಿಟ್ ಕೋಳಿ ಫಾರಂ ಮಾಡಿದ್ದು ಕಂಪೆನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡು ನಿರ್ವಹಣೆ ಮತ್ತು ಜವಾಬ್ದಾರಿ ಇವರದಾಗಿದ್ದು ಮಾರ್ಕೇಟ್ ವ್ಯವಸ್ಥೆಯನ್ನು ಕಂಪೆನಿ ನೋಡಿಕೊಳ್ಳುತ್ತದೆ ಒಳ್ಳೆ ಮೌಲ್ಯ ಸಿಕ್ಕರೆ ಮೂರು ತಿಂಗಳಲ್ಲಿ 40 ಸಾವಿರ ಆದಾಯವನ್ನು ಗಳಿಸಬಹುದು ಎನ್ನುತ್ತಾರೆ.

ಹೈನುಗಾರಿಕೆಯಲ್ಲಿ ಕೈ ಚಳಕ: ಕೋಳಿ ಸಾಕಾಣಿಕೆ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿ ಕೊಂಡ ಯುವ ರೈತ ಹದಿನಾಲ್ಕು ಹಸುಗಳನ್ನು ಸಾಕಿದ್ದು ಹೈನೋದ್ಯಮದಲ್ಲಿ ಯಶಸ್ಸನ್ನು ಕಂಡು ಕೊಂಡಿದ್ದು ದನದ ಮೂತ್ರದಲ್ಲಿ ಗಂಜಲವನ್ನು ಮಾಡಿ ಬೆಳೆಗಳಿಗೆ ಔಷಧೋಪಚಾರ ಮಾಡುವ ಕಾಯಕವನ್ನು ಮಾಡುತ್ತಾರೆ

ಅಣಬೆ ಕೃಷಿ: ಬೆಂಗಳೂರಿನ ಹುಳಿಮಾವಿನಲ್ಲಿ ಅಣಬೆ ಕೃಷಿಯ ಬೆಳೆಯ ಬಗ್ಗೆ ತರಬೇತಿಯನ್ನು ಪಡೆದು ಸರಕಾರದ ಸಬ್ಸಿಡಿಯನ್ನು ಬಳಸಿಕೊಂಡು ಘಟಕವನ್ನು ಅಳವಡಿಸಿ ಕೊಂಡು ಅಣಬೆ ಕೃಷಿಯಲ್ಲೂ ಸಹ ತೊಡಗಿ ಕೊಂಡಿದ್ದಾರೆ
ಭರವಸೆಯ ಬದುಕನ್ನು ಕಟ್ಟಿಕೊಳ್ಳುತ್ತಿರುವ ವಿಜಯ್ ಕೃಷಿ ಪಂಡಿತ ಎಂದರು ತಪ್ಪಾಗಲಾರದು ಇವರಿಂದ ಕಲಿತುಕೊಳ್ಳಲು ಹಲವು ವಿಷಯಗಳು ಇದ್ದು ಕೃಷಿ ಅಧ್ಯಾಯನ ಪ್ರವಾಸದ ಮೂಲಕ ಇವರ ಕೃಷಿ ಭೂಮಿಗೆ ಭೇಟಿ ಕೊಟ್ಟು ಅನುಭವನ್ನು ಪಡೆದು ಕೊಳ್ಳಬಹುದಾಗಿದೆ.

ಮಾರ್ಕೆಟ್ ಮಾಡುವುದು ಕಷ್ಟವಾಗಿದೆ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಕೃಷಿ ಲಾಭದಾಯಕ,ನರೇಗಾ ಯೋಜನೆಯನ್ನು ತರಕಾರಿ ಬೆಳೆಗೆ ವಿಸ್ತರಿಸಬೇಕು ಸೂಕ್ತ ಬೆಂಬಲ ಬೆಲೆಯ ಜೊತೆಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ಕೋಡಬೇಕು, ಯುವಕರು ಕೃಷಿ ಕಡೆಗೆ ಮುಖ ಮಾಡಿ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕು- ವಿಜಯ್ ಪೂಜಾರಿ (ಯುವ ಕೃಷಿಕ)

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (20) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)