ಮೆಟ್ಟಿನಹೊಳೆ ಶಾಲೆಯಲ್ಲಿ ಅಡುಗೆ ಹಬ್ಬ, ವೈವಿಧ್ಯಮಯ ಅಡುಗೆ ತಯಾರಿಸಿದ ಚಿಣ್ಣರು

0
65

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ವಲಯದ ಸ.ಹಿ.ಪ್ರಾ.ಶಾಲೆ ಮೆಟ್ಟಿನಹೊಳೆ ಇಲ್ಲಿ ತಿಂಗಳ ಸಡಗರ ಕಾರ್ಯಕ್ರಮದ ಅನ್ವಯ ಶಾಲಾ ವಿದ್ಯಾರ್ಥಿಗಳ ಅಡುಗೆ ಹಬ್ಬ ಕಾರ್ಯಕ್ರಮವು ಎಸ್.ಡಿ.ಎಮ್.ಸಿ.ಪದಾಧಿಕಾರಿಗಳು ಹಾಗೂ ಪೋಷಕರ ಉಪಸ್ಥಿತಿಯಲ್ಲಿ ಜರುಗಿತು. ಶಾಲಾ ಗೈಡ್ಸ್ ವಿಭಾಗದ ವಿದ್ಯಾರ್ಥಿಗಳು ಬೆಂಕಿಯನ್ನು ಬಳಸಿ ಹಾಗೂ ಉಳಿದ ಹಿರಿಯ ತರಗತಿಯ ವಿದ್ಯಾರ್ಥಿಗಳು ಬೆಂಕಿರಹಿತ ಅಡುಗೆಯನ್ನು ವೈವಿಧ್ಯಮಯವಾಗಿ ತಯಾರಿಸಿ ಆಗಮಿಸಿದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕೈರುಚಿ,ಸವಿರುಚಿ,ಅಭಿರುಚಿ,ಒಗ್ಗರಣೆ ಡಬ್ಬಿ,ಅಡುಗೆರುಚಿ ಎಂಬ ತಂಡಗಳಲ್ಲಿ ಬಗೆಬಗೆಯ ಅಡುಗೆಗಳನ್ನು ತಯಾರಿಸಿ ,ಪ್ರದರ್ಶಿಸಿದರಲ್ಲದೆ ಅವುಗಳನ್ನು ಮಾಡುವ ವಿಧಾನಗಳನ್ನು ಸೊಗಸಾಗಿ ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷ  ಸೀತಾರಾಮ ಕುಲಾಲ್, ಗ್ರಾಮ ಪಂಚಾಯತ್ ಸದಸ್ಯೆ  ಚಂದು ಕುಲಾಲ್, ಎಸ್.ಡಿ.ಎಮ್.ಸಿ.ಉಪಾಧ್ಯಕ್ಷ  ದಿನೇಶ್ ಆಚಾರ್ಯ, ಸದಸ್ಯರಾದ ಶ್ರೀಮತಿ ಶಾರದಾ ಕುಲಾಲ್, ಶ್ರೀಮತಿ ನಾಗರತಿ, ಕರಾವಳಿ ಕುಲಾಲರ ಯುವವೇದಿಕೆಯ ಅಧ್ಯಕ್ಷ ಜಗನ್ನಾಥ ಕುಲಾಲ್, ಕಾರ್ಯದರ್ಶಿ ಸುರೇಶ್ ಕುಲಾಲ್ ಹೆಬ್ಬಾಗಿಲುಮನೆ ಮುಂತಾದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳ ಅಡುಗೆಯ ಕೌಶಲ್ಯವನ್ನು ಶ್ಲಾಘಿಸಿದರು.

ಶಾಲೆಯ ಗೈಡ್ಸ್ ಮಾರ್ಗದರ್ಶಿ ಶಿಕ್ಷಕಿ ಶ್ರೀಮತಿ ಪ್ರತಿಮಾ ಜಿ.ಕಾರ್ಯಕ್ರಮ ಸಂಯೋಜಿಸಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ  ಮಂಜುನಾಥ ದೇವಾಡಿಗ, ಶಿಕ್ಷಕಿ ಶಶಿಕಲಾ, ಗೌರವ ಶಿಕ್ಷಕಿ ಕು.ವಿಜಯಲಕ್ಷ್ಮೀ ಹಾಗೂ ಶಾಲೆಯ ಅಡುಗೆ ಸಿಬ್ಬಂದಿ ಕಾರ್ಯಕ್ರಮಕ್ಕೆ ಸಹಕರಿಸಿದರು

ವರದಿ:ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)