ಉಡುಪಿ : ಸಿಐಟಿಯು ಸುವಣ೯ ಮಹೋತ್ಸವ ಹಾಗೂ ಕಾಮಿ೯ಕ ಚಳವಳಿಯ 100 ನೇ ವಷಾ೯ಚರಣೆಯ ಸಂಭ್ರಮ, ಕಾಮಿ೯ಕರು ಆಥಿ೯ಕ ಬೇಡಿಕೆ ಮಾತ್ರವಲ್ಲ , ರಾಜಕೀಯ ಬೇಡಿಕೆಗೆ ಜಾಗೃತರಾಗಿ ಹೋರಾಡಬೇಕು : ಡಾ.ಕೆ.ಪ್ರಕಾಶ್

0
282

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಬ್ರಿಟೀಷರ ವಿರುದ್ಧ ಹೋರಾಡಿ ಪಡೆದುಕೊಂಡ ಕಾಮಿ೯ಕರ ಪರ ಹಕ್ಕು ಹಾಗೂ ಕಾನೂನುಗಳನ್ನು ಕೇಂದ್ರ ಸರಕಾರ ಒಂದೊಂದನ್ನಾಗಿ ಕಿತ್ತುಕೊಳ್ಳುತ್ತಿರುವುದರಿಂದ ಕಾಮಿ೯ಕರು ಆಥಿ೯ಕ ಬೇಡಿಕೆ ಮಾತ್ರವಲ್ಲ ರಾಜಕೀಯ ಬೇಡಿಕೆಗಳಿಗೆ ಜಾಗ್ರತರಾಗಿ ಹೋರಾಡಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ/ಕೆ.ಪ್ರಕಾಶ್ ಹೇಳಿದರು. ಸಿಐಟಿಯು ಸುವಣ೯ ಮಹೋತ್ಸವ ಹಾಗೂ ಕಾಮಿ೯ಕ ಚಳವಳಿಯ 100 ನೇ ವಷಾ೯ಚರಣೆಯ ಅಂಗವಾಗಿ ಉಡುಪಿ,ಬನ್ನಂಜೆ ಶ್ರೀ ನಾರಾಯಣಗುರು ಸಭಾ ಭವನದಲ್ಲಿ ಹಮ್ಮಿಕೊಂಡ ಕಾಯ೯ಕ್ರಮದ ಸಮಾರಂಭವನ್ನು ಉದ್ಘಾಟಿಸಿ ಅವರುಮಾತನಾಡಿದರು. 

ಕಾಮಿ೯ಕ ಚಳವಳಿಗೆ ನೂರುವಷ೯ :ದೇಶದಲ್ಲಿ ಕಾಮಿ೯ಕ ಚಳವಳಿಗೆ 100 ವಷ೯ಗಳು ತುಂಬಿದೆ.ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅಧ್ಯಕ್ಷರಾಗಿದ್ದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೇಸ್ (ಎಐಟಿಯುಸಿ) 1920 ಅಕ್ಟೋಬರ್ ನಲ್ಲಿ ರಚನೆಯಾಗಿತ್ತು.ಅಂದಿನ ಕಾಮಿ೯ಕ ವಗ೯ ಬ್ರಿಟೀಷರ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಿದ್ದು, ದಾಖಲೆಗಳಿವೆ.ಬಾಲ ಗಂಗಾಧರ ತಿಲಕರನ್ನು 6 ವಷ೯ಗಳ ಕಾಲ ಜೈಲಿಗೆ ಕಳುಹಿಸಿದಾಗ ಸತತ 6 ದಿನಗಳ ಕಾಲ ಬಾಂಬೆ ಕಾಮಿ೯ಕರು ಮುಷ್ಕರ ನಡೆಸಿದರು.ಅಂತಹ ಸಮರಶೀಲ ಪರಂಪರೆಯನ್ನು ಸ್ವಾತಂತ್ರ್ಯದ ಬಳಿಕ ಮುಖಂಡತ್ವವು ಕೈ ಬಿಟ್ಟಿರಿರುವುದರಿಂದ ಸಿಐಟಿಯು ಅನಿವಾಯ೯ವಾಗಿ ಜನ್ಮ ತಾಳಿತು. ಆದರೆ ಐಕ್ಯತೆ ಮತ್ತು ಹೋರಾಟದ ಘೋಷಣೆ ಮೂಲಕ ಎಲ್ಲಾ ವಿಭಾಗದ,ಎಲ್ಲಾ ಕಾಮಿ೯ಕ ಸಂಘಟನೆಗಳ ಕಾಮಿ೯ಕರನ್ನು ಒಂದೇ ವೇದಿಕೆಯಲ್ಲಿ ತರಲು ಪ್ರಯತ್ನಿಸಿದ ಫಲವಾಗಿ ಜನವರಿ 8 ಅಖಿಲ ಭಾರತ ಸಾವ೯ತ್ರಿಕ ಮುಷ್ಕರ ಜಂಟಿ ಹೋರಾಟಕ್ಕೆ ಅಣಿ ನೆರೆಸುವಲ್ಲಿ ಸಿಐಟಿಯು ಪ್ರಮುಖ ಪಾತ್ರ ವಹಿಸಿದೆ. ಇದೀಗ ಕಾಮಿ೯ಕರ ಪರ ಕಾನೂನು ಕಸಿದುಕೊಳ್ಳುವ ಮೂಲಕ ಕಾಮಿ೯ಕ ಶಕ್ತಿ ದುಬ೯ಲಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಕೇಂದ್ರ ಸರಕಾರದ ಕಾಮಿ೯ಕ ವಿರೋಧಿ ಕಾನೂನುಗಳ ವಿರುದ್ಧ ಮಾತನಾಡುವವರನ್ನು ದೇಶ ದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಕಾಮಿ೯ಕರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.ಬ್ರಿಟೀಷ್ ಸರಕಾರಕ್ಕೂ ಈಗಿನ ನಮ್ಮ ಸರಕಾರಕ್ಕೂ ವ್ಯತ್ಯಾಸವೇ ಇಲ್ಲ, ಕೇಂದ್ರ ಸರಕಾರದ ಕಾಮಿ೯ಕ ವಿವಾದ ಬಿಲ್ ನಂತೆ ಖಾಯಂ ಕೆಲಸದ ಬದಲು ಗುತ್ತಿಗೆಪದ್ಧತಿ, ಬೋನಸ್ಸ್, ಭವಿಷ್ಯನಿಧಿ,ಇಎಸ್ಐ, ಗ್ರ್ಯಾಚುಟಿ ಕೊಡಬೇಕಾಗಿಲ್ಲ.ಈ ಸರಕಾರ ಕನಿಷ್ವ ವೇತನ ದಿನ ಒಂದರ ಕೇವಲ ರೂಪಾಯಿ 178=00 ನಿಗದಿ ಮಾಡಿರುವ ಕಾಮಿ೯ಕರ ಈ ವೇತನ ಒಪ್ಪಲು ಸಾಧ್ಯವೇ ಇಲ್ಲ. ಕೇಂದ್ರ ಸರಕಾರದ ಕಾಮಿ೯ಕ ವಿರೋಧಿ ನೀತಿಯ ವಿರುದ್ಧ ಮಾನಾಡಿದರೆ ಬ್ರಿಟೀಷರ ಕಾಲದ ದೇಶ ದ್ರೋಹದ ಕಾಯಿದೆ124 ಎ ಯಂತೆ ದೇಶ ದ್ರೋಹಿ ಎಂಬುದಾಗಿ ಕಾನೂನು ಕ್ರಮಜರಗಿಸಲಾಗುತ್ತಿದೆ.ಎಂದು ಡಾ/ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.

ಆದ್ದರಿಂದ ಕಾಮಿ೯ಕರ ಸಂಘಟನೆಯಲ್ಲಿ ತಲಪದೇ ಇರುವವರನ್ನ ತಲಪೋಣ,ಸಿಐಟಿಯು ಉದ್ದೇಶ, ಐಕ್ಯತೆ ಮತ್ತು ಹೋರಾಟವನ್ನು ಬಲಪಡಿಸೋಣ ಎಂದು ಅವರು ಕರೆ ನೀಡಿದರು. ಆಚರಣಾ ಸಮಿತಿಯ ಅಧ್ಯಕ್ಷ ಪಿ.ವಿಶ್ವನಾಥ ರೈ ಪ್ರಸ್ತಾವನೆಯ ಮಾತನಾಡಿದರು, ಸಿಐಟಿಯು ಜಿಲ್ಲಾ ಪ್ರಧಾನ ಕಾಯ೯ದಶಿ೯ ಸುರೇಶ ಕಲ್ಲಾಗರ್,ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಪ್ರಧಾನ ಕಾಯ೯ದಶಿ೯ ಪ್ರಭಾಕರ.ಬಿ.ಕುಂದರ್, ಬ್ಯಾಂಕ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ವಕೀಲ ಬಿ.ಎಂ.ಮಾಧವ ಸಭೆಯನ್ನುದ್ದೇಶಿಸಿ ಮಾತನಾಡಿದರು.ಸಿಐಟಿಯು ಉಡುಪಿ ತಾಲೂಕು ಉಪಾಧ್ಯಕ್ಷ ಶೇಖರ ಬಂಗೇರ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಸಿಐಟಿಯು ಮುಖಂಡರಾದ ಬಾಲಕೃಷ್ಣಶೆಟ್ಟಿ,ರಾಮಕಾಕ೯ಡ,ಸುಂದರಿ,ಕಮಲ,ಭಾರತಿ, ಉಪಸ್ಥಿತರಿದ್ದರು.ಸಭಾ ಕಾಯ೯ಕ್ರಮದ ಮುನ್ನ ಕಾಮಿ೯ಕರ ಬೃಹತ್ ಮೆರವಣಿಗೆ ,ಕೆ.ಎಂ.ಮಾಗ೯, ಶಿರಿಬೀಡು ದಾರಿಯಾಗಿ ಬನ್ನಂಜೆ ನಾರಾಯಣ ಗುರು ಸಭಾಭವನ ತಲಪಿತು,ಮೆರವಣಿಗೆಯ ಉದ್ದಕ್ಕೂ ರ್ಕಾಮಿ೯ಕರು ಕೇಂದ್ರ ಸರಕಾರದ ಕಾಮಿ೯ಕ ವಿರೋಧಿ ನೀತಿಗೆ ಧಿಕ್ಕಾರ ಘೋಷಣೆ ಕೂಗಿದರು.ಜನಪದ ಹಾಡುಗಾರ ನಾದಮಣಿ ನಾಲ್ಕೂರು ಇವರ ಕಂಠಶ್ರೀಯ ಸುಶ್ರಾವ್ಯ ಹಾಡು ಕಾಯ೯ಕ್ರಮಕ್ಕೆ ಹೆಚ್ಚಿನ ಮೆರಗು ನೀಡಿತು.ಕಾಮಿ೯ಕ ಮುಂದಾಳು ವಾಮನ ಪೂಜಾರಿ ಮತ್ತು ಸಂಗಡಿಗರಿಂದ ಮಾಯಾಜಾಲ ಮ್ಯಾಜಿಕ್ ಪ್ರದಶ೯ನ ಸಭಿಕರಿಗೆ ಮನರಂಜನೆ ನೀಡಿತು.

ಆಚರಣಾ ಸಮಿತಿ ಕೋಶಾಧಿಕಾರಿ ಶಶಿಧರ ಗೊಲ್ಲ ಎಲ್ಲರನ್ನುಸ್ವಾಗತಿಸಿದರು, ಕಾಯ೯ದಶಿ೯ ಕವಿರಾಜ್.ಎಸ್.ಕಾಯ೯ಕ್ರಮ ನಿರೂಪಿಸಿದರು.

ವರದಿ:ವೆಂಕಟೇಶ ಕೋಣಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)