ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರ್ ರವರು ಬೈಂದೂರು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

0
317

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು :  ಜೆಸಿರೆಟ್ ಅಧ್ಯಕ್ಷರಾದ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರ್ ರವರು ಬೈಂದೂರು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇವರು ಬಿ.ಜೆ ಕಮಲೇಶ್ ಬೆಸ್ಕೂರ್ ಅವರ ಧರ್ಮಪತ್ನಿಯಾಗಿದ್ದು ಇಂಜಿನಿಯರಿಗ್ ಪದವೀಧರೆಯಾಗಿದ್ದಾರೆ. ನಾಡ ಐಟಿಐನಲ್ಲಿ ಇಲೆಕ್ಟ್ರಾನಿಕ್ಸ್ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಸುತ್ತ ಸೌಪರ್ಣಿಕ ವಿವಿದೋದ್ದಶ ಮಹಿಳಾ ಸಹಕಾರಿ ಸಂಘ ತ್ರಾಸಿ ಇದರ ನಿರ್ದೇಶಕರಾಗಿದ್ದು, www.kollur.com ನ ಸಂಯೋಜಕಿಯಾಗಿದ್ದು, ಭಾರತೀಯ ಜನಾತ ಪಾರ್ಟಿ ಬೈಂದೂರು ಕ್ಷೇತ್ರದ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಹಾಗೂ ಸೈಂಟ್ ಥೋಮಸ್ ಶಾಲೆಯ ಪೋಷಕ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ.

ಅವರಿಗೆ ನಮ್ಮ ಹಾರ್ಧಿಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)