ವಂಡ್ಸೆ ಶಾಲೆಗೆ ರೋಟರಿ ಗ್ಲೋಬಲ್ ಗ್ರ್ಯಾಂಟ್‍ನ ಹೈಟೆಕ್ ಶೌಚಾಲಯ ಸಂಕೀರ್ಣ ಹಸ್ತಾಂತರ

0
158

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ರೋಟರಿ ಫೌಂಡೇಶನ್, ರೋಟರಿ ಜಿಲ್ಲೆ 7070, ರೋಟರಿ ಜಿಲ್ಲೆ 3182, ರೋಟರಿ ಕ್ಲಬ್ ವಷಾವಾ (ಪಾರ್ಕ್‍ವುಡ್) ಕೆನಡಾ ದೇಶ, ರೋಟರಿ ಕ್ಲಬ್ ವೈಟ್‍ಬೈ ಸನ್‍ರೈಸ್ ವತಿಯಿಂದ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಜೂರಾದ ಗ್ಲೋಬಲ್ ಗ್ರ್ಯಾಂಟ್ ಯೋಜನೆಯ ಕೊನೆಯ ಹಂತದ ಕೊಡುಗೆಯಾಗಿ ಆರು ಲಕ್ಷದ ಐವತ್ತು ಸಾವಿರ ರೂಪಾಯಿ ವೆಚ್ಚದ ಸುಸಜ್ಜಿತ ಶೌಚಾಲಯ ಸಂಕೀರ್ಣವನ್ನು ನಿರ್ಮಿಸಲಾಗಿದ್ದು ಅದನ್ನು ಶಾಲೆಗೆ ಹಸ್ತಾಂತರಿಸುವ ಕಾರ್ಯಕ್ರಮ ಫೆ.10 ನಡೆಯಿತು.

   

2018-19ರ ಸಾಲಿನ ರೋಟರಿ ಜಿಲ್ಲೆ 3182ರ ಗವರ್ನರ್ ಅಭಿನಂದನ್ ಶೆಟ್ಟಿಯವರು ಶೌಚಾಲಯ ಸಂಕೀರ್ಣದ ಫಲಕ ಅನಾವರಣಗೊಳಿಸಿ, ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡುತ್ತಲೇ ಬಂದಿದೆ. ಜಾಗತಿಕ ಮಟ್ಟದಲ್ಲಿ ಸೇವೆಗೆ ಇನ್ನೊಂದು ಹೆಸರು ರೋಟರಿಯಾಗಿದೆ. ಗ್ಲೋಬಲ್ ಗ್ರ್ಯಾಂಟ್ ದೊಡ್ಡ ಅನುದಾನವಾಗಿದ್ದು ಅದು ಈ ಶಾಲೆಗೆ ದೊರಕಿರುವುದು ಹೆಮ್ಮೆಯ ವಿಚಾರ. ಪ್ರಸ್ತುತ ತಲ್ಲೂರಿನ ನಾರಾಯಣ ವಿಶೇಷ ಮಕ್ಕಳ ಶಾಲೆಗೂ ಗ್ಲೋಬಲ್ 28 ಲಕ್ಷದ ಗ್ರ್ಯಾಂಟ್ ಮಂಜೂರಾಗಿದೆ ಎಂದರು.

ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷ ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷ ದೇವರಾಜ್, ಗ್ಲೋಬಲ್ ಗ್ರ್ಯಾಂಟ್ ಸಂಯೋಜಕರಾದ ಗಣೇಶ ಕಾಮತ್ ಗಂಗೊಳ್ಳಿ, ಶ್ರೀಧರ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಶಿಕ್ಷಣ ಸಂಯೋಜಕ ನಿತ್ಯಾನಂದ ಶೆಟ್ಟಿ, ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಸದಸ್ಯ ಸೀತಾರಾಮ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಎ.ಪಿ.ಎಂ.ಸಿ ಸದಸ್ಯ ಸಂಜೀವ ಪೂಜಾರಿ ವಂಡ್ಸೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂದೇಶ ಶೆಟ್ಟಿ ಅಡಿಕೆಕೊಡ್ಲು, ಗ್ರಾ.ಪಂ.ಸದಸ್ಯ ಉದಯ ಕೆ.ನಾಯ್ಕ್, ರೋಟರಿ ಸದಸ್ಯರು, ಎಸ್ಟಿಡಿಎಂಸಿ ಸದಸ್ಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಗ್ಲೋಬಲ್ ಗ್ರ್ಯಾಂಟ್ ಕಾರ್ಯಕ್ರಮದ ಸಂಯೋಜಕ ಜಿ.ಶ್ರೀಧರ್ ಶೆಟ್ಟಿ ಮಾತನಾಡಿ, ಈ ಶಾಲೆಗೆ ಗ್ಲೋಬಲ್ ಗ್ರ್ಯಾಂಟ್ ಮೂಲಕ ರೂ.16,50,000 ಮೌಲ್ಯದ ಶಾಲಾ ವಾಹನ, ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್, ಶಿಕ್ಷಕರುಗಳಿಗೆ ತಾಂತ್ರಿಕ ತರಬೇತಿ, ಇಂಗ್ಲಿಷ್ ಭೋದನೆಗೆ ತರಬೇತಿ ನೀಡಲಾಗಿದೆ. ಈ ಗ್ಲೋಬಲ್ ಗ್ರ್ಯಾಂಟ್ ಯೋಜನೆಯಲ್ಲಿ ರೋಟರಿ ಫೌಂಡೇಶನ್, ರೋಟರಿ ಜಿಲ್ಲೆ 7070, ರೋಟರಿ ಜಿಲ್ಲೆ 3182, ರೋಟರಿ ಕ್ಲಬ್ ವಷಾವಾ (ಪಾರ್ಕ್‍ವುಡ್) ಕೆನಡಾ ದೇಶ, ರೋಟರಿ ಕ್ಲಬ್ ವೈಟ್‍ಬೈ ಸನ್‍ರೈಸ್ ಭಾಗವಹಿಸಿವೆ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಗಾಣಿಗ ಸ್ವಾಗತಿಸಿ, ಶಾಲೆಯ ಮುಖ್ಯೋಪಾಧ್ಯಾಯ ಚಂದ್ರ ನಾಯ್ಕ್ ವಂದಿಸಿದರು. ಶಿಕ್ಷಕ ಸದಾಶಿವ ಕಾರ್ಯಕ್ರಮ ನಿರ್ವಹಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)