ಬಿಜೂರು: ಸುಮಾನವತಿ ನದಿಯ ಸೇತುವೆಗೆ ಕೌವ್ ಗೇಟ್ ಬೇಡಿಕೆ, ಬೀಡಾಡಿ ಜಾನುವಾರುಗಳ ಹಾವಳಿ ಕೃಷಿ ಚಟುವಟಿಕೆ ನಡೆಸಲು ಹಿನ್ನಡೆ

0
266

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಉಪ್ಪುಂದ : ಬಿಜೂರು ಗ್ರಾಮದ ಕಟ್ಟಿನ ಹೊಳೆ ಅಡ್ಡಲಾಗಿ ಬಹು ನಿರೀಕ್ಷಿತ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇದಕ್ಕೆ ಕೌವ್ ಗೇಟ್ ನಿರ್ಮಿಸಬೇಕೆಂಬ ರೈತರ ಕೂಗ್ಗಿಗೆ ಸ್ಪಂದನೆ ದೊರಕಿಲ್ಲ ಬಿಜೂರು ಹಾಗೂ ತಗ್ಗರ್ಸೆ ಗ್ರಾಮದ ನೂರಾರು ಎಕರೆ ಕೃಷಿ ಭೂಮಿಗೆ ನೀರು ಪೂರೈಸುವ ಸುಮಾನವತಿ ನದಿಗೆ ಬಿಜೂರಿನ ಅರೆಕಲ್ಲು ಬಳಿ ವ್ಯವಸ್ಥಿತ ಕಿಂಡಿ ಅಣೆಕಟ್ಟಿನೊಂದಿಗೆ ಸೇತುವೆ ನಿರ್ಮಾಣಗೊಂಡಿದೆ. ಇದು ಎರಡು ಗ್ರಾಮಗಳ ಸಂಪರ್ಕಕೊಂಡಿಯಾಗಿ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಆದರೆ ಇದರಿಂದಾಗಿ ಕೃಷಿಕರು ಮಾತ್ರ ಪರಿತಪಿಸುವಂತಾಗಿದೆ.

ಬೀಡಾಡಿ ಜಾನುವಾರುಗಳ ಹಾವಳಿ : ಬಿಜೂರು ಗ್ರಾಮದ ಅರೆಕಲ್ಲು. ಗರಡಿ, ನಿಸರ್ಗಕೇರಿ ಭಾಗದ ನೂರಾರು ಎಕರೆ ಹಾಗೂ ತಗ್ಗರ್ಸೆ ಗ್ರಾಮದ ಉದ್ದಾಬೆಟ್ಟು ಭಾಗದದಲ್ಲಿ ಹತ್ತಾರು ಎಕರೆ ಕೃಷಿ ಭೂಮಿಯಲ್ಲಿ ಕೃಷಿಕರು ಮಳೆಗಾಲದ ಬೆಳೆಯ ಬಳಿಕ ಎರಡನೇ ಸುಗ್ಗಿ ಬೆಳೆಯಾಗಿ ಭತ್ತ ಬೆಳೆಯುತ್ತಾರೆ. ಆದರೆ ಬೀಡಾಡಿ ಜಾನುವಾರುಗಳು ಕೃಷಿ ಗದ್ದೆಗಳಿಗೆ ನುಗ್ಗಿ ಭತ್ತ ಬೆಳೆಯನ್ನು ತಿಂದು ಹಾಕುವುದರ ಜೊತೆಗೆ ಗದ್ದೆ ತುಂಬಾ ಓಡಾಡಿ ಬೆಳೆಯನ್ನು ಹಾಳುಮಾಡುತ್ತದೆ.

ಕೌವ್ ಗೇಟ್ ಬೇಡಿಕೆ : ತಗ್ಗರ್ಸೆ, ಉದ್ದಾಬೆಟ್ಟು ಮುಂತಾದ ಭಾಗದಿಂದ ನೂರಾರು ಬೀಡಾಡಿ ಜಾನುವಾರುಗಳು ನಿತ್ಯ ರಾತ್ರಿ-ಹಗಲು ಎನ್ನದೆ ಈ ಸೇತುವೆ ಮೂಲಕ ಅರೆಕಲ್ಲು, ಗರಡಿ. ನಿಸರ್ಗಕೇರಿ ಭಾಗದ ಕೃಷಿ ಗದ್ದೆಗಳಿಗೆ ಬರುತ್ತದೆ. ಇಲ್ಲಿ ಕೌವ್ ಗೇಟ್ ಅಳವಡಿಸಿದರೆ ಜಾನುವಾರುಗಳ ಹಾವಳಿಯನ್ನು ತಪ್ಪಿಸಬಹುದು. ಕೃಷಿಯನ್ನು ಉಳಿಸಬಹುದು. ಇಲ್ಲದಿಂದರೆ ನಿತ್ಯ ಬರುವ ಜಾನುವಾರು ಹಾವಳಿಯನ್ನು ತಡೆಯುವುದು ಕಷ್ಟಸಾಧ್ಯ ಕೃಷಿಕರು ನಿತ್ಯ ತಮ್ಮ ಇತರೆ ಕೆಲಸಗಳನ್ನು ಬಿಟ್ಟು ಗದ್ದೆಗಳಲ್ಲಿ ಬೀಡುಬಿಟ್ಟು ಕಾಯಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಈ ಭಾಗದ ರೈತರು. ಇದರಿಂದ ಭೂಮಿ ಹಡಿಲು ಬೀಳುವ ಸಾಧ್ಯತೆ ಇರುತ್ತದೆ. ಕೌವ್ ಗೇಟ್ ಅಳವಡಿಕೆಯಿಂದ ಹತ್ತಾರು ಎಕ್ರೆ ಕೃಷಿ ಭೂಮಿಗೆ ವರದಾನವಾಗಲಿದೆ ಎನ್ನುವ ಅಭಿಪ್ರಾಯ ರೈತರದ್ದು.

6ಕೋಟಿ ವೆಚ್ಚದ ವೆಂಟೆಡ್ ಡ್ಯಾಂ : ಇಲ್ಲಿನ ರೈತರು ಸುಮನಾವತಿ ನದಿಯ ಕಿಂಡಿ ಅಣೆಕಟ್ಟಿನ ಹಿನ್ನನೀರನ್ನು ನಂಬಿಕೊಂಡು ಸುಗ್ಗಿ ಬೆಳೆ ಬೆಳೆಯಲು ಮುಂದಾಗುತ್ತಾರೆ. ಕಿಂಡಿ ಅಣೆಕಟ್ಟು ದುಸ್ಥಿತಿಗೆ ತಲುಪಿದ ಕಾರಣ ನೀರು ಸೋರಿಕೆಯಾಗಿ ನೀರಿನ ಸಂಗ್ರಹ ಮಟ್ಟದಲ್ಲಿ ಕಡಿಮೆಯಾಗುತ್ತಿತು. ಇದರಿಂದ ಕೃಷಿ ಚಟುವಟಿಕೆ ನಡೆಸಲು ಸಮಸ್ಯೆ ಎದುರಾಗಿತ್ತು. ಅಂದಿನ ಶಾಸಕ ಗೋಪಾಲ ಪೂಜಾರಿ ಅವರಿಗೆ ಇಲ್ಲಿನ ರೈತರ ಮನವಿ ಮೇರೆಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ 6.6ಕೋಟಿ ವೆಚ್ಚದಲ್ಲಿ ಆಟೋಮ್ಯಾಟಿಕ್ ಗೇಟ್ ನಿರ್ಮಾಣಗೊಂಡಿತು.

ಸ್ವಯಂ ಚಾಲಿತ ಗೇಟ್ ಅಳವಡಿಕೆ ವಿಳಂಬ : ಡ್ಯಾಂ ಜೊತೆಗೆ ಕಾಲುವೆ ಕಾಂಕ್ರಿಟೀಕರಣ, ನದಿಯ ಬದಿಗೆ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಆಟೋಮ್ಯಾಟಿಕ್ ಕ್ರಸ್ಟ್ ಗೇಟ್ ಅಳವಡಿಕೆ ವಿಳಂಬಕೊಂಡಿತ್ತು. ಈ ಬಾರಿ ಸ್ಥಳೀಯರು ಅಸಮಾಧಾನ ವ್ಯಕ್ತಪಡಿರುವುದರಿಂದ ತುರ್ತು ಕ್ರಮ ಕೈಗೊಂಡಿದ್ದಾರೆ. ಇದರ ಕೆಲಸ ಪೂರ್ಣಗೊಳ್ಳದಿರುವುದು ನೀರು ಸೋರಿಕೆಯಾಗುತಿದೆ. ಈ ಬಾರಿಯೂ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಉದ್ಬವಿಸುವ ಲಕ್ಷಣ ಕಂಡುಬರುತ್ತಿರವುದರಿಂದ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೌವ್‍ಗೇಟ್ ಅಳವಡಿಸದೆ ಇರುವುದರಿಂದ ಬೀಡಾಡಿ ಜಾನುವಾರುಗಳ ಹಾವಳಿಂದ ಕೃಷಿಯನ್ನು ಮುಂದುವರಿಸಲು ಸಾಧ್ಯವಿಲ್ಲ. ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಕೌವ್‍ಗೇಟ್ ಅಳವಡಿಕೊಡುವ ಭರವಸೆ ನೀಡಿದ್ದಾರೆ – ರಾಜೇಂದ್ರ ಎಸ್.ಬಿಜೂರು ಸ್ಥಳೀಯರು.

ಕ್ರಸ್ಟ್ ಗೇಟ್‍ಗೆ ಆರ್ಡ್‍ರ್ ಮಾಡಲಾಗಿದ್ದು ಇದರ ಯಂತ್ರೋಪಕರಣಗಳು ಇನ್ನಷ್ಟೇ ಬರಬೇಕಿದೆ. ಬಳಿಕ ಕೆಲಸ ಪ್ರಾರಂಭಸುತ್ತೇವೆ. ಕ್ರಸ್ಟ್‍ಗೇಟ್ ಕಾಮಗಾರಿ ಸಂದರ್ಭ ಕೌವ್‍ಗೇಟ್ ಅಳವಡಿಕೆ ಮಾಡಲಾಗುತ್ತದೆ. ರೈತರಿಗೆ ಸಮಸ್ಯೆಯಾಗದಂತೆ ತುರ್ತು ವ್ಯವಸ್ಥೆ ಮಾಡಿಕೊಡಲಾಗಿದೆ. ಸದ್ಯದಲ್ಲೇ ಮೆಷಿನ್ ಬರಲಿದ್ದು ಸಾಧ್ಯವಾದಷ್ಟು ಬೇಗ ಕೆಲಸ ಪೂರ್ಣಗೊಳಿಸಲಾಗುವುದು – ಜಯಶೀಲ ಶೆಟ್ಟಿ ಗುತ್ತಿಗೆದಾರರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)