ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ಮರವಂತೆಯಲ್ಲಿ ಸ್ವಚ್ಚತಾ ಅಭಿಯಾನ

0
896

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹಸಿರು ಪರಿಸರದಿಂದ ಸೃಷ್ಟಿಯಾದ ಭೂಮಿಯು ಮಾನವನ ಅವೈಜ್ಞಾನಿಕ ಮನೋಭಾವನೆಯಿಂದ ತ್ಯಾಜ್ಯದ ರಾಶಿಯಾಗಿ ಮಾರ್ಪಟ್ಟಿದೆ ವಿಶೇಷವಾದ ಪರಿಕಲ್ಪನೆಯಿಂದ ಜಾರಿಯಾದ ಸ್ವಚ್ಚ ಭಾರತ ಯೋಜನೆ ವಿಶ್ವದಲ್ಲಿ ದೊಡ್ಡ ಜನಜಾಗೃತಿ ಅಭಿಯಾನವನ್ನೆ ಹುಟ್ಟು ಹಾಕಿದೆ,ಶಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರು ಇದರ ಒಂಭತ್ತು ವಿದ್ಯಾರ್ಥಿಗಳ ತಂಡ ಅವಿಸಾ ಚಾರಿಟೇಬಲ್ ಟ್ರಸ್ಟ್ ನ ಮುಖಾಂತರ ಬೈಂದೂರು ತಾಲೂಕಿನ ಮರವಂತೆ ಗ್ರಾಮ ಪಂಚಾಯತ್ ಗೆ ಭೇಟಿ ಕೊಟ್ಟು ಮನೆ ಮನೆಗೆ ತೆರಳಿ ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಆಗುವ ಹಾನಿಯ ಕುರಿತು ಅರಿವನ್ನು ಮೂಡಿಸಿದರು,ದೇವಸ್ಥಾನದ ಆವರಣದಲ್ಲಿ,ರಸ್ತೆಯ ಇಕ್ಕೆಲಗಳಲ್ಲಿ ಎಸೆಯಲ್ಪಟ್ಟ ಕಸವನ್ನು ಹೆಕ್ಕಿ ಪರಿಸರವನ್ನು ಸುಚಿಗೊಳಿಸುದರ ಮುಖಾಂತರ ಸ್ವಚ್ಚ ಭಾರತ ಅಭಿಯಾನದ ಆಶಯವನ್ನು ಜನರಿಗೆ ಮನದಟ್ಟು ಮಾಡಿಕೊಟ್ಟರು

ವಿದ್ಯಾರ್ಥಿಗಳ ಜೊತೆಗೆ ಸಂವಾದ : ಮರವಂತೆಯ ಹೈಸ್ಕೂಲ್ ಮತ್ತು ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟ ತಂಡ ಇಂಗ್ಲಿಷ್ ಮತ್ತು ಬೇಸಿಕ್ಸ್ ಕಂಪ್ಯೂಟರ್ ಶಿಕ್ಷಣದ ತರಬೇತಿ ನೀಡಿ ಸ್ವಚ್ಚ ಭಾರತ ಅಭಿಯಾನದ ಮಹತ್ವವನ್ನು ಮಕ್ಕಳಿಗೆ ವಿವರಿಸಿ ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿ ಮಾಡಲು ಸಹಕರಿಸಿ ಎನ್ನುವ ಸಂದೇಶ ನೀಡಿದರು.
ತಂಡದ ಸದಸ್ಯರಾದ ಮಿಸ್ಟರ್ ಶ್ರೀನಾಥ್, ಮನೋಜ್ ಭಟ್, ಸೌಂದರ್ಯ ಎಸ್.ಪಿ, ಹರ್ಷಿತಾ,ಹೊಳ್ಳ ಶ್ರೇಯಾ ವಿ, ರೇವತಿ ಆರ್,ವಿ ಪಾಟೀಲ್, ಅಚ್ಯುತ್,ಕೆ.ಕಾವ್ಯ,ಜೀವನ್ ಸಿ.ಎನ್ ಉಪಸ್ಥಿತರಿದ್ದರು.

ರಸ್ತೆ ಬದಿಯಲ್ಲಿ ಜನರು ವಿವೇಚನೆ ಇಲ್ಲದೆ ಕಸವನ್ನು ಎಸೆಯುತ್ತಾ ಇದ್ದಾರೆ ಇನ್ನಷ್ಟು ಜನಜಾಗೃತಿ ಅಗತ್ಯವಿದೆ ಸ್ವಯಂ ಪ್ರೇರಿತರಾಗಿ ಕಸವನ್ನು ಎಲ್ಲೆಂದರಲ್ಲಿ ಎಸೆಯುದನನ್ನು ನಿಲ್ಲಿಸಬೇಕು : ಸೌಂದರ್ಯ ಎಸ್.ಪಿ ಇಂಜಿನಿಯರಿಂಗ್ ವಿದ್ಯಾರ್ಥಿ

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)