ಹೆಮ್ಮಾಡಿ : ಸರ್ವೀಸ್ ರಸ್ತೆ ಹಾಗೂ ಯೂಟರ್ನ್ ನೀಡಲು ಆಗ್ರಹಿಸಿ ಪಾದಯಾತ್ರೆ

0
334

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಕುಂದಾಪುರ ತಾಲೂಕಿನ ಹೆಮ್ಮಾಡಿ ಪರಿಸರದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಸಮಸ್ಯೆಗಳ ಮಹಾಪೂರವನ್ನೇ ತಂದೊಡ್ಡಿ ಬಿಟ್ಟಿದೆ, ಭಯದಿಂದ ರಸ್ತೆಯನ್ನು ದಾಟಬೇಕಾಗಿದ್ದು ಎಲ್ಲಿ ಜವರಾಯ ಮೈಮೇಲೆ ಬಂದು ಎರುಗುವನು ಎಂಬ ಭೀತಿಯಾ ವಾತಾವರಣ ಸೃಷ್ಟಿಯಾಗಿದ್ದು, ಸಾರ್ವಜನಿಕರ ಬೇಡಿಕೆಗೆ, ಮನವಿಗೆ ಸ್ಪಂದಿಸದೆ ಇರುವ ಗುತ್ತಿಗೆ ಕಂಪೆನಿ ಹಾಗೂ ಹೆದ್ದಾರಿ ಪ್ರಾಧಿಕಾರ ಮನೊಸೋಇಚ್ಚೆ ಕೆಲಸ ನಿರ್ವಹಿಸುತ್ತಿದ್ದು ಅಗತ್ಯ ಕ್ರಮಗಳನ್ನು ಜಾರಿಗೆ ತರದೆ ಜನರನ್ನು ಗೋಳುಹೋಯಿಸಿ ಕೊಳ್ಳುತ್ತಿದೆ

ಕರಾವಳಿಯ ಪ್ರಕ್ರತಿಯ ಸೌಂದರ್ಯದ ಮಡಿಲಲ್ಲಿ ಹಾದು ಹೋದ ಎನ್.ಎಚ್ 66 ರಲ್ಲಿ ಯಾವಾಗ ಚತುಷ್ಪಥ ಕಾಮಗಾರಿ ಪ್ರಾರಂಭವಾಯಿತೊ ಅಂದಿನಿಂದ ಸ್ಥಳೀಯರಿಗೆ ವಾಹನ ಸವಾರರಿಗೆ ಸಮಸ್ಯೆಗಳು ಒಂದೊಂದಾಗಿ ಕಾಡಲು ಆರಂಭವಾಯಿತು, ಅಭಿವೃದ್ಧಿಯ ಹೆಸರಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದೆ ನೆಮ್ಮದಿಯ ಬದುಕಿಗೆ ಬಿಸಿ ನೀರನ್ನು ಚೆಲ್ಲಿ ಮನದ ಭಾವನೆಯೊಳಗೆ ಹೋರಾಟದ ಕಿಚ್ಚನ್ನು ಹತ್ತಿಸಿ ಬಿಟ್ಟಿದೆ.

ಗ್ರಾಂ ಪಂಚಾಯತ್ ಗೆ ಮುತ್ತಿಗೆ : ಹೆಮ್ಮಾಡಿ ಪೇಟೆಯಲ್ಲಿ ಎರಡು ಕಡೆ ರಸ್ತೆಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಸಂತೋಷನಗರ,ಜಾಲಾಡಿ ನಿವಾಸಿಗಳು ಹೆಮ್ಮಾಡಿಯಿಂದ ಮನೆ ತಲುಪಬೇಕಾದರೆ ತಲ್ಲೂರು ಸರ್ಕಲ್ ಸುತ್ತುವರಿದು ಬರಬೇಕಾದ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ, ಇದರಿಂದಾಗಿ ಶಾಲಾ ವಿದ್ಯಾರ್ಥಿಗಳಿಗೆ, ಉದ್ಯೋಗಕ್ಕೆ ತೆರಳುವವರಿಗೆ ಆಸ್ಪತ್ರೆಗೆ ಹೋಗುವವರಿಗೆ ತುಂಬಾ ತೊಂದರೆಯಾಗಿದ್ದು ದಿನ ನಿತ್ಯದ ಪ್ರಯಾಣ ಪ್ರಾಯಸಪಡುವಂತೆ ಆಗಿದೆ ಏಕಮುಖ ಸಂಚಾರದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗುವುದರಿಂದ ಅನಾಹುತ ಸಂಭವಿಸುವ ಅಪಾಯವಿದ್ದು ಸಂಭಾವನೀಯ ದುರಂತಗಳು ಸಂಭವಿಸುವ ಮುನ್ನವೇ ಎಚ್ಚರಗೊಳ್ಳ ಬೇಕಾಗಿದೆ ಈಗಾಗಲೇ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿವೆ.

ಹಲವಾರು ಬಾರಿ ಹೆದ್ದಾರಿ ಪ್ರಾಧಿಕಾರಕ್ಕೆ ಮತ್ತು ಗುತ್ತಿಗೆ ನಿರ್ವಹಿಸುವ ಕಂಪೆನಿಗೆ ಮನವಿಯನ್ನು ನೀಡಿದರು ಜನಾಗ್ರಕ್ಕೆ ಸ್ಪಂದನೆ ದೊರೆತ್ತಿಲ್ಲ ಈ ಹಿಂದೆ ಪಂಚಾಯತ್ ಗೆ ಮುತ್ತಿಗೆ ಹಾಕಿ ಮೂರು ದಿನಗಳ ಗಡುವು ನೀಡಿದರು ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ ಬೆಳವಣಿಗೆ ಸಹ ಕಂಡುಬಂದಿಲ್ಲ

ಜಾಲಾಡಿಯಲ್ಲಿ ಯೂಟರ್ನ್ ಮಾಡಬೇಕು ಹೆಮ್ಮಾಡಿ ಪೇಟೆಯಿಂದ ಜಾಲಾಡಿ ತನಕ ಸರ್ವೀಸ್ ರಸ್ತೆ ನಿರ್ಮಾಣ ಆಗಬೇಕೆಂದು ದಾರಿಗಾಗಿ ಹೋರಾಟ ದ್ವನಿ ಸಮೀತಿ ನೆತೃತ್ವದಲ್ಲಿ ಜಾಲಾಡಿಯಿಂದ ಹೆಮ್ಮಾಡಿ ತನಕ ಸುಮಾರು ಎರಡು ಕಿಲೊಮೀಟರ್ ವರೆಗೆ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಕಾಲ್ನಡಿಗೆಯ ಮೂಲಕ ಘೋಷಣೆಗಳನ್ನು ಕೂಗುತ್ತ ಗ್ರಾಮ ಪಂಚಾಯಿತಿಗೆ ಮುತ್ತಿಗೆಯನ್ನು ಹಾಕಿದರು

ಬೇಡಿಕೆ ಈಡೇರಿಸದೆ ಇದ್ದರೆ ಕೆಲಸ ನಿರ್ವಹಿಸಲು ಬಿಡೆವು : ಹೋರಾಟ ಸಮೀತಿಯ ಗೌರವ ಅಧ್ಯಕ್ಷರಾದ ಕೆಂಚನೂರು ಸೋಮಶೇಖರ್ ಶೆಟ್ಟಿ ಪ್ರತಿಭಟನೆಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಮೂವತ್ತು ಮೂಡಿಯಿಂದ ಜಾಲಾಡಿ ತನಕ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಕೊಡಬೇಕು,ರಸ್ತೆಯ ನೀಲಿ ನಕಾಶೆಯನ್ನು ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆ ನಿರ್ವಹಿಸುವ ಕಂಪೆನಿ ಸರಿಯಾಗಿ ಮಾಡದೆ ಇರುವುದರಿಂದ ಕುಂದಾಪುರದಿಂದ ಶಿರೂರಿನ ತನಕ ಸಮಸ್ಯೆ ತಾಂಡವ ಆಡುತ್ತಿದೆ ನಮ್ಮ ಬೇಡಿಕೆಗೆ ಸ್ಪಂದನೆ ಮಾಡದೆ ಇದ್ದರೆ ಹೆಮ್ಮಾಡಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲು ಬಿಡೆವು ಎಂದು ಐಆರ್ಬಿ ಕಂಪೆನಿಗೆ ಎಚ್ಚರಿಕೆ ನೀಡಿದರು.

ಹೆಮ್ಮಾಡಿಗೆ ದೊಡ್ಡ ಅನ್ಯಾಯ ಶಶಿಧರ್ ಹೆಮ್ಮಾಡಿ : ಕಾಮಗಾರಿ ಮುಗಿಯುತ್ತಾ ಬಂದರು ಸರ್ವೀಸ್ ರಸ್ತೆ ನಿರ್ಮಾಣ ಆಗಿಲ್ಲ ಅತ್ಯಂತ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಹೆಮ್ಮಾಡಿಗೆ ಸರ್ವೀಸ್ ರಸ್ತೆ ಅತಿ ಅಗತ್ಯವಾಗಿದೆ, ಎಲ್ಲರಿಗೂ ತುಂಬಾ ತೊಂದರೆಯಾಗಿದೆ ನಮ್ಮ ಬೇಡಿಕೆ ಪೂರ್ಣಗೊಳ್ಳದೆ ಇದ್ದರೆ ಹೋರಾಟ ಮುಂದುವರಿಯಲಿದೆ ಕೈ ಬಿಡುವ ಪ್ರಶ್ನೆಯೇ ಇಲ್ಲ ಅಧಿಕಾರಿಗಳು ಜನತೆಗಿಂತ ದೊಡ್ಡವರಲ್ಲ ಜನರ ಸಮಸ್ಯೆಗೆ ಸ್ಪಂದನೆ ಮಾಡುವುದು ಅವರ ಕೆಲಸವಾಗಿದೆ, ಸ್ಥಳೀಯ ಜನರ ಮನವಿಗೆ ಬೆಲೆಕೊಟ್ಟು ಕೆಲಸ ನಿರ್ವಹಿಸಿ ಜನರಿಂದ ದೇಶ ನಿರ್ಮಾಣವಾಗಿದೆ ನಾವು ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಾ ಇದ್ದೇವೆ ನಮ್ಮ ಶಾಸಕರು ಸ್ಥಳೀಯ ಆಡಳಿತ ಜನರ ಹಿತ ದೃಷ್ಟಿಯಿಂದ ಸಮಸ್ಯೆಗೆ ಇತಿ ಶ್ರೀ ಹಾಡಲು ಶ್ರಮಿಸಬೇಕು ಎಂದರು

ತಾ‌.ಪಂ ಸದಸ್ಯ ರಾಜು ದೇವಾಡಿಗ ಸ್ಥಳಕ್ಕೆ ಭೇಟಿ ಕೊಟ್ಟು ಜನರ ಮನವಿಯನ್ನು ಆಲಿಸಿದರು.

ಇವೊಂದು ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ರಾಜು ಪೂಜಾರಿ ಕಾಳೂರು ಮನೆ, ಉಪಾಧ್ಯಕ್ಷರಾದ ಸಯ್ಯದ್ ಯಾಸಿನ್, ಕಾರ್ಯದರ್ಶಿ ಜನಾರ್ಧನ ಪೂಜಾರಿ,ಯು ಸತ್ಯನಾರಾಯಣ ರಾವ್ ಮತ್ತು ಊರ ಗ್ರಾಮಸ್ಥರು ಉಪಸ್ಥಿತರಿದ್ದರು

ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಶಾಸಕರಿಗೆ,ಉನ್ನತಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ,ಐ.ಆರ್.ಬಿ ಕಂಪೆನಿಗೆ ಮನವಿಯನ್ನು ನೀಡಲಾಯಿತು

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)