ದಲಿತರ ಗ್ರಾಮ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳ ಗೈರು – ಸಭೆಯನ್ನು ಬಹಿಷ್ಕರಿಸಿ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ ದಲಿತರು

0
48

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಖಂಬದಕೋಣೆ ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ದಲಿತರ ಗ್ರಾಮ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳ ಗೈರು ಹಾಗೂ ವಿಳಂಬವಾಗಿ ಆಗಮಿಸಿರುವುದಕ್ಕೆ ದಲಿತರು ಸಭೆಯನ್ನು ಬಹಿಷ್ಕರಿಸಿರುವ ಘಟನೆ ಬುಧುವಾರ ನಡೆದಿದೆ.
ಕೆಲವು ಜನ ಪ್ರತಿನಿಧಿ ಹೊರತು ಪಡಿಸಿ, ನೋಡಲ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆಯವರು ಆಗಮಿಸದ ಕಾರಣ ದಲಿತರು ಸಭೆಯನ್ನು ಬಹಿಷ್ಕರಿಸಿ, ಪಂಚಾಯತ್‍ನ ಎದರು ಪ್ರತಿಭಟಿನೆ ನಡೆಸಿದರು.
ಈ ಸಂದರ್ಭ ಕೆಲವು ಅಧಿಕಾರಿಗಳು ಆಗಮಿಸಿದರು ಸಹ ಸಭೆ ನಡೆಸಲು ಒಪ್ಪಿಗೆ ನೀಡದೆ. ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹೆರಂಜಾಲು, ಹಳಗೇರಿ, ಖಂಬದಕೋಣೆಯ ಪ್ರದೇಶದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಚಗೊಳಿಸದೇ ಕಲುಷಿತ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೀರಿನ ಟ್ಯಾಂಕ್‍ನಲ್ಲಿ ಮಣ್ಣು, ಕಬ್ಬಿಣದ ವಸ್ತುಗಳು ಬಿದ್ದಿದ್ದು, ನೀರಿನ ಟ್ಯಾಂಕ್ ಸ್ವಚ್ಚಗೊಳಿಸದೆ ಅದೇ ನೀರನ್ನು ನೀಡಲಾಗುತ್ತಿದೆ ಎಂದು ಶಿವರಾಮ ದೂರಿದರು. ದಲಿತರ ಸಭೆಯನ್ನು ಮರು ಸಮಯ ನಿಗದಿಗೊಳಿಸಿ, ಎಲ್ಲಾ ಅಧಿಕಾರಿಗಳು ಬರುವಂತೆ ಮಾಡಬೇಕು ಬೇಕು ಎಂದು ಆಗ್ರಹಿಸಿದರು.

ದಲಿತರ ಗ್ರಾಮ ಸಭೆಯ ಕುರಿತು ಎಲ್ಲ ಅ„ಕಾರಿಗಳಿಗು ಮಾಹಿತಿ ನೀಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ, ನೋಡಲ್ ಅ„ಕಾರಿಯವರು ಇಲಾಖೆಯ ಕರ್ತವ್ಯ ನಿರ್ಹಹಣೆಯಿಂದಾಗಿ ಸ್ವಲ್ಪ ಬರುವುದು ವಿಳಂಬವಾಗಿದೆ. ನೋಡಲ್ ಅಧಿಕಾರಗಳ ಗಮನಕ್ಕೆ ತಂದು ಶೀಘ್ರದಲ್ಲಿ ದಲಿತರ ಗ್ರಾಮ ಸಭೆ ನಡೆಸಲಾಗುವುದು – ಪೂರ್ಣಿಮ ಪಿಡಿಓ ಖಂಬದಕೋಣೆ ಗ್ರಾ.ಪಂ.

ಹೇರಂಜಾಲು ಭಗದಲ್ಲಿ ಕಲುಷಿತ ಕುಡಿಯುವ ನೀರಿ ಬಗ್ಗೆ ಸಮರ್ಪಕ ಮಾಹಿತಿ ಇರಲಿಲ್ಲ. 2-3ದಿನಗಳಲ್ಲಿ ನೀರಿನ ಟ್ಯಾಂಕ್ ಸ್ವಚ್ಚಗೊಳಿಸಿ ಶುದ್ಧ ಕುಡಿಯವ ನೀರು ಪೂರೈಲಾಗುವುದು- ಅನಂದ ಬಿಲ್ಲ ಆಧ್ಯಕ್ಷ ಗ್ರಾ.ಪಂ.ಕಂಬದಕೋಣೆ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)