ಮರವಂತೆ : ಆವರಣ ಗೋಡೆಗೆ ಪ್ಲಾಸ್ಟಿಕ್ ಬಾಟಲಿಯ ತೋರಣ 

0
354

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಪಂಚಾಯತ್ ತನ್ನ ದಕ್ಷ ಕಾರ್ಯ ಶೈಲಿಯಿಂದಲೇ ದೇಶದಲ್ಲಿ ಮಾದರಿ ಪಂಚಾಯತ್ ಎನ್ನುವ ಹೆಗ್ಗಳಿಕೆ ಪಡೆದು ಕೊಂಡಿದೆ, ಹಲವಾರು ರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದಿದ್ದು ಹೊಸತನವನ್ನು ಅಳವಡಿಸಿ ಕೊಳ್ಳುವುದರಲ್ಲಿ ಯಾವಾಗಲೂ ಮುನ್ನೆಲೆಯಲ್ಲಿ ಗುರುತಿಸಿಕೊಂಡಿರುವ ಮರವಂತೆ ಗ್ರಾಮ ಪಂಚಾಯತ್ ವಿಶಿಷ್ಟ ರೀತಿಯಲ್ಲಿ ಕೆಲಸವನ್ನು ಯಶಸ್ವಿಯಾಗಿ ಮಾಡುದರ ಮುಖಾಂತರ ಸುದ್ದಿಯಲ್ಲಿ ಸದ್ದು ಮಾಡಿದೆ

ನಿರುಪಯುಕ್ತ ತ್ಯಾಜ್ಯದಿಂದ ಕಾಂಪೌಂಡ್ ನಿರ್ಮಾಣ : ಭೂಮಿ ಮೇಲಿನ ಮತ್ತು ಒಳಗಿನ ಸಂಪನ್ಮೂಲಗಳನ್ನು ಕೆಲವೊಂದು ಸಂಶೋಧನೆಗಳ ಮೂಲಕ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತೇವೆ,ಭೂ ಗರ್ಭದೊಳಗೆ ಅಡಗಿರುವ ಖನಿಜ ಸಂಪನ್ಮೂಲಗಳು ಕಚ್ಚಾತೈಲಗಳು ಇಂದು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ, ತ್ಯಾಜ್ಯಗಳನ್ನು ತ್ಯಾಜ್ಯ ಎಂದು ಪರಿಗಣಿಸಿದರೆ ಅದೊಂದು ನಿರುಪಯುಕ್ತ ವಸ್ತು, ಜ್ಞಾನದಿಂದ ಬಳಸಿಕೊಂಡರೆ ಅದೊಂದು ಉಪಯುಕ್ತ ಸಂಪನ್ಮೂಲ ಕೊಳೆತ ಹಸಿರು ತರಕಾರಿ, ಪ್ಲಾಸ್ಟಿಕ್,ಸತ್ತ ಪ್ರಾಣಿ ಮತ್ತು ಸಸ್ಯ ಜನ್ಯಗಳನ್ನ ಪ್ರತ್ಯೇಕವಾಗಿ ವರ್ಗಿಕರಿಸಿದರೆ ಅದನ್ನು ಮರುಬಳಕೆಯಲ್ಲಿ ಸೂಕ್ತವಾದ ರೀತಿಯಲ್ಲಿ ಬಳಸಿಕೊಳ್ಳಬಹುದ್ದೇನ್ನುದಕ್ಕೆ ಹಲವಾರು ಪ್ರಾತ್ಯಾಕ್ಷಿತೆಗಳು ಇದಕ್ಕೆ ನಿದರ್ಶನವಾಗಿದೆ‌‌.

ಮರವಂತೆಯ ಎಸ್ಎಲ್ಆರ್ಎಂ ಘಟಕದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಆವರಣಗೋಡೆ ನಿರ್ಮಾಣ : ಸುಮಾರು 750 ನಿರುಪಯುಕ್ತ ಖಾಲಿ ಬಿಸ್ಲೇರಿ ಬಾಟಲಿಗಳನ್ನು ಬಳಸಿಕೊಂಡು ಸುಮಾರು 10 ಹತ್ತು ಮೀಟರ್ ಉದ್ದದ 4 ಪೀಟ್ ಎತ್ತರದ ಕಾಂಪೌಂಡ್ ನ್ನು 1 ಮೆಸ್ತ್ರಿಯ ಸಹಾಯದೊಂದಿಗೆ ನಿರ್ಮಿಸಲಾಗಿದೆ ಅರ್ಧ ವಿನೀಟ್ ಹೊಯಿಗೆ ಬಳಕೆಯಾಗಿದ್ದು, ಎರಡು ಚೀಲ ಸಿಮೆಂಟ್, ಅರವತ್ತು ಕೆಂಪು ಕಲ್ಲುಗಳನ್ನು ಬಳಸಿಕೊಳ್ಳಲಾಗಿದ್ದು, ಒಂದು ತರಹದ ಕಲ್ಲನ್ನು ತಳಭಾಗದಲ್ಲಿ ಕಟ್ಟಿ ನಾಲ್ಕು ತರಹದ ಕಲ್ಲುಗಳನ್ನು ಆಧಾರಕ್ಕಾಗಿ ಮೂರು ಕಂಬಗಳನ್ನು ಮಾಡಿ ಮದ್ಯದಲ್ಲಿ ಮರಳು ತುಂಬಿದ ಬಾಟಲಿಗಳನ್ನು ಒಂದರ ಮೆಲೊಂದು ಜೋಡಿಸಿ ಸಿಮೆಂಟ್ ಮಿಶ್ರಿತ ಕಾಂಕ್ರಿಟ್ ಅನ್ನು ಬಳಸಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ

ಇವೊಂದು ಸಂದರ್ಭದಲ್ಲಿ ಪಂ.ಅದ್ಯಕ್ಷರಾದ ಅನಿತಾ ಆರ್.ಕೆ,ಪಿ.ಡಿ.ಒ ರಿಯಾಜ್ ಅಹ್ಮದ್, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಪಂ‌.ಸಿಬ್ಬಂದಿ ವರ್ಗ ಮತ್ತು ಅವಿಶಾ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)