ಜಟ್ಟಿಗೇಶ್ವರ ಯುವಕ ಸಂಘ (ರಿ) ವಿದ್ಯಾನಗರ ಇದರ ೭ನೇ ವರ್ಷದ ವಾರ್ಷಿಕೋತ್ಸವದ ಸಭಾಕಾರ್ಯಕ್ರಮವನ್ನು ಗಣೇಶ ಕಾರಂತರು ಉದ್ಘಾಟಿಸಿದರು.
ನಮ್ಮ ದೇಶದಲ್ಲಿ ೭೦% ಯುವಕರಿದ್ದಾರೆ. ಅವರು ಸರಿಯಾದ ಮಾರ್ಗದಲ್ಲಿ ಸಾಗಿ ಹಿರಿಯರು ಸೈನಿಕರು ಹಾಗೂ ಗುರುಗಳಿಗೆ ಮಾರ್ಗದರ್ಶನಕ್ಕೆ ಸದಾ ಬದ್ಧರಿರಬೇಕು. ಹಾಗಿದ್ದಲ್ಲಿ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆ.ಸಿ.ಬೈಂದೂರು ಸಿಟಿಯ ಅಧ್ಯಕ್ಷರಾದ ಪ್ರಿಯದರ್ಶಿನಿ ದೇವಾಡಿಗ ಉಪಸ್ಥಿತರಿದ್ದರು.
ಯುವಕರಲ್ಲಿ ಸಮಾಜದ ಸೇವೆಯ ಮನೋಭಾವನೆ ಬೆಳೆಯಬೇಕು. ಸರಕಾರದ ಸೌಲಭ್ಯಗಳನ್ನು ನಿಮ್ಮ ಮನೆ, ಕೇರಿ ಹಾಗೂ ಊರಿಗೆ ತಲುಪಿಸಲು ಕೊಂಡಿಯತೆ ಕೆಲಸ ಮಾಡಬೇಕು ಎಂದರು.
ವೇದಿಕೆಯಲ್ಲಿ ಬೈಂದೂರು ಪಂಚಾಯತ್ ಅಧ್ಯಕ್ಷೆ ಬಾಗೀರಥಿ ಸುರೇಶ್, ಜಟ್ಟಗೇಶ್ವರ ಯುವಕ ಸಂಘದ ಅಧ್ಯಕ್ಷ ವಾಸುದೇವ ಆಚಾರ್ಯ, ಗೌರವಾಧ್ಯಕ್ಷ ದಿನಕರ ಹಾಗೂ ಉಪಾಧ್ಯಕ್ಷ ಅಮಿನ್, ದೇವಸ್ಥಾನ ಆಡಳಿತ ಮುಖ್ಯಸ್ಥರಾದ ಕೃಷ್ಣಯ್ಯ ಶೆಟ್ಟಿ ಉಪಸ್ಥಿತರಿದ್ದರು.
ಭೋಜ್ರಾಜ್ ಕಾರ್ಯಕ್ರಮ ನಿರೂಪಿಸಿದರು, ಸುನಿಲ್ ಸ್ವಾಗತಿಸಿದರು, ಗೌತಮ ವಂದಿಸಿದರು.