ಮರವಂತೆ ಮಾರಸ್ವಾಮಿ ದೇವಸ್ಥಾನದ ಬಳಿಯ ತಿರುವ ಅಪಾಯಕಾರಿ

0
195

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (2) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ರಸ್ತೆ ಅಗಲೀಕರಣಕ್ಕೆ , ಶಾಶ್ವತ ಯುಟರ್ನ್‍ಗೆ ಮನವಿ / ಸೇತುವೆಯಿಂದ ರಾ,ಹೆದ್ದಾರಿ ನೇರ ಸಂಪರ್ಕಕ್ಕೆ ಆಗ್ರಹ

ಉಪ್ಪುಂದ : ಮರವಂತೆ ವರಾಹ ಮಹಾರಾಜ ಸ್ವಾಮಿ ದೇವಸ್ಥಾನದ ಮುಖಮಂಟಪ ಬಳಿ ಇರುವ ಕ್ರಾಸ್ ಹಾಗೂ ರಾ.ಹೆದ್ದಾರಿಯ ಸಂಪರ್ಕಿಸು ಸ್ಥಳ ಇಳಿಜಾರಿನಿಂದ ಕೂಡಿರುವುದರಿಂದ ವಾಹನಗಳ ಸಂಚಾರಕ್ಕೆ ತೀರಾ ಅಪಾಯಕಾರಿಯಾಗಿ ಮಾರ್ಪಟ್ಟಿದೆ.
ಚತುಷ್ಪಥ ಹೆದ್ದಾರಿ ಕಾಮಗಾರಿ ಸಂದರ್ಭ ದೇವಸ್ಥಾನದ ಬಳಿ ಇರುವ ಅಪಾಯಕಾರಿ ಕ್ರಾಸ್‍ನಲ್ಲಿ ಸಾರ್ವಜನಿಕರ ಸುರಕ್ಷತೆ ಆದ್ಯತೆ ನೀಡದೇ ಕಾಮಗಾರಿ ನಡೆಸಿರುವುದರಿಂದ ವಾಹನಗಳ ಅಪಘಾತಕ್ಕೆ ಎಡೆಮಾಡಿಕೊಡುತ್ತದೆ ಎಂದು ಸ್ಥಳೀಯ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ಮರವಂತೆ ಬೀಚ್ ಮತ್ತು ವರಾಹ ಸ್ವಾಮಿ ದೇಗುಲದ ನಡುವೆ ಹಾದುಹೋಗುವ ಚತುಷ್ಪಥ ರಸ್ತೆ ನಡುವೆ ಡಿವೈಡರ್‍ನಲ್ಲಿ ಪ್ರವೇಶ ಹಾದಿ ಕಲ್ಪಿಸಲಾಗಿದೆ. ಬೈಂದೂರು-ಕುಂದಾಪುರದಿಂದ ಆಗಮಿಸುವ ವಾಹನಗಳು ಮಾರಾಸ್ವಾಮಿ ದೇವಸ್ಥಾನದ ಎದುರಿನ ರಸ್ತೆಯ ಮೂಲಕ ನಾಡಾ, ಆಲೂರು, ಕೊಲ್ಲೂರು ಮಾರ್ಗವಾಗಿ ಸಂಚರಿಸುವ ವಾಹನಗಳು ಮುಖಾಮುಖಿಯಾಗುತ್ತದೆ. ಮುಖಮಂಟಪದ ಎದುರು ಭಾಗದಲ್ಲಿಯೇ ಬಸ್‍ಗಳು ನಿಲ್ಲಿಸುವುದರಿಂದ ನಾಡಾ ಮಾರ್ಗವಾಗಿ ಬರುವ ವಾಹನಗಳು ಡಿವೈಡ್‍ರ್ ಪ್ರವೇಶಿಸಬೇಕಾದರೆ ವಾಹನಗಳ ಸವಾರರು ಎಚ್ಚರ ವಹಿಸಬೇಕಾಗುತ್ತದೆ. ಇದು ಇಳಿಜಾರು ಆಗಿರುವುದರಿಂದ ಸ್ವಲ್ಪ ಎಡವಿದರು ಅವಘಡಕ್ಕೆ ದಾರಿಮಾಡಿಕೊಟ್ಟಹಾಗೆ ಆಗುತ್ತದೆ.

ಇನ್ನು ಬೈಂದೂರಿನಿಂದ ಕುಂದಾಪುರಕ್ಕೆ ಬರುವ ವಾಹನಗಳು ಮರವಂತೆ ಬೀಚ್‍ನಲ್ಲಿ ಸ್ವಲ್ಪ ಸಮಯ ಕಳೆಯಲು ನೇರವಾಗಿ ಎಡದಿಂದ ಬಲಕ್ಕೆ ತಿರುಗಿಸಿ ಬೀಚ್‍ನ ಕಡೆಗೆ ವಾಹನ ತಿರುಗಿಸುತ್ತಾರೆ. ಡಿವೈಡರ್ ನಡುವೆ ವಾಹನಗಳು ಅಪಘಾತಕ್ಕೆ ಸಿಲುಕುವ ದೃಶ್ಯ ಮಾಮೂಲಿಯಾಗಿದೆ.

ಸುರಕ್ಷತೆಗೆ ಬೇಕು ಆದ್ಯತೆ : ಮರವಂತೆ ದೇವಸ್ಥಾನದ ಬಳಿ ಕ್ರಾಸ್‍ನಲ್ಲಿ ಯಾವುದೇ ಸುರಕ್ಷತೆಗಾಗಿ ಕ್ರಮ ಕೈಗೊಡಿಲ್ಲ. ಪ್ರವಾಸಿಗರು, ಭಕ್ತಾ„ಗಳು ಹಾಗೂ ನಾಡ, ಪಡುಕೋಣೆ ಕಡೆಗೆ ಪ್ರಯಾಣ ಬೆಳೆಸುವ ಗ್ರಾಮಸ್ಥರು, ವಾಹನಗಳ ಸವಾರರು ಈ ಕ್ರಾಸ್‍ನಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ನಾಡ ಮೂಲಕ ರಾ.ಹೆದ್ದಾರಿ ಸಂ„ಸುವ ವಾಹನಗಳು, ದೇವಸ್ಥಾನಕ್ಕೆ ಬರುವ ವಾಹನಗಳು, ಹೆದ್ದಾರಿಯಲ್ಲಿ ನೇರವಾಗಿ ಹೋಗುವ ವಾಹನಗಳು ಈ ತಿರುವಿನಲ್ಲಿ ಎಡವುತ್ತಿರುವುದು ಕಂಡುಬಂದಿದೆ. ಇಲ್ಲನ ಡಿವೈಡರ್ ಅಗಲೀಕರಣಗೊಳಿಸಿ ಸೂಚನ ಫಲಕಗಳನ್ನು ಆಳವಡಿಸುವ ಕಾರ್ಯ ನಡೆಯಬೇಕಿದೆ.
ಬ್ಯಾರಿಕೇಡ್ ಅಳವಡಿಸಿ : ರಾ.ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ವಾಹನಗಳ ವೇಗ ಮಿತಿ ತಡೆಯಲು ಇಲ್ಲಿ ರಸ್ತೆ ಉಬ್ಬು ರಚಿಸಬೇಕು ಎನ್ನುವ ಬೇಡಿಕೆಗೆ ಇದುವರೆಗೂ ಮಾನ್ಯತೆ ಹೆದ್ದಾರಿ ಎರಡು ಕಡೆಗೆ ಬ್ಯಾರಿಕೇಡ್ ಅಳವಡಿಸುವ ಮೂಲಕ ಸಂಭವನೀಯ ಅಪಘಾತಗಳನ್ನು ತಡೆಯಬೇಕೆಂಬ ಮನವಿಗೂ ಯಾವುದೇ ಪ್ರಯೋಜನಾ ದೊರಕಿಲ್ಲ.ಇಲ್ಲಿನ ಅಪಘಾತ ನಡೆಯುವುದನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯು ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶಾಶ್ವತ ‘ಯು’ ಟರ್ನ್ ಬೇಕು : ನಿರ್ಮಾಣ ಹಂತದಲ್ಲಿರುವ ಚತುಷ್ಪಥ ಹೆದ್ದಾರಿಯಲ್ಲಿ ಮರವಂತೆಯ ಜಕ್ಕನಕಟ್ಟೆ ಮತ್ತು ತ್ರಾಸಿ ಜಂಕ್ಷನ್ ನಡುವಿನ ದೂರ 3.5 ಕಿಲೋಮೀಟರುಗಳು. ಹೆದ್ದಾರಿಯಲ್ಲಿ ಈ ಎರಡು ಕಡೆ ‘ಯು’ ತಿರುವು ನೀಡಲಾಗಿದೆ. ಇವುಗಳ ನಡುವೆ ಮಾರಸ್ವಾಮಿ ಸೇತುವೆ ಹಾಗೂ ವರಾಹ ದೇವಸ್ಥಾನ ಇರುವ ಸ್ಥಳದಲ್ಲಿ ತಾತ್ಕಾಲಿಕ ನೆಲೆಯಲ್ಲಿ ನೀಡಲಾದ ಯು’ ತಿರುವನ್ನು ಮುಚ್ಚು ವ ಮಾಹಿತಿ ಪಡೆದ ಸ್ಥಳೀಯರು ಆತಂಕಗೊಂಡು ಹಿರಿಯರ ನೇತೃತ್ವದಲ್ಲಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರನ್ನು ಭೇಟಿಯಾಗಿ ಅಲ್ಲಿಯ ಯು ತಿರುವನ್ನು ಖಾಯಂ ಆಗಿ ಉಳಿಸುವ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಸಂದರ್ಭ ಶಾಸಕರು ಯಾವುದೇ ಕಾರಣಕ್ಕೂ ಮಾರಸ್ವಾಮಿಯ ‘ಯು’ ತಿರುವನ್ನು ಮುಚ್ಚಬಾರದೆಂದು ಹೆದ್ದಾರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸೇತುವೆ ಬಳಿಯ ಜಾಗದವರು ಕಾನೂನು ಹೋರಾಟದಲ್ಲಿ ಇರುವುದರಿಂದ ತೀವ್ರ ಸಮಸ್ಯೆ ಉಂಟಾಗಿದೆ. ಇಳಿಜಾರು ರಸ್ತೆ ಇರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಸೇತುವೆಯಿಂದ ರಾ,ಹೆದ್ದಾರಿಗೆ ನೇರ ಸಂಪರ್ಕ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ. ನಿತ್ಯ ಸಾವಿರಾರು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಕುರಿತ ಜನಪ್ರನಿಧಿಗಳು, ಇಲಾಖೆಗಳು ಇತ್ತ ಗಮನ ಹರಿಸಬೇಕು. – ರಾಮಚಂದ್ರ ಹೆಬ್ಬಾರ ಮರವಂತೆ ಶ್ರೀ ಮಾರಾಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ.
ಸ್ಥಳೀಯರು ಊರಿನ ದಾನಿಗಳ ಸಹಾಯ ಪಡೆದು ಬ್ಯಾರಿಕೇಡ್ ಅಳವಡಿಸಬಹುದು. ಕೆಲವುಕಡೆ ಬ್ಯಾರಿಕೇಡ್‍ನಿಂದಲ್ಲೂ ಸಮಸ್ಯೆಯಾಗುತ್ತದೆ ಎಂದು ಸಾರ್ವಜನಿಕರೇ ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಆದರೆ ಸಾರ್ವಜನಿಕರ ಸುರಕ್ಷತೆಯೇ ನಮಗೆ ಮುಖ್ಯವಾಗಿದೆ. ಈ ಸ್ಥಳದಲ್ಲಿ ಸಿಗ್ನಲ್, ಸೂಚನಾ ಫಲಕ ಅಳವಡಿಸುವಂತೆ ಐಆರ್‍ಬಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ – ವಾಸಪ್ಪ ನಾಯ್ಕ ಠಾಣಾಧಿಕಾರಿ ಗಂಗೊಳ್ಳಿ ಪೆÇಲೀಸ್ ಠಾಣೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (2) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)