ಸ.ಹಿ.ಪ್ರಾ.ಶಾಲೆ ವಜ್ರಮಹೋತ್ಸವ ಉದ್ಘಾಟನೆ ಕಾರ್ಯಕ್ರಮ

0
173

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮೆಟ್ಟಿನಹೊಳೆ: ವಜ್ರಮಹೋತ್ಸವ- ವಜ್ರ ವೈಭವ 2020 ಉದ್ಘಾಟನೆ ಬೈಂದೂರು ವಲಯದ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆ ಮೆಟ್ಟಿನಹೊಳೆ ಈ ಶಾಲೆಯಲ್ಲಿ ವಜ್ರಮಹೋತ್ಸವವು ಇತ್ತೀಚೆಗೆ ನಡೆಯಿತು.

ಜನಪದ ವಸ್ತು ಪ್ರದರ್ಶನ ಹಾಗೂ ವಜ್ರ ವೈಭವ ಕಾರ್ಯಕ್ರಮವನ್ನು ತಿರುಮಲ ಸಿದ್ಧಿವಿನಾಯಕ ದೇವಾಲಯ ಹೇರಂಜಾಲು ಇಲ್ಲಿನ ಪ್ರಧಾನ ಅರ್ಚಕರಾದ ಶ್ರೀಧರ ಜೋಯಿಸರು ದೀಪಪ್ರಜ್ವಲನ ಹಾಗೂ ತೆಂಗಿನ ಹೂವನ್ನು ಅರಳಿಸುವುದರ ಮೂಲಕ ಉದ್ಘಾಟಿಸಿದರು.

ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಶ್ರೀ ಸೀತಾರಾಮ ಕುಲಾಲ್ ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಮ್.ಸಿ.ಉಪಾಧ್ಯಕ್ಷ  ದಿನೇಶ್ ಆಚಾರ್ಯ ಪೂರ್ವಾಹ್ನದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಸುವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯಲು ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ಮುಖ್ಯ ಅತಿಥಿ ಗಳಾಗಿ ಕಂಬದಕೋಣೆ ಸಿ.ಆರ್.ಪಿ. ಶ್ರೀಕಾಂತ್ ಕಾಮತ್, ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕರಾದ  ರಾಮ ಗಾಣಿಗ ಬಾರ್ಕೂರು, ಸೂಲಿಯಣ್ಣ ಶೆಟ್ಟಿ, ಕುಷ್ಟು ಬಿಲ್ಲವ, ಗೋಪಾಲ ಕೃಷ್ಣ ಗಾಣಿಗ ಉಪಸ್ಥಿತರಿದ್ದು.

ಉದ್ಯಮಿಗಳಾದ  ಉದಯ ಕುಲಾಲ್,  ಗಣೇಶ್ ಕುಲಾಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಬಡಿಯ ಹಾಂಡ, ಪ್ರತಾಪ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದು ಶುಭಕೋರಿದರು. ಉದ್ಯಮಿ ಬಾಬುರಾವ್ ಹಾಂಡ ಬಹುಮಾನ ವಿತರಿಸಿದರು.

ಶಿಕ್ಷಕ ಶ್ರೀ ರಾಮ ಶೆಟ್ಟಿ ಧನ್ಯವಾದ ಸಮರ್ಪಣೆ ಮಾಡಿದರು.ಶಿಕ್ಷಕರಾದ ಶ್ರೀ ಚಂದ್ರ ದೇವಾಡಿಗ ಮತ್ತು ಶ್ರೀಮತಿ ಶಶಿಕಲಾ, ಗೌರವ ಶಿಕ್ಷಕಿ ಕು.ವಿಜಯಲಕ್ಷ್ಮಿ ಸಹಕರಿಸಿದರು. ವಜ್ರಮಹೋತ್ಸವ ವಿಶೇಷ ಕಾರ್ಯಕ್ರಮವಾಗಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ ನಡೆಸಿದ್ದು, ಬಿ.ಆರ್.ಸಿ.ಬೈಂದೂರಿನ ಬಿ.ಆರ್.ಪಿ.ಶ್ರೀ ಎನ್.ಕರುಣಾಕರ ಶೆಟ್ಟಿ ಹಾಗೂ ಸಿ.ಆರ್.ಪಿ.ಶ್ರೀ ಲೋಕೇಶ್ ರವರು ರಾಜ್ಯಮಟ್ಟದ ರೀತಿಯಲ್ಲಿ ಅದ್ಭುತವಾಗಿ ನಡೆಸಿಕೊಟ್ಟರು.10000 ರೂ. ಆಕರ್ಷಕ ನಗದು ಬಹುಮಾನಗಳನ್ನು ವಿಜೇತರಿಗೆ ವಿತರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ ದೇವಾಡಿಗ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಪ್ರತಿಮಾ ಜಿ.ಕಾರ್ಯಕ್ರಮ ನಿರೂಪಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)