ಪೂರ್ಣಪ್ರಜ್ಞ ಕಾಲೇಜು ಹಳೆವಿದ್ಯಾರ್ಥಿಸಂಘದ ವತಿಯಿಂದ ಪ್ರೈಡ್ ಆಫ್ ಪಿ.ಪಿ.ಸಿ ವಿದ್ಯಾರ್ಥಿವೇತನ ಸಮಾರಂಭ

0
137

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶಿಲ್ಪಿ, ಶಿಲೆಯಿಂದ ಸುಂದರ ಕಲಾಕೃತಿಗಳನ್ನು ನಿರ್ಮಿಸುವಂತೆ ಅರ್ಪಣಾ ಮನೋಭಾವದ ಶಿಕ್ಷಕರಿಂದ ಸಾಧಕ ವಿದ್ಯಾರ್ಥಿಗಳು ಸೃಷ್ಠಿಯಾಗುತ್ತಾರೆ. ಪೂರ್ಣಪ್ರಜ್ಞಾ ಕಾಲೇಜು ದಶಕಗಳಿಂದ ಈ ಕೆಲಸ ಮಾಡುತ್ತಾ ಬಂದಿದೆ. ಇಂದು ನಮ್ಮೊಂದಿಗಿರುವ ಗಣ್ಯ ಹಳೆವಿದ್ಯಾರ್ಥಿಗಳೇ ಪ್ರತ್ಯಕ್ಷ ನಿದರ್ಶನ ಎಂದು ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪೂರ್ಣಪ್ರಜ್ಞ ಕಾಲೇಜು ಹಳೆ ವಿದ್ಯಾರ್ಥಿಸಂಘದ ವತಿಯಿಂದ ಜನವರಿ 10, 2020 ಶುಕ್ರವಾರ ಅಪರಾಹ್ನ 3.00ಕ್ಕೆ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆದ ಪ್ರೈಡ್ ಆಫ್ ಪಿ.ಪಿ.ಸಿ ಹಾಗೂ ವಿದ್ಯಾರ್ಥಿವೇತನ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿ ಮಾತನಾಡಿದರು.

ಈ ಸಮಾರಂಭದಲ್ಲಿ ಕಾಲೇಜಿನ ಪ್ರಾಕ್ತನ ಸಾಧಕ ಹಳೆವಿದ್ಯಾರ್ಥಿಗಳಾದ ಶ್ರೀ ಕೆ.ಪ್ರಕಾಶ್ ಶೆಟ್ಟಿ ಬೆಂಗಳೂರು, ಶ್ರೀ ರಮೇಶ್ ರಾವ್ ಉಡುಪಿ, ಶ್ರೀ ಬಿ.ಜಿ. ಮೋಹನ್‍ದಾಸ್ ಮಣಿಪಾಲ, ಶ್ರೀ ಜಯರಾಮ ಶೆಟ್ಟಿ ಶಿರೂರು, ಶ್ರೀಮತಿ ಕೆ. ಉಷಾ ಪಿ. ರೈ ಬೆಂಗಳೂರು, ಶ್ರೀ ಶ್ರೀಧರ ಕಾಮತ್ ಉಡುಪಿ ಹಾಗೂ ಶ್ರೀ ತೇಜಸ್ವಿ ಶಂಕರ್ ಇವರಿಗೆ ‘ಪ್ರೈಡ್ ಆಫ್ ಪಿ.ಪಿ.ಸಿ. 2020’ ಗೌರವ ಫಲಕ ನೀಡಿ ಅಭಿನಂದಿಸಲಾಯಿತು.

ಕಾಲೇಜಿನ ನಿವೃತ್ತ ಪ್ರಾಂಶುಪಾಲರುಗಳಾದ ಡಾ. ಜಗದೀಶ್ ಶೆಟ್ಟಿ, ಡಾ. ಎ.ಪಿ. ಭಟ್ ಹಾಗೂ ಉಪನ್ಯಾಸಕಿ ಶ್ರೀಮತಿ ಶಾಂತಿ ಲೂಯಿಸ್. ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರತಿಭಾವಂತ 80 ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರೂಪಾಯಿ ಸಹಾಯಧನ ನೀಡಲಾಯಿತು.

ಕಾಲೇಜಿನ ಮ್ಯಾನೇಜಿಂಗ್ ಕಮಿಟಿಯ ಡಾ ಜಿ.ಎಸ್. ಚಂದ್ರಶೇಖರ, ಪ್ರಾಂಶುಪಾಲ ಡಾ. ರಾಘವೇಂದ್ರ ಎ., ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕರು, ಕಾಲೇಜಿನ ಪ್ರಾಧ್ಯಾಪಕರು, ಹಳೆ ವಿದ್ಯಾರ್ಥಿ ಸದಸ್ಯರು ಉಪಸ್ಥಿತರಿರುವರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ ಬಿ.ಎಂ. ಸೋಮಯಾಜಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ಕರಬ ವಿದ್ಯಾರ್ಥಿ ವೇತನ ಪಟ್ಟಿ ವಾಚಿಸಿದರು. ವಿದ್ಯಾವಂತ ಆಚಾರ್ಯ ಸಮ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಸನ್ನ ಅಡಿಗ ಧನ್ಯವಾದ ಸಲ್ಲಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)