ಪಂಜರದಲ್ಲಿ ಮೀನು ಕೃಷಿಯತ್ತ ಮೀನುಗಾರರ ಚಿತ್ತ

0
230

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಉಪ್ಪುಂದ : ಮೀನುಗಾರಿಕೆ ಕ್ಷೇತ್ರದಲ್ಲಿ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಮತ್ತು ಪೌಷ್ಠಿಕ ಆಹಾರದ ದೃಷ್ಟಿಯಿಂದ ಹೊಸ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಮೀನು ಕೃಷಿಯನ್ನು ಮಾಡಲಾಗುತ್ತಿದೆ. ಮಂಗಳೂರು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನೆ ಸಂಸ್ಥೆ ಸಾಂಪ್ರದಾಯಿಕ ಮೀನುಗಾರರ ಆದಾಯ ವೃದ್ಧಿಗಾಗಿ ದಶಕಗಳ ಹಿಂದೆ ಪಂಜರದ ಮೀನು ಕೃಷಿಯ ಕಡೆಗೆ ಗಮನ ಹರಿಸಿತ್ತು.

ಸಮುದ್ರದಲ್ಲಿ ಪಂಜರದ ಕೃಷಿಯನ್ನು 1950ರಲ್ಲಿ ಪ್ರಥಮವಾಗಿ ಜಪಾನ್ ದೇಶವು ಪ್ರಾರಂಭಿಸಿದೆ. ಬಳಿಕ 1980ರಲ್ಲಿ ಉತ್ತರ ಯೂರೋಪ್ ಮತ್ತು ಉತ್ತರ ಅಮೇರಿಕಾ ಪಂಜರದಲ್ಲಿ ಸಾಲ್ಮನ್ ಮೀನು ಕೃಷಿಯನ್ನು ಪ್ರಾರಂಭಿಸಿತ್ತು. ಪ್ರಪಂಚಾದ್ಯಂತ ಸಮುದ್ರ ಪಂಜರ ಕೃಷಿಯಲ್ಲಿ ಶೇ.90ರಷ್ಟು ಕುರುಡಿ ಮತ್ತು ಸೀ ಬ್ರೀಮ್ ತಳಿಯನ್ನು ಉಪಯೋಗಿಸಲಾಗುತ್ತಿದೆ.

ಭಾತರದಲ್ಲಿ ಮೊಟ್ಟ ಮೊದಲ ಬಾರಿಗೆ 2007ರಲ್ಲಿ ವಿಶಾಖಪಟ್ಟದಲ್ಲಿ ಸಿಎಮ್‍ಎಫ್‍ಆರ್‍ಐ ಅವರು ಪಂಜರದಲ್ಲಿ ಮೀನು ಕೃಷಿಯನ್ನು ಪ್ರಾಯೋಗಿಕವಾಗಿ ನಡೆಸಿದರು. ಪ್ರಸ್ತುತ ಗುಜರಾತ್, ಮಹಾರಾಷ್ಟ್ರ, ಕೇರಳ, ಕರ್ನಾಟಕ, ರಮಿಳನಾಡು, ಆಂದ್ರಪ್ರದೇಶ ಮತ್ತು ಒರಿಶಾ ರಾಜ್ಯಗಳಲ್ಲಿ ಯಶಸ್ವಿಯಾಗಿ ಮಾಡಲಾಗುತ್ತಿದೆ.

ಕರಾವಳಿಯಲ್ಲಿ ಪಂಜರ ಮೀನು ಕೃಷಿಯ ಮೂಲಕ ಉತ್ಪಾದನೆ ಹೆಚ್ಚಿಸುವಲ್ಲಿ ಮಂಗಳೂರು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನೆ ಸಂಸ್ಥೆ ಪಂಜರ ಮೀನು ಕೃಷಿ ಉತ್ಪಾದನೆಯ ತಂತ್ರಜ್ಜಾನ ಅಭಿವೃದ್ಧಿಪಡಿಸಿತು. 2008ರಲ್ಲಿ ಈ ವಿಧಾನವನ್ನು ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಬÉೈಂದೂರು ತಾಲೂಕಿನ ಉಪ್ಪುಂದ ಗ್ರಾಮದಲ್ಲಿ ಆರಂಭಿಸಿತ್ತು.
ಉಪ್ಪು ನೀರಿನ ಪ್ರದೇಶದಲ್ಲಿ ಪಂಜರ ಮೀನು ಕೃಷಿಯು ಮೀನುಗಾರರನ್ನು ಸೆಳೆಯುವಲ್ಲಿ ಸಫಲತೆಯನ್ನು ಕಂಡಿದೆ. ಇಂದು ಕೊಡೇರಿ, ಕರ್ಕಿಕಳಿ, ಮಡಿಕಲ್,ಅಮ್ಮನವರತೋಪ್ಲು, ತಾರಾಪತಿ ಭಾಗದಲ್ಲಿ ಸುಮಾರು 700ರಿಂದ 800 ಮಂದಿ ಪಂಜರ ಮೀನು ಕೃಷಿ ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜಾಗ ಆಯ್ಕೆ ಹೇಗೆ? : ಇದನ್ನು ಬೆಳೆಯಲು ಪಂಜರಗಳನ್ನು ಸಿಹಿ ನೀರಿನಲ್ಲಿ, ಸಮುದ್ರದಲ್ಲಿ, ಹಿನ್ನೀರಿನಲ್ಲಿ , ಚೌಳು ನೀರಿನಲ್ಲಿ ಮತ್ತು ಅಳಿವೆಗಳಲ್ಲಿ ಅಳವಡಿಸಿ ಮೀನು ಸಾಕಣಿ ಮಾಡಲು ಸೂಕ್ತವಾಗಿರುತ್ತದೆ. ನೀರಿನ ಆಳ 3-5ಮೀಟರ್ ಇರಬೇಕು. ನೀರಿನ ಒಳ ಹರಿವು ನಿರಂತರವಾಗಿದ್ದಲ್ಲಿ ಕರಗಿದ ಆಮ್ಲಜನಕ ಯೆಥೇಚ್ಚವಾಗಿ ದೊರಕುವುದಲ್ಲದೆ ಯಾವುದೇ ತ್ಯಾಜ್ಯ ಪಂಜರದಲ್ಲಿ ಉಳಿಯಲು ಬಿಡುವುದಿಲ್ಲ.

ಪಂಜರದ ನಿರ್ಮಾಣ : ಸಾಮಾನ್ಯವಾಗಿ ಆಯತಾಕಾರದ 6*2ಮೀ. ಗಾತ್ರದ ಜಿ.ಐ. ಪೈಪ್‍ಗಳಿಂದ ತಯಾರಿಸಲಾದ ಪಂಜರವನ್ನು ಉಯೋಗಿಸಲು ಯೋಗ್ಯವಾಗಿರುತ್ತದೆ. ಪಂಜರದ ಹೊರ ಪದರ ನಿರ್ಮಾಣಕ್ಕೆ ಹೆಚ್.ಡಿ.ಪಿ.ಇ. ಮೆಷ್ 48ಎಂ.ಎಂ. ಬಳಸಲಾಗುತ್ತದೆ. ಒಳ ಪದರವನ್ನು ಮೆಷ್ 18-20ಎಂ.ಎಂ. ಗಾತ್ರದ ನೆಟ್ಟನ್ನು ಉಪಯೋಗಿಸಲಾಗುತ್ತದೆ.

ಬೆಳೆಯುವ ತಳಿ : ಕುರುಡಿ ಮೀನು, ಕೆಂಬೇರಿ ಮೀನು, ಕೋಬಿಯಾ ಪ್ರಮುಖವಾದ ತಳಿಗಳು. ಆದರೆ ಎಲ್ಲಾ ತಳಿಗಳ ಮರಿಗಳು ಸಿಗುವುದಿಲ್ಲ. ಕುರುಡಿ ಮೀನು ಮರಿಗಳನ್ನು ರಾಜೀವ್ ಗಾಂ„ ಸೆಂಟರ್ ಫಾರ್ ಅಕ್ವಾ ಕಲ್ಚರ್ ( ಆರ್‍ಜೆಸಿಎ) ವಿಶಾಖಪಟ್ಟಣ/ಚೆನ್ನೈನಲ್ಲಿ ಮಾತ್ರ ಲಭ್ಯವಿರುತ್ತದೆ. ಅಲ್ಲಿಂದ 2.5ಸೆಂ.ಮೀ.5.5ಸೆಂ.ಮೀ. ಗಾತ್ರದ ಮರಿಗಳನ್ನು ಖರೀದಿಸಲಾಗುತ್ತದೆ. ಮೀನು ಮರಿಗಳ ಮೌಲ್ಯವು ಗಾತ್ರಕ್ಕೆ ತಕ್ಕಂತೆ ಇರುತ್ತದೆ. ಪ್ರತೀ ಮೀನಿಗೆ ರೂ.1ರಿಂದ4ತನಕ ಇರುತ್ತದೆ.

ಕುರುಡಿ ಮೀನಿನ ವಿಶೇಷತೆಗಳು  : ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಅತೀ ಬೇಡಿಕೆ ಮತ್ತು ಬೆಲೆಯುಳ್ಳ ತಳಿ, ಹೆಚ್ಚು ಇಳುವರಿ, ಶೀಘ್ರ ಬೆಳವಣಿಗೆ, ಸ್ಥಳೀಯ ಆಹಾರಕ್ಕೆ ಹೊಂದಿಕ್ಕೊಳ್ಳತ್ತದೆ. 0-40ಪಿ.ಪಿ.ಟಿ. ವರೆಗೂ ಉಪ್ಪಿನಂಶ ತಡೆದುಕೊಳ್ಳಬಲ್ಲದು. ಸಿಹಿ ನೀರಿನಲ್ಲೂ ಸಾಕಬಹುದು.

ಮೀನುಗಳ ಪಾಲನೆ : ಸಣ್ನ ಮೀನುಗಳನ್ನು ಪ್ರಥಮವಾಗಿ ನರ್ಸರಿ ಕೆರೆಗಳಲ್ಲಿ ಬಿತ್ತನೆ ಮಾಡಿ, ಸುಮಾರು 2ತಿಂಗಳ ಕಾಲ ಪ್ರತೀ 15ದಿನಗಳಿಗೊಮ್ಮೆ ಗ್ರೇಡಿಂಗ್ ಮಾಡಿ ಬೆಳಸಲಾಗುತ್ತದೆ. ಕುರುಡಿ ಮೀನುಗಳಲ್ಲಿ ಕ್ಯಾನಿಬಾಲಿಸಂ ಅಂದರೆ ದೊಡ್ಡ ಗಾತ್ರದ ಮೀನು ಚಿಕ್ಕ ಗಾತ್ರದ ಮೀನು ಮರಿಗಳನ್ನು ತಿನ್ನುವುದರಿಂದ ಗ್ರೇಡಿಂಗ್ ಮಾಡುವುದು ಅತೀ ಅವಶ್ಯಕ. ಇಲ್ಲಿ 18-20ಗ್ರಾಂ ಗಾತ್ರದ ವರೆಗೆ ಬೆಳಸಲಾಗುತ್ತದೆ. ಬಳಿಕ ಹಿನ್ನೀರಿನ ಪ್ರದೇಶದ ಒಂದು ಪಂಜರದಲ್ಲಿ 1000 ಮೀನು ಮರಿಗಳನ್ನು ಬಿತ್ತನೆ ಮಾಡಿ 16 ತಿಂಗಳು ಬೆಳೆಸಲಾಗುತ್ತದೆ.

ಆಹಾರ ಕ್ರಮ : ದಿನಕ್ಕೆರಡು ಬಾರಿ (ಬೆಳಗ್ಗೆ ಮತ್ತು ಸಂಜೆ) ಆಹಾರವನ್ನು ಕೊಡಬೇಕು. ಮೊದಲೆರಡು ತಿಂಗಳು ಸಿಗಡಿ ಆಹಾರ ಸ್ಟಾರ್ಟರ್ 1ಮತ್ತು 2ಕೊಡಲಾಗುತ್ತದೆ. ಅನಂತರ ಎರಡು ತಿಂಗಳು ಭೂತಾಯಿ ಮೀನು ಅಥವಾ ಇತರೆ ಮೀನುಗಳನ್ನು ಸಣ್ಣದಾಗಿ ಕತ್ತರಿಸಿ ನೀಡಲಾಗುತ್ತದೆ. ಮೀನಿನ ಬೆಳವಣಿಗೆಗೆ ಅನುಸಾರವಾಗಿ ಶೇ.2-3ರಷ್ಟು ಆಹಾರವನ್ನು ನೀಡಲಾಗುತ್ತದೆ. ನಾಲ್ಕು ತಿಂಗಳ ನಂತರ ಹದಿನೈದು ದಿನಕ್ಕೆ ಅಥವಾ ತಿಂಗಳಿಗೆ ಕೊಡುವ ಆಹಾರದ ಪ್ರಮಾಣ ಹೆಚ್ಚಿಸಬೇಕು. 6ತಿಂಗಳ ಬಳಿಕ ದೇಹದ ತೂಕದ ಶೇ.10ರಷ್ಟು ಪ್ರಮಾಣದಷ್ಟು ಆಹಾರ ನೀಡಬೇಕು.

ಕುರುಡಿ ಮೀನು ಸಾಕಣೆಯಿಂದ ಬೇರೆ ಮೀನುಗಳ ಸಾಕಣೆಗೆ ಪ್ರಯತ್ನ ಮಾಡಬಹುದು. (ಕೊಕ್ಕರ್, ಕೆಖಬೇರಿ, ಕೋಬಿಯಾ) ಸ್ಥಳೀಯವಾಗಿ ದೊರಕುವ ಸಣ್ಣ ಮೀನುಗಳ ನರ್ಸರಿ ಪಾಲನೆ ಮೀನು ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು. ಸಮಗ್ರ ಕೃಷಿ ಪದ್ಧತಿಯಲ್ಲಿ ಮೀನು ಕೃಷಿ ಕೈಗೊಂಡು ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗುತ್ತದೆ.

ಮೀನುಗಾರಿಕೆ ವೃತ್ತಿಯ ಜೊತೆಗೆ ಪಂಜರದ ಮೀನು ಕೃಷಿಯನ್ನು ಕೈಗೊಂಡಿದ್ದೇನೆ. ಆರಂಭದಲ್ಲಿ ಹತ್ತು ಸಾವಿರದಿಂದ ಪ್ರಾರಂಭಿಸಿ ಪ್ರಸ್ತುತ ರೂ.1.50ಲಕ್ಷ ಖರ್ಚ ಮಾಡಿ ಸುಮಾರು 4ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದೇನೆ. ಮೀನಿನ ಮರಿಗಳನ್ನು ಚೆನ್ನೈ, ಆಂಧ್ರಪ್ರದೇಶದಿಂದ ತರಬೇಕಿದೆ. ರಾಜ್ಯ ಸರಕಾರವು ಕರ್ನಾಟಕದಲ್ಲಿ ಮರಿ ಉತ್ಪನ್ನ ಕೇಂದ್ರ ನಿರ್ಮಾಣ ಮಾಡಿದರೆ ಮೀನುಗಾರರಿಗೆ ಅನುಕೂಲವಾಗುತ್ತದೆ.
– ರವೀಂದ್ರ ಖಾರ್ವಿ ಉಪ್ಪುಂದ. ಪಂಜರ ಮೀನು ಕೃಷಿ ಪದ್ಧತಿಯಲ್ಲಿ ರಾಷ್ರ್ಟೀಯ ಪ್ರಶಸ್ತಿ ಪಡೆದವರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)