ಎಸ್.ಜಿ.ಪಿ ಕ್ರಿಕೆಟ್ಸ್ ನೆರಂಬಳ್ಳ ಇವರಿಗೆ ವೈ.ಎಪ್.ಯು ಟ್ರೋಫಿ -2019

0
62

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಯಕ್ಷೇಶ್ವರಿ ಫ್ರೆಂಡ್ಸ್‍ನ 30 ಗಜಗಳ ಸೀಮಿತ ಒವರ್‍ಗಳ ಕ್ರಿಕೆಟ್ ಪಂದ್ಯಾಟವನ್ನು ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಗಿರೀಶ್ ನಾಯಕ್, ಸಪ್ತಸ್ವರ ಸಹಕಾರ ಸಂಘದ ಅಧ್ಯಕ್ಷ ಸಂಜೀವ ದೇವಾಡಿಗ ತಲ್ಲೂರು. ಗಾಯತ್ರಿ ಕ್ಯಾಟ್ರಿಂಗ್ ಮಾಲಿಕರಾದ ಮಂಜುನಾಥ ಮಯ್ಯ ಸಂಘದ ಮಾಜಿ ಅಧ್ಯಕ್ಷ ಶಂಕರ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷೇಶ್ವರಿ ಫ್ರೆಂಡ್ಸ್‍ನ ಅಧ್ಯಕ್ಷರಾದ ಆನಂದ ಪೂಜಾರಿ ವಹಿಸಿದ್ದರು.

ಸಭೆಯಲ್ಲಿ ವಾಯಸ್ಸ್ ಅಪ್ ಹೆಬ್ರಿ ಸ್ಪರ್ಧೆಯಲ್ಲಿ ಪೈನಲ್‍ಗೆ ಆಯ್ಕೆಯಾದ ಯಕ್ಷೇಶ್ವರಿ ಫ್ರೆಂಡ್ಸ್‍ನ ಶ್ರೀಶಾಂತ ಮೊಗವೀರ ಇವರನ್ನು ಗುರುತಿಸಿ ಗೌರವಿಸಲಾಯಿತು.

ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಮಾತೃಶ್ರೀ ಎಜುಕೇಶನ್ ಟ್ರಸ್ಟ್, ಕುಂದಾಪುರ ಇದರ ಪ್ರವರ್ತಕ ವಾಸುದೇವ ಬಿ.ದೇವಾಡಿಗ ಬೈಂದೂರು, ಮಂಜು. ಕೆ.ದೇವಾಡಿಗ ಸುಳ್ಳೆ ಮೊದಲಾದವರು ಉಪಸ್ಥಿತರಿದ್ದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಎಸ್.ಜಿ.ಪಿ ಕ್ರಿಕೆಟ್ಸ್ ತಲ್ಲೂರು ಇವರು ಪಡೆದುಕೊಂಡರು.

ಸಭೆಯಲ್ಲಿ ಸರಣಿಯುದ್ದಕ್ಕೂ ಉತ್ತಮ ನಿರ್ವಹಣೆ ನೀಡಿದ ಶ್ರೀನಿಧಿ ಇವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಮಹೇಶ ದೇವಾಡಿಗ ಹಟ್ಟಿಯಂಗಡಿ ನಿರೂಪಿಸಿದರೆ, ರವಿ ದೇವಾಡಿಗ ಸ್ವಾಗತಿಸಿ ವಂದಿಸಿದರೆ, ಗಿರೀಶ್ ಮೊಗವೀರ, ಸುಕೇಶ್ ಮತ್ತು ಅಭಿಜಿತ್ ಸಹಕರಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)