ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಂಡ್ಸೆ ವಲಯದ ಗುಲ್ವಾಡಿ ಒಕ್ಕೂಟದ ಮಹಾಸಭೆ

0
76

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಂಡ್ಸೆ ವಲಯದ ಗುಲ್ವಾಡಿ ಒಕ್ಕೂಟದ ಮಹಾಸಭೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.  ಉದ್ಘಾಟನೆಯನ್ನು ಶ್ರೀ ಮಹೇಶ್ ಭಟ್ ಸೌಕೂರ ಇವರು  ನೆರವೇರಿಸಿದರು.
ಶ್ರೀಮತಿ ಶಶಿರೇಖಾ ಪಿ. ಯೋಜನಾಧಿಕಾರಿಗಳು ಬೈಂದೂರು ತಾಲೂಕು  ಇವರು ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು.
 ಪ್ರಕಾಶ್ಚಂದ್ರ ಶೆಟ್ಟಿ ಗುಲ್ವಾಡಿ, ನಾರಾಯಣ ಶೆಟ್ಟಿ  ಅಧ್ಯಕ್ಷರು ಗುಲ್ವಾಡಿ ಒಕ್ಕೂಟ ಇವರು , ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕರಕಿ ಶ್ರೀಮತಿ ನೇತ್ರಾವತಿ ಗೌಡ ಒಕ್ಕೂಟದ ಸಾಧನಾ ವರದಿ ಮಂಡಿಸಿದರು.
ಈ ಸಂಧರ್ಭದಲ್ಲಿ ಮೈಕ್ರೋಬಚತ್ ಬಾಂಡ್ ವಿತರಣೆ ಮಾಡಲಾಯಿತು. ಮಾಜಿ ಒಕ್ಕೂಟದ ಅಧ್ಯಕ್ಷರನ್ನು, ನಿರಂತರ ಪತ್ರಿಕೆ ಮತ್ತು ಮೈಕ್ರೋಬಚತ್ ಮಾಡಿದ ಸಂಘಗಳನ್ನು ಗುರುತಿಸಲಾಯಿತು.
 ಸೇವಾಪ್ರತಿನಿಧಿ ಶ್ರೀಮತಿ ರೀತಾ ಸ್ವಾಗತಿಸಿದರು ಶ್ರೀ ಕಿರಣ  ವಂದಿಸಿದರು. ಶ್ರೀ ಅರುಣ್ ನಿರೂಪಿಸಿದರು.
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)