ಮಿಶ್ರ ಕೃಷಿಯಲ್ಲಿ ಖುಷಿ ಕಂಡ ಹಳಗೇರಿ ರಶ್ಮಿವಿಶ್ವನಾಥ ಶೆಟ್ಟಿ

0
241

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ : ಬÉೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ಹಳಗೇರಿ ದೊಡ್ಮನೆ ರಶ್ಮಿ ವಿಶ್ವನಾಥ ಶೆಟ್ಟಿ ಇವರು ಕೃಷಿಯಲ್ಲಿ ಮಿಶ್ರ ಬೆಳೆಯ ಚಿಂತನೆಯೊಂದಿಗೆ ಯಶ್ವಸು ಕಂಡ ರೈತ ಮಹಿಳೆ. ಅಡಿಕೆ, ಕರಿಮೆಣಸು, ತೆಂಗು, ಅರಣ್ಯ ಕೃಷಿ, ಎಲೆ ಬಾಳೆ, ಹಣ್ಣಿನ ಗಿಡ ಹತ್ತು ಹಲವಾರು ಮಿಶ್ರ ಬೆಳೆಯನ್ನು ಅನುಸರಿಸುವ ಮೂಲಕ ಈ ಭಾಗದಲ್ಲಿ ಕೃಷಿಯಲ್ಲಿ ಪ್ರಯೋಗಾತ್ಮಕವಾಗಿ ಸಾಗುತ್ತಿರುವ ಕೃಷಿ ಮಹಿಳೆ ಎನ್ನಿಕೊಂಡಿದ್ದಾರೆ.

ಪಿಯುಸಿ ಶಿಕ್ಷಣ ಪಡೆದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ 2011-12ರಲ್ಲಿ ರೈತರಿಗಾಗಿ ಏರ್ಪಡಿಸಿದ ಸಾವಯವ ಕೃಷಿ ಕುರಿತು ಅಂಚೆ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. 20ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೋಡಗಿರುವ ಇವರಿಗೆ ಪತಿ ಶಿಕ್ಷಕ ವಿಶ್ವನಾಥ ಶೆಟ್ಟಿ ಸಾಥ ನೀಡುತ್ತಾರೆ.

ಮಿಶ್ರ ಬೆಳೆ ಬೆಸಾಯ : ಸುಮಾರು 6ಎಕ್ರೆ ತೋಟದಲ್ಲಿ ವಿವಿಧ ತಳಿಯ ಒಂದು ಸಾವಿರ ಅಡಕೆ ಮರಗಳಿವೆ. ಸುಮಾರು ಒಂದುವರೆ ಸಾವಿರ ಕಾಳು ಮೆಣಿಸು ಗಿಡವಿದ್ದು ಇದರಲ್ಲಿ ಪಣಿಯೂರು-1ರ ತಳಿಯಿಂದ ಹಿಡಿದು 8ರ ವರೆಗಿನ ಎಲ್ಲ ರೀತಿಯ ಕಾಳು ಮೆಣಸು ಗಿಡಗಳನ್ನು ಇವರ ತೋಟದಲ್ಲಿ ಕಾಣಬಹುದು. ಅಲ್ಲದೆ ಇವನ್ನು ಸಿಮೆಂಟ್ ಪೈಪ್‍ಗಳಿಗೆ ಹಬ್ಬಿಸಿ ಬೆಳೆಯಲಾಗುತ್ತಿರುವುದು ಪ್ರಯೋಗಾತ್ಮಕ ಚಿನಂತನೆಗೆ ಸಾಕ್ಷಿಯಾಗಿದೆ. 200ಕ್ಕು ಹೆಚ್ಚು ತೆಂಗಿನ ಮರಗಳಿದ್ದು ವಾರ್ಷೀಕ 10ಸಾವಿರ ತೆಂಗಿನ ಕಾಯಿ ಇಳುವರಿ ಪಡೆಯುತ್ತಾರೆ.

ಅರಣ್ಯ ಕೃಷಿ  : ಇವರ ತೋಟದಲ್ಲಿ ಅರ್ಧ ಎಕ್ರೆ ಜಾಗವನ್ನು ಅರಣ್ಯ ಕೃಷಿಗಾಗಿ ಮೀಸಲಿಡಲಾಗಿದೆ. ಇಲ್ಲಿ 200ಕ್ಕೂ ಹೆಚ್ಚು ವಿವಿಧ ಜಾತಿಯ ಮರ, 3 ಬೇರೆ ಬೇರೆ ರೀತಿಯಾದ ಬಿದಿರು, ಜಾಯಿಕಾಯಿ, ಗಜ ಲಿಂಬು ವಿವಿಧ ಜಾತಿಯ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ. ಇವರ ಅಷ್ಟು ಕೃಷಿಗೆ ಇದೇ ಅರಣ್ಯ ಕೃಷಿಯಿಂದ ದೊರೆಯುವ ಸೊಪ್ಪನ್ನು ಉಪಯೋಗಿಸುತ್ತಾರೆ.

ಇಡೀ ತೋಟಕ್ಕೆ ಹನಿ ನೀರಾವರಿ ಮತ್ತು ತುಂತುರು ನೀರಿನಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ನೀರಿಗಾಗಿ ಬಾವಿ ನಿರ್ಮಿಸುವಾಗ ಅಡಿಯಲ್ಲಿ ಶಿಲೆ ಬಂದು ಅದರಲ್ಲಿ ಕೈಸುಟ್ಟುಕೊಂಡರು ಸಹ ಛಲಬೀಡದ ಇವರು ಮತ್ತೆ ಸುಮಾರು 6ಲಕ್ಷ ಖರ್ಚಮಾಡಿ ತೋಟದ ಮತ್ತೊಂದು ಬದಿಯಲ್ಲಿ 40 ಪೀಟ್ ಆಳ ಹಾಗೂ 25ಪೀಟ್ ಅಗಲದ ಬಾವಿ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಯೆಥೇಚ್ಚ ನೀರು ಇದ್ದರು ಸಹ ಮಿತ್ಯವಯ್ಯ ನೀರಿನ ಬಳಕೆಗೆ ಹೆಚ್ಚು ಗಮನ ಹರಿಸಿದ್ದಾರೆ.

ಎಲೆ ಬಾಳೆ : ಬÉೈಂದೂರು ಭಾಗದಲ್ಲಿ ಪ್ರಥಮ ಬಾರಿಗೆ ಎಲೆ ಬಾಳೆ ಗಿಡಗಳ ಬೆಳೆಸಿ ಯಶಸ್ಸು ಕಂಡವರು. 1500 ಬಾಳೆ ಬುಡಗಳನ್ನು ನೆಟ್ಟು ತಿಂಗಳಿಗೆ ಸುಮಾರು 20ಸಾವಿರಕ್ಕು ಹೆಚ್ಚು ಬಾಳೆ ಎಲೆಗಳನ್ನು ಸ್ಥಳೀಯ ಎಲ್ಲ ಮದುವೆ ಮಂಟಪಗಳಿಗೆ ನೀಡುವ ಮೂಲಕ ಇದರಲ್ಲಿಯೇ ವಾರ್ಷೀಕ ಸುಮಾರು ರೂ.5ಲಕ್ಷಕ್ಕೂ ಹೆಚ್ಚು ವ್ಯವಹಾರ ನಡೆಸುತ್ತಾರೆ.

ಸಾವಯವ ಕೃಷಿ : ತೋಟದ ಅಲ್ಲಲ್ಲಿ ಗ್ಲಿಷಡೆರಿಯನ್ ( ಗೊಬ್ಬರ ಗಿಡ) ಬೆಳೆಯುವ ಇವರು ಇದರ ಸೊಪ್ಪನ್ನು ಬಳಕೆ ಮಾಡುತ್ತಾರೆ. ಇದರ ಸೊಪ್ಪು ಉತ್ತಮ ಗೊಬ್ಬರವಾಗಿರುವುದರಿಂದ ಮರಗಳಿಗೆ ಗೊಬ್ಬರವಾಗಿ ಪರಿಗಣಿಸುತ್ತಾರೆ. ಜಾನುವಾರುಗಳ ಗಂಜಲು, ಹಟ್ಟಿಗೊಬ್ಬರ, ಬಯಾಡೈಜಿಸ್ಟ್, ಕೃಷಿ ಇಲಾಖೆಯಲ್ಲಿ ಸಿಗುವ ಗೊಬ್ಬರದ ಬಳಕೆ ಹಾಗೂ ಪ್ರಸ್ತುತ ಪಾಳೇಕರ ಜೀವಾಮೃತ ಪದ್ಧತಿ ಅನುಸರಣೆ ಮಾಡುತ್ತಿದ್ದಾರೆ.
ಕೃಷಿ ಪ್ರಶಸ್ತಿ  : 2018-19ನೇ ಸಾಲಿನಲ್ಲಿ ಇವರ ಕೃಷಿ ಕಾಯಕವನ್ನು ಗುರುತಿಸಿ ಆತ್ಮ ಯೋಜನೆಯಡಿ ತಾಲೂಕು ಮಟ್ಟದ ಕೃಷಿ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅರಣ್ಯ ಕೃಷಿ, ಸಾವಯವ ಗೊಬ್ಬರ, ಬಯೋಡೈಜೆಸ್ಟರ್, ಜೀವಾಮೃತ ಬಳಸಿ ಭೂಮಿಯ ಫಲವತ್ತತೆ ಮತ್ತು ರಸಸಾರ ಕಾಯ್ದುಕೊಂಡು ಮಿಶ್ರ ಬೇಸಾಯ ಪದ್ದತಿ ಅನುಸರಿಸಿದ್ದರಿಂದ ಯಶಸ್ಸು ಸಾಧ್ಯವಾಗಿದೆ. ಈ ಯಶಸ್ಸಿನ ಹಿಂದೆ ಪತಿ ವಿಶ್ವನಾಥ ಶೆಟ್ಟಿ ಇವರ ಕೃಷಿ ಪ್ರೇಮ, ಬದ್ಧತೆ ಹಾಗೂ ನಿರಂತರ ಮಾರ್ಗದರ್ಶನ ಇದೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದರು ಸಹ ಕೃಷಿ ವೆಚ್ಚದ ಮಿತವ್ಯಯತೆ, ಮಣ್ಣಿನ ಸಂರಕ್ಷಣೆ, ಹಾಗೂ ಮಿಶ್ರ ಬೇಸಾಯಕ್ಕೆ ಪಾಳೇಕರ ನೈಸರ್ಗಿಕ ಕೃಷಿ ಹಾಗೂ ಸಾವಯವ ಪದ್ಧತಿ ಅಳವಡಿಕೊಳ್ಳುಲು ಇವರ ಚಿಂತನೆಯೇ ಕಾರಣವಾಗಿದೆ.
ರಶ್ಮಿ ವಿಶ್ವನಾಥ ಶೆಟ್ಟಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)