ಬೆಂಗಳೂರು : ಸುಗ್ಗಿಯ ಸಂಭ್ರಮದಲ್ಲಿರುವ ರೈತ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕಲ್ಪತರು ನಾಡಿನಲ್ಲಿ ದೇಶದ ಅನ್ನದಾತರಿಗೆ ಬರಪೂರ ಉಡುಗೋರೆ ನೀಡಿದ್ದಾರೆ. ದೇಶದ 6 ಕೋಟಿ ಅನ್ನದಾತರ ಬ್ಯಾಂಕ್ ಖಾತೆಗಳಿಗೆ 12 ಸಾವಿರ ಕೋಟಿ ರೂಪಾಯಿ ಜಮಾ ಮಾಡುವ ಮೂಲಕ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ನೀಡಿದ್ದಾರೆ.
ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಟನ್ ಒತ್ತುವ ಮೂಲಕ ಏಕಕಾಲಕ್ಕೆ 6 ಕೋಟಿ ರೈತರ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆಯಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಂತೆ ಮೊದಲ ಕಂತಿನಲ್ಲಿ ರೂ.2000 ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಅಂದಹಾಗೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ನೀಡಿದ ನಂತ್ರ, ಅನೇಕ ರೈತರಿಗೆ ತಮ್ಮ ಖಾತೆಗೆ ಹಣ ಜಮಾ ಆಗಿದ್ಯಾ ಇಲ್ಲವೋ ಎಂಬ ಚಿಂತೆ, ಕಾತುರ ಕಾದಿದೆ. ಹೀಗಾಗಿ ಈ ಕುರಿತಂತೆ ಪ್ರಕಟಣೆಯ ಮೂಲಕ ಮಾಹಿತಿ ನೀಡಿರುವ ಕೃಷಿ ಇಲಾಖೆ ಈ ಕೆಳಗಿನಂತೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬಿದ್ದಿದ್ಯಾ ಇಲ್ಲವೋ ಅಂತ ಚೆಕ್ ಮಾಡಿಕೊಳ್ಳಬಹುದಾಗಿದೆ.
ನಿಮ್ಮ ಖಾತೆಗೆ ಹಣ ಜಮಾ ಆಗಿದ್ಯಾ ಅಂತ ತಿಳಿಯಬೇಕೇ.? ಹೀಗೆ ಮಾಡಿ
- ರೈತ ಬಾಂಧವರೇ ಮೊದಲು ನೀವು http://www.pmkisan.gov.in/BeneficiaryStatus/BeneficiaryStatus.aspx ಕ್ಲಿಕ್ ಮಾಡಬೇಕು
- ಆನಂತ್ರದಲ್ಲಿ ತೆರೆದುಕೊಳ್ಳುವ ಪುಟದಲ್ಲಿ ನೀವು PM-KISAN ಅಡಿಯಲ್ಲಿ ನಿಮ್ಮ ಆಧಾರ್ ನಂಬರ್ ಇಲ್ಲವೇ ಬ್ಯಾಂಕ್ ಖಾತೆ ನಂಬರ್ ಇಲ್ಲವೇ ಮೊಬೈಲ್ ನಂಬರ್ ನಮೂದಿಸಬೇಕು.
- ಈ ಬಳಿಕೆ ಪಕ್ಕದಲ್ಲಿಯೇ ಇರುವಂತ ಗೆಡ್ ಡಾಟಾ ಬಟನ್ ಕ್ಲಿಕ್ ಮಾಡಿದ್ರೇ ತೋರಿಸುತ್ತದೆ.
- ನಿಮ್ಮ ಖಾತೆಗೆ ಮೊದಲ ಕಂತು ಯಾವಾಗ ಜಮಾ ಆಗಿದೆ. ಎರಡನೇ ಕಂತು ಯಾವಾಗ ಜಮಾ ಆಗಿದೆ ಎಂಬ ಮಾಹಿತಿ ಲಭ್ಯ
- ಅಲ್ಲದೇ ಮೂರು ಮತ್ತು ನಾಲ್ಕನೇ ಕಂತಿನ ಸ್ಟೇಟಸ್ ಏನಿದೆ ಎಂಬುದನ್ನು ನಿಮ್ಮ ಮೊಬೈಲ್ ಇಲ್ಲವೇ, ಕಂಪ್ಯೂಟರ್ ಪರದೆಯ ಮೂಲಕ ವೀಕ್ಷಿಸಿ, ಕುಳಿತಲ್ಲಿಯೇ ಮಾಹಿತಿ ಪಡೆಯಬಹುದಾಗಿದೆ.