ಜನವರಿ:1,2 ಮತ್ತು3 ರಂದು ಕೇರಳದ ಕಣ್ಣೂರು ನಗರದಲ್ಲಿ ಕೃಷಿಕೂಲಿಕಾರರ ರಾಷ್ಟ್ರ ಸಮ್ಮೇಳನ

0
205

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಅಖಿಲ ಭಾರತಕೃಷಿಕೂಲಿ ಕಾರರ ಸಂಘ (All India Agricultural Workers Union)ದ 9 ನೇ ರಾಷ್ಟ್ರ ಸಮ್ಮೇಳನವು ದಿನಾಂಕ:1,2ಮತ್ತು 3,ಜನವರಿ 2020 ರಂದು ಕೇರಳ ರಾಜ್ಯದ ಕಣ್ಣೂರು ನಗರದಲ್ಲಿ ಬಹಳ ವಿಜೃಂಭಣೆಯಿಂದ ಜರಗಲಿರುವುದು.

ಸಮ್ಮೇಳನದ ಪರವಾಗಿ ಕಣ್ಣೂರು ನಗರದಲ್ಲಿ ಆಯೋಜಿಸಲಾಗಿರುವ ಸುಮಾರು 3 ಲಕ್ಷಕ್ಕೂ ಹೆಚ್ಚು ರೈತ,ಕೃಷಿಕೂಲಿ ಕಾಮಿ೯ಕರು ಭಾಗವಹಿಸುತ್ತಿರುವ ಬೃಹತ್ ಮೆರವಣಿಗೆಯನ್ನು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟನೆಮಾಡುತ್ತಾರೆ.

ದೇಶಾದ್ಯಂತ ಆಯ್ದ ಸುಮಾರು 1000 ಮಂದಿ ಪ್ರತಿನಿಧಿಗಳ ಅಧಿವೇಶನವನ್ನು ಹಿರಿಯ ಮುಖಂಡ ಎಸ್.ರಾಮಚಂದ್ರ ಪಿಳೈ ಉದ್ಘಾಟಿಸುತ್ತಾರೆ.

ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ರಾಷ್ಟ್ರಾಧ್ಯಕ್ಷ ತಿರುನಾವುಕ್ಕರಸು,ಪ್ರಧಾನ ಕಾಯ೯ದಶಿ೯ ಮಾಜಿ ರಾಜ್ಯ ಸಭಾ ಸದಸ್ಯ ಎ.ವಿಜಯ ರಾಘವನ್,ಇ.ಪಿ.ಜಯರಾಜನ್,ಎಂ.ವಿ.ಗೋವಿಂದನ್ ಮಾಸ್ತರ್,ಸುನಿತ್ ಚೋಪ್ರ,ಎನ್.ಆರ್.ಬಾಲನ್ ಮೊದಲಾದ ಮುಖಂಡರು ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ.

ಈ ಐತಿಹಾಸಿಕ ರಾಷ್ಟ್ರಸಮ್ಮೇಳನಕ್ಕೆ ಉಡುಪಿ ಜಿಲ್ಲೆಯನ್ನು ಪ್ರತಿನಿಧೀಕರಿಸಿ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ್ ಕೋಣಿ, ನಾಗರತ್ನ ನಾಡ ಸೇರಿದಂತೆ ರಾಜ್ಯದಿಂದ ಒಟ್ಟು 41 ಮಂದಿ ಪ್ರತಿನಿಧಿಗಳು ಭಾಗವಹಿಸುತ್ತಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)