ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಾಕೆರೆ ಶಾಲಾ ವಾಷಿ೯ಕೋತ್ಸವ ಸಮಾರಂಭ

0
115

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಾಕೆರೆ ಶಾಲಾ ವಾಷಿ೯ಕೋತ್ಸವ ಸಮಾರಂಭ ಕಾರ್ಯಕ್ರಮವು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ಯಾಮಲಾ ಎಸ್.ಕುಂದರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

.ದಾನಿಗಳಾದ ಮಣಿಶಂಕರ ಜಗದೀಶ ಪೂಜಾರಿ ,ಗಜೇಂದ್ರ ರಾವ್ ಗಂಗೊಳ್ಳಿ, ಹಾಗೂ ರೋಶನ್ ಮಸ್ಕಿ ಶಾಲೆಗೆ ಕೊಡುಗೆಯಾಗಿ ನೀಡಿದ ಕ್ರೀಡಾ ಸಮವಸ್ತ್ರವನ್ನು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬು ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.

ತಾಲೂಕು ಪಂಚಾಯತ್ ಸದಸ್ಯರುಗಳಾದ ಜಗದೀಶ ಪೂಜಾರಿಯವರು “ಶ್ರೀ ಗಂಧ” ಶಾಲಾ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದರು. ಹಾಗೂ ಪ್ರವೀಣ್ ಕುಮಾರ ಶೆಟ್ಟಿ ಯವರು ದಾನಿಗಳಾದ ಅಖಿಲ್ ವಿ.ಸುವರ್ಣ ಹಾಗೂ ಸುರೇಂದ್ರ ಹೊಡ್ಸಾಲು ಇವರು ನೀಡಿದ ವಿಶೇಷ ವಿದ್ಯಾರ್ಥಿವೇತನ ವಿತರಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ ಶೆಟ್ಟಿ,ಶ್ರೀಧರ ದೇವಾಡಿಗ,ನಿವ್ರತ್ತ ಮುಖ್ಯಶಿಕ್ಷಕರಾದ ವಸಂತ ಹೆಗ್ಡೆ,ಶಂಕರ ಮಡಿವಾಳ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಬಿ.ಬಿ.ಎಚ್.ಅಬ್ದುಲ್ ಹಮೀದ್,ಗೌರವ ಅಧ್ಯಕ್ಷರಾದ ಜನಾರ್ದನ ದೇವಾಡಿಗ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಯರಾಮ ಪೂಜಾರಿ, ವಾಸುಪೂಜಾರಿ, ಉದಯ ಪೂಜಾರಿ, ಗಿರೀಶ ಶೇಟ್ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಧರ್ ದೇವಾಡಿಗ, ದಿನೇಶಶೆಟ್ಟಿ ಜನಾರ್ದನ ದೇವಾಡಿಗ, ವಾಸು ಪೂಜಾರಿ, ವಿಶ್ವನಾಥ್ ಪೂಜಾರಿ ಕ.ರ.ಪ್ರಾ.ಶಾ.ಶಿ.ಸಂಘ ಅಧ್ಯಕ್ಷರು ಬೈಂದೂರು ವಲಯ ಬಿ ಮಹಮ್ಮದ್ ಶಾಹೇಬ್ ಬಡಾಕೆರೆ, ಜಯರಾಮ ಪೂಜಾರಿ ಎಸ್.ಡಿ.ಎಮ್ ಅಧ್ಯಕ್ಷರು ಮುಖ್ಯೋಪಾಧ್ಯಾಯರಾದ ಮಹಾಬಲ.ಕೆ ವಿದ್ಯಾರ್ಥಿ ಮುಖಂಡ ಶಿಶಿರ ಅಡಿಗ, ಎಸ್.ಡಿ.ಎಮ್,ಸಿ ಸರ್ವಸದ್ಯಸರು, ಹಳೆವಿದ್ಯಾರ್ಥಿ,ಪೋಷಕರು ಹಾಜರಿದ್ದರು.

ಮಹಾಬಲ.ಕೆ ವರದಿಯನ್ನು ಓದಿದರು,ರಾಘವೇಂದ್ರ ಕೆ ಸ್ವಾಗತಿಸಿದರು,ಲಕ್ಷ್ಮೀ ,ಸರೋಜ ,ಸಂತೋಷ ಬಹುಮಾನ ಪಟ್ಟಿ ವಾಚಿದರು. ಜಯಲಕ್ಷ್ಮೀ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)