ಜೇಸಿಐ ಬೈಂದೂರು ಸಿಟಿ ವತಿಯಿಂದ ಜೇಸಿ ಹೊಸ ಸದಸ್ಯರಿಗೆ ಓರಿಯೆಂಟೆಶನ್ ತರಬೇತಿ

0
148

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಜೆಸಿಐ ಬೈಂದೂರು ಸಿಟಿ ವತಿಯಿಂದ ಓರಿಯೆಂಟೆಶನ್ ತರಬೇತಿ ಕಾರ್ಯಕ್ರಮ ಇಲ್ಲಿನ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆಯಿತು.

ಜೆಸಿಐ ಬೈಂದೂರು ಸಿಟಿಯ ಅಧ್ಯಕ್ಷ ಜೇಸಿ ಮಣಿಕಂಠ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು, ವಲಯಾಧಿಕಾರಿ ಹಾಗೂ ವಲಯ ತರಬೇತುದಾರ ಮಂಗೇಶ್ ಶ್ಯಾನುಬಾಗ್, ಮರವಂತೆ ಗ್ರಾಂ.ಪಂ.ಅಧ್ಯಕ್ಷೆ ಅನಿತಾ, ಜೇಸಿ ಕಾರ್ಯದರ್ಶಿ ಜೇಸಿ. ಸುಶಾಂತ್ ಬೈಂದೂರು, ನಿಯೋಜಿತ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರ್, ಉಪಸ್ಥಿತರಿದ್ದರು.

ಮಂಗೇಶ್ ಶ್ಯಾನುಬಾಗ್ ಜೆಸಿ ಸದಸ್ಯರಿಗೆ ತರಬೇತಿ ನೀಡಿ, ಒಂದು ಸಂಸ್ಥೆಯಿಂದ ಏನೆಲ್ಲ ಪ್ರಯೋಜನ ಇದೆ ಮತ್ತು ನಮ್ಮಲ್ಲಿರುವ ಪ್ರತಿಭೆಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಹಾಗೂ ಇನ್ನೂ ಅನೇಕ ವಿಷಯಗಳನ್ನು ಮನಮುಟ್ಟುವಂತೆ ಮಾರ್ಗದರ್ಶನ ನೀಡಿದರು.

ನಿಯೋಜಿತ ಕಾರ್ಯದರ್ಶಿ ಶ್ರೀಧರ ಆಚಾರ್ಯ ಸ್ವಾಗತಿಸಿದರು, ಭಾನುಮತಿ ಬಿ.ಕೆ ಜೇಸಿವಾಣಿ ವಾಚಿಸಿದರು. ಚೈತ್ರ ವಂದಿಸಿದರು. ಓರಿಯೆಂಟೇಶನ್ ತರಬೇತಿ ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)