ಚಿತ್ತೂರು ಪ್ಯೂಯೆಲ್ಸ್ ಪೆಟ್ರೋಲ್ ಬಂಕ ಉದ್ಘಾಟನೆ

0
104

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೊಲ್ಲೂರು ಕುಂದಾಪುರ ಮುಖ್ಯ ರಸ್ತೆಯ ಚಿತ್ತೂರು ಸಮೀಪದ ಆಲೂರು ಕ್ರಾಸ್ ಬಳಿ ಇಂಡಿಯನ್ ಆಯಿಲ್ ಕಾರ್ಪೊರೇಶನ್‍ನ ಚಿತ್ತೂರು ಪ್ಯೂಯೆಲ್ಸ್ ಪೆಟ್ರೋಲ್ ಬಂಕನ್ನು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿದರು.

 ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮಂಗಳೂರಿನ ಅನೂಪ್ ಕುಶ್ವ , ಜಿಲ್ಲಾ ಪಂಚಾಯತ ಸದಸ್ಯ ಬಾಬು ಹೆಗ್ಡೆ , ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ , ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿ. ಮಂಗಳೂರಿನ ಸೀನಿಯರ ಮ್ಯಾನೇಜರ ಆರ್ . ರಾಜ ಪಾಂಡ್ಯನ್ , ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿ. ಮಂಗಳೂರಿನ ಸೇಲ್ಸ್ ಆಫೀಸರ್ ಮೀರಜ್ ಕುಮಾರ್ , ಬಳ್ಳಾರಿ ಉಧ್ಯಮಿ ಗುರ್ಮೇ ಸುರೇಶ ಶೆಟ್ಟಿ , ಸುಪ್ರಭಾತ್ ಗ್ರೂಪ್ ಆಫ್ ಹೋಟೆಲ್ಸ್ ಹೈದರಬಾದ್ ಉಧ್ಯಮಿ ಶ್ರೀ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ , ತಾ. ಪಂ ಸದಸ್ಯ ಉದಯ ಜಿ ಪೂಜಾರಿ , ಶ್ರೀ ಕ್ಷೇತ್ರ ಮಾರಣಕಟ್ಟೆ ಅನುವಂಶಿಕ ಮೊಕ್ತೇಸರ ಸದಾಶಿವ ಶೆಟ್ಟಿ , ಚಿತ್ತೂರು ಗ್ರಾ. ಪಂ ಅಧ್ಯಕ್ಷ ಸಂತೋಷ ಮಡಿವಾಳ , ಕುಂದಾಪುರ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ. ಅತುಲ್ ಕುಮಾರ ಶೆಟ್ಟಿ , ಕೊಲ್ಲೂರು ಮೂಕಾಂಬಿಕೆಯ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ , ರಾಜೇಶ ಕಾರಂತ , ಆಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ ಹರ್ಕೂರು , ಆಲೂರು ಗ್ರಾ. ಪಂ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ , ವಂಡ್ಸೆ ಗ್ರಾ. ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು , ಇಡೂರು ಗ್ರಾ.ಪಂ ಅಧ್ಯಕ್ಷೆ ಸಾವಿತ್ರಿ ಆಚಾರ್ಯ , ಇಡೂರು ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಸುಭ್ರಾಯ ಭಟ್ ಗೋತೆ , ಚಿತ್ತೂರು ಗ್ರಾ. ಪಂ ಸದಸ್ಯ ಪ್ರದೀಪ ಶೆಟ್ಟಿ , ಚಿತ್ತೂರು ಸರಕಾರಿ ಪ್ರೌಢಶಾಲೆಯ ಕಾರ್ಯಧ್ಯಕ್ಷ ರವಿರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು .

ಮಾಲಕರಾದ ಸೌಮ್ಯ ಶೆಟ್ಟಿ ಸ್ವಾಗತಿಸಿ , ಕರುಣಾಕರ ಶೆಟ್ಟಿ ವಂದಿಸಿದರು ಪತ್ರಕರ್ತ ಪ್ರಭಾಕರ ಆಚಾರ್ಯ ಚಿತ್ತೂರು , ಕಾರ್ಯಕ್ರಮ ನಿರೂಪಿಸಿದರು.

ವರದಿ : ರಕ್ಷಿತ್ ಕುಮಾರ್ ವಂಡ್ಸೆ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)