ಉಪ್ಪುಂದ ರಥೋತ್ಸವ : ಅಶ್ವರೋಹಣೋತ್ಸವ, ಗ್ರಾಮಗಳಲ್ಲಿ ಉತ್ಸವ ನಡೆಗೆ

0
168

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಉಪ್ಪುಂದ : ಬೈಂದೂರು ಭಾಗದ ಕೊಡಿ ಹಬ್ಬವೆಂದೇ ಪ್ರಸಿದ್ಧವಾದ ದುರ್ಗಾಪರಮೇಶ್ವರಿ ಅಮ್ಮನವರ ಮನ್ಮಹಾರಥೋತ್ಸವದ ಅಂಗವಾಗಿ ಡಿ.10ರಂದು ಅಶ್ವರೋಹಣೋತ್ಸವ ಹಾಗೂ ವಿವಿಧ ಪ್ರದೇಶದಲ್ಲಿ ಕಟ್ಟೆ ಪೂಜಾ ಉತ್ಸವ ನಡೆಯಿತು. ವೇದಮೂರ್ತಿ ಶ್ರೀನಿವಾಸ ಅಡಿಗ ನೇತೃತ್ವದಲ್ಲಿ ಮಧ್ಯಾಹ್ನ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನೆರವೆರಿತು.

ಉತ್ಸವ ನಡೆಗೆ : ಪ್ರತಿದಿನ ದೇವಿಯು ಪಲ್ಲಕಿಯಲ್ಲಿ ಕುಳಿತು ಕಟ್ಟೆ ಪೂಜೆಗೆಂದು ಗ್ರಾಮದ ಸುತ್ತ ಸಂಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಜೋಡು ತಟ್ಟಿರಾಯ, ಮಕರ ತೋರಣ, ಧ್ವಜ, ಪತಾಕೆ, ವಾದ್ಯ ವಿಶೇಷಗಳಿಂದ ಅಲಂಕೃತ ದಂಡಿಗೆಯ ಮೆರೆವಣಿಗೆಯಲ್ಲಿ ಸಾಂಪ್ರದಾಯಿಕ ಬೆಳಕಿನೊಂದಿಗೆ ಉತ್ಸವ ಸವಾರಿ ನಡೆಯಿತು.

ಕಟ್ಟೆಗಳನ್ನು ಸ್ವಚ್ಚಗೊಳಿಸಿ, ಶುದ್ಧಗೊಳ್ಳಿಸಿ, ಚಪ್ಪರ ಹಾಕಿಸಿ ಬರುವ ಹಾದಿಯನ್ನು ಸ್ವಚ್ಚಗೊಳ್ಳಿಸಿ, ಬಂದ ಸಕಲರಿಗೂ ಆದರದ ಸ್ವಾಗತ ಕೋರಿ ದೇವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ ತೆಂಗಿನ ಕಾಯಿ ಸುಳಿದು, ಒಡೆದು ದೇವರನ್ನು ಕಟ್ಟೆಯ ಪೀಠದಲ್ಲಿ ಕುಳ್ಳಿರಿಸಿ ಅಲಂಕಾರ, ನೈವೇದ್ಯ, ಆರತಿಗಳಿಂದ ಪೂಜೆ ನೆರವೇರಿಸಲಾಗುತ್ತದೆ. ಮೆರವಣಿಗೆಯಲ್ಲಿ ಬಂದವರ ಸಹಕಾರದಿಂದ ಅಷ್ಠಾವಧಾನ ಸೇವೆ, ಸಂಗೀತ, ಪುರಾಣ, ಸಂಗೀತ ವಾದ್ಯ ನಡೆಸಲಾಗುತ್ತದೆ. ಪನಿವಾರ, ಪ್ರಸಾದ ವಿತರಣೆ ಮಾಡಲಾಗುತ್ತದೆ.

ದೇವಿಯ ಮೆರವಣಿಗೆ ಸಾಗುವ ಹಾದಿಯಲ್ಲಿ ರಂಗೋಲಿ ಬಿಡಿಸಿ, ದೀಪಗಳನ್ನು ಬೆಳಗಿಸಿ ಆರತಿ ನೀಡಿ ತಮ್ಮ ಭಕ್ತಿಯ ನಮನಗಳನ್ನು ಅರ್ಪಿಸುತ್ತಾರೆ, ಗ್ರಾಮದ ಸರ್ವರು ಕುತೂಹಲ ಸಂಭ್ರಮದಿಂದ ಕಾಯುವ ಸಂದರ್ಭ ಇದ್ದಾಗಿದ್ದು ಅಮ್ಮನವರ ಆಗಮನದಿಂದ ಜನರು ಪುಳಕಿತರಾಗುತ್ತಾರೆ.

ಉಪ್ಪುಂದ ರಥಬೀದಿ ಪೂರ್ವ ಕಿ.ಪ್ರಾ. ಶಾಲೆ ಬಳಿಯ ಏರು ಕಟ್ಟೆ, ಹಳಗದ ಹಿತ್ಲು ಕಟ್ಟೆ, ಪುರಾಣಿಕರ ಕಟ್ಟೆ, ಬಿಜೂರು ಸರಾಫರ ಕಟ್ಟೆ, ಸೇರುಗಾರರ ಕಟ್ಟೆ, ಬಿಜೂರು ಮಯ್ಯರ ಕಟ್ಟೆ, ಶೆಟ್ಟರ್ ಕೇರಿ ಮಾದಯ್ಯ ಶೆಟ್ಟರ ಕಟ್ಟೆ, ವೈದ್ಯರಕೇರಿ ಕಟ್ಟೆ, ಮಾದಪ್ಪು ಮೈಯ್ಯರಕಟ್ಟೆ, ಕರಾವಳಿ ಕಾಯಿ ಭಂಡಶಾಲೆ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯಿತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)