ಉಪ್ಪುಂದ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೌಷ್ಠಿಕ ಮೇಳ

0
134

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಪ್ಪುಂದ ವಲಯದ ಅಂಬಾಗಿಲು ಬಿ ಒಕ್ಕೂಟ ಮತ್ತು ಕೆರ್ಗಾಲು ಒಕ್ಕೂಟದದ ಜ್ಞಾನ ವಿಕಾಸದ ವತಿಯಿಂದ ಪೌಷ್ಠಿಕ ಮೇಳ ನಾಡದೋಣಿ ಭವನ ಉಪ್ಪುಂದದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ವೈದ್ಯಾಧಿಕಾರಿ ವಿಶ್ವೇಶ್ವರ ಮಯ್ಯ ಉದ್ಘಾಟಿಸಿ ಮಾತನಾಡಿದ ಅವರು ಉತ್ತಮ ಆರೋಗ್ಯದಿಂದ ಜೀವನ ಸಾಗಿಸಲು ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವನೆ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಬೈಂದುರು ವಲಯದ ನಾಡದೋಣಿ ಅಧ್ಯಕ್ಷ ಆನಂದ ಖಾರ್ವಿ ವಹಿಸಿದ್ದರು.

ಈ ಸಂದರ್ಭದಲ್ಲಿ ತಾಲೂಕಿನ ಸಮನ್ವಯ ಅಧಿಕಾರಿ ಗೀತಾ, ವಲಯ ಅಧ್ಯಕ್ಷೆ ಶಶಿಕಲಾ, ಅಂಬಾಗಿಲು ಬಿ ಒಕ್ಕೂಟದ ಸಯೋಜಕಿ ಬಾಗ್ಯಶ್ರೀ, ಕೆರ್ಗಾಲು ಒಕ್ಕೂಟದ ಸಂಯೋಜಕಿ ಮಮತಾ, ಸೇವಾಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸೇವಾಪ್ರತಿನಿಧಿ ಚಿತ್ರಾ ಸ್ವಾಗತಿಸಿದರು, ಸೇವಾಪ್ರತಿನಿಧಿ ಅಶ್ವಿನಿ ನಿರೂಪಿಸಿದರು, ಸೇವಾಪ್ರತಿನಿಧಿ ರೇಖಾ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)