ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಮಕ್ಕಳ ವಿಜ್ಞಾನ ಹಬ್ಬ ಪೂರಕವಾಗಲಿ : ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ

0
202

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಛೇರಿ ಬೈಂದೂರು ಮತ್ತು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರಿನಲ್ಲಿ ಕ್ಲಸ್ಟರ್ ಮಟ್ಟದ ವಿಜ್ಞಾನ ಮಕ್ಕಳ ಹಬ್ಬ ಕಾರ್ಯಕ್ರಮ ನಡಯಿತು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ವಿಜ್ಞಾನ ಮಕ್ಕಳ ಹಬ್ಬದಲ್ಲಿ ಪರಿಪೂರ್ಣ ಅನುಭವವನ್ನು ವಿದ್ಯಾರ್ಥಿಗಳು ಗಳಿಸಲಿ ಹಾಗೂ ಅದನ್ನು ಉಳಿದ ವಿದ್ಯಾರ್ಥಿಗಳಲ್ಲಿ ಹಂಚಿಕೊಳ್ಳಲಿ ದೈನಂದಿನ ಘಟನೆಗಳಲ್ಲಿ ವಿಜ್ಞಾನದ ಅಳವಡಿಕೆಯನ್ನು ಗುರುತಿಸಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಕಾಂಬು ದೇವಾಡಿಗ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಯಡ್ತರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೆರೋನಿಕಾ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಭಟ್, ಕಾರ್ಯದರ್ಶಿ ಮಂಜುನಾಥ, ಸಮಿತಿಯ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್, ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರವೂಪ್, ಬೈಂದೂರು ವಲಯ ದೈಹಿಕ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೈಂದೂರು ವಲಯ ಅಧ್ಯಕ್ಷ ವಿಶ್ವನಾಥ ಪೂಜಾರಿ, ಅಗಸ್ತ್ಯ ಪೌಂಡೇಶನ್‍ನ ಶ್ರೀ ರಮೇಶ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕರುಣಾಕರ ಶೆಟ್ಟಿ, ಬೈಂದೂರು ಶಾಕಾ ಪದವೀಧರ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸತ್ಯಾನಾ ಕೋಡೆರಿ ಮರವಂತೆ, ಬಿ.ಐ.ಆರ್.ಟಿ ಲಕ್ಮೀ.ಬಿ, ಸಂತೋಷ ಉಪ್ಪುಂದ, ವಿನಾಯಕ ಮುಲ್ಲಿಬಾರು, ರಾಘವೇಂದ್ರ ಬಡಾಕೆರೆ, ವಾಸುದೇವ ಗಂಗೇರಿ ಗುಜ್ಜಾಡಿ, ದೀನೇಶ್ ಆಜ್ರಗದ್ದೆ, ಶ್ರೀಧರ ಪಿ ತಗ್ಗರ್ಸೆ, ಶಶಿಕಲಾ ಮೈಕಳ, ಗೀತಾ ಮಯ್ಯ, ಗೀತಾ ಹೆಗ್ಡೆ ಹೆರೂರು, ಚಂದ್ರ ನಾರಾಯಣ ಬಿಲ್ಲವ ಶಿರೂರು, ರೇವತಿ, ರಾಮಕೃಷ್ಣ ದೇವಾಡಿಗ ಅರೆಮನೆಹಕ್ಲು, ಜ್ಯೋತಿ ಎಚ್.ತಗ್ಗರ್ಸೆರವರಿದ್ದರು.

ಮುಖ್ಯೋಪಾಧ್ಯಾಯ ಜನಾರ್ಧನ ದೇವಾಡಿಗ ಸ್ವಾಗತಿಸಿದರು, ಶ್ರೀಕಾಂತ ಕಾಮತ್ ದನ್ಯವಾದ ಸಲ್ಲಿಸಿದರು, ಸಂಪನ್ಮೂಲ ವ್ಯಕ್ತಿ ವಾಸುದೇವ ಗಂಗೇರಿ ಪ್ರಾರ್ಥಿಸಿದರು, ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಕ ಟಿ ವೆಂಕಟರಮಣ, ಕಲಾವಿದ ಗೀರೀಶ್ ಕಾರ್ಯಕ್ರಮಕ್ಕೆ ಸಹಕರಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)