ಬೀಳ್ಕೊಡುಗೆ ಸಮಾರಂಭ

0
537

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನಿವೃತ್ತರಾದ ಸ.ಕಿ.ಪ್ರಾ.ಶಾಲೆ ಅಮ್ಮನವರತೋಪ್ಲು ಶಾಲೆಯ ಸಹಶಿಕ್ಷಕರಾದ ಶ್ರೀ ವೆಂಕಟರಮಣ ಚಿ. ಇವರಿಗೆ ಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀನಿವಾಸ ಉಜ್ಜೇರಿ ನಿವೃತ್ತರಿಗೆ ಸನ್ಮಾನಿಸಿದರು.

ಎಸ್.ಡಿ.ಎಮ್.ಸಿ ಅಧ್ಯಕ್ಷೆ ವಿಶಾಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಈಶ್ವರ ಖಾರ್ವಿ, ಆನಂದ ಖಾರ್ವಿ, ಉಪ್ಪುಂದ ಕ್ಲಸ್ಟರ್‍ನ ಸಿ.ಆರ್.ಪಿ ಸುಬ್ರಮಣ್ಯ ಜಿ. ಉಪ್ಪುಂದ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಖಾರ್ವಿ, ಶಿಕ್ಷಕಿಯರಾದ ಚಿಕ್ಕಮ್ಮ, ಲಕ್ಷ್ಮೀದೇವಿ, ಮಮತ ಕುಮಾರಿ, ಎಸ್.ಡಿ.ಎಮ್.ಸಿ ಸದಸ್ಯರು, ಹಳೆ ವಿದ್ಯಾರ್ಥಿ, ಸಂಘದ ಕಾರ್ಯದರ್ಶಿ ಹಾಗೂ ಸದಸ್ಯರು ಪೋಷಕರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಸುನಂದಾ ಬಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಗೌರವ ಶಿಕ್ಷಕಿ ಶೈಲಾ ವಂದಿಸಿ, ಗೌರವ ಶಿಕ್ಷಕಿ ಮಾಣಿಕ್ಯಾ ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)