ಉಪ್ಪುಂದ : ಮಕ್ಕಳ ವಿಜ್ಞಾನ ಹಬ್ಬ

0
527

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ವಿಜ್ಞಾನ ಸುಲಭವಾಗಲಿ ಎಂಬ ಇತ್ಯಾದಿ ಘೋಷಣೆಯ ಮೂಲಕ ಅದ್ಧೂರಿ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡ ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಇದರ ವಿನೂತನ ಪರಿಕಲ್ಪನೆಯ ಮೂಲಕ ಸ.ಹಿ.ಪ್ರಾ.ಶಾಲೆ ಕಂಚಿಕಾನನಲ್ಲಿ ನಡೆಯುತ್ತಿರುವ ಉಪ್ಪುಂದ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಯಿತು.

ಸಾಂಕೇತಿಕವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ನೊರೆ ಬುಗ್ಗೆಯನ್ನು ಊದುವುದರ ಮೂಲಕ ಜಿ.ಪಂ ಸದಸ್ಯೆ ಗೌರಿ ದೇವಾಡಿಗ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಸಹಭಾಗಿತ್ವ ನೀಡಿದ ರೋಟರಿ ಸಂಸ್ಥೆಯ ಅಧ್ಯಕ್ಷ ರೋ. ಯು. ಪ್ರಕಾಶ್ ಭಟ್ ಮಾತನಾಡಿ ಮಕ್ಕಳು ಅತೀ ಹೆಚ್ಚು ಖುಷಿ ಪಡುವ ಸ್ಥಳವೇ ಶಾಲೆಗಳಾಗಬೇಕು ಪ್ರಶ್ನೆ ಮಾಡುವ ಪ್ರವೃತ್ತಿಯೇ ಕಲಿಕೆಯ ಮುಖ್ಯ ಸಾಧನಯಾಗಬೇಕು ಎಂದರು.

ಗ್ರಾ.ಪಂ ಅಧ್ಯಕ್ಷ ಶ್ರೀಮತಿ ಲೋಲಾಕ್ಷಿ ಸಭಾಧ್ಯಕ್ಷತೆ ವಹಿಸಿದ್ದರು.

ತಾ.ಪಂ ಸದಸ್ಯ ಜಗದೀಶ್ ದೇವಾಡಿಗ ಮಾತನಾಡಿ ವಿಜ್ಞಾನ ಸುಲಭವಾದರೇ ಮಾತ್ರ ವಿಜ್ಞಾನವೇ ಕಲಿಕೆಯ ಪ್ರಧಾನ ಅಂಗವಾಗಬೇಕು ಎಂದರು.

ಗ್ರಾ.ಪಂ ಸದಸ್ಯ ಶ್ರೀ ವೀರೇಂದ್ರ ಶೆಟ್ಟಿ, ಸರೋಜ, ಟಿ.ಪಿ.ಎಲ್.ಓ ಚಂದ್ರಶೇಖರ, ಶೇಖರ ಪೂಜಾರಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಪ್ರಭಾಕರ ದೇವಾಡಿಗ, ಮುಖ್ಯ ಶಿಕ್ಷಕ ಮಹಾಬಲೇಶ್ವರ ಐತಾಳ, ಮಂಜುನಾಥ ಮಹಾಲೆ, ವೆಂಕಪ್ಪ ಉಪ್ಪಾರ್ ಮೊದಲಾದವರು ಉಪಸ್ಥಿತರಿದ್ದರು.
ಬಿ. ಆರ್. ಸಿ ಅಬುಲ್ ರಪೂಪ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಸಿ ಆರ್.ಪಿ ಸುಬ್ರಮಣ್ಯ ಜಿ ಉಪ್ಪುಂದ ವಂದಿಸಿದರು ಹಾಗೂ ಶಿಕ್ಷಣ ಸಂಘದ ಕಾರ್ಯದರ್ಶಿ ಜಯಾನಂದ ಪಟಗಾರ್ ಕಾರ್ಯಕ್ರಮ ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)