ಬಿಜೂರು : ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಜಿ ಮೋಹನ್‍ದಾಸ್ ರವರಿಗೆ ಹುಟ್ಟೂರ ಸನ್ಮಾನ

0
130

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ನಂದಿಕೇಶ್ವರ ಫ್ರೆಂಡ್ಸ್, ಬಿಜೂರು ವತಿಯಿಂದ ಕರ್ನಾಟಕ ರಾಜೋತ್ಸವ ಪ್ರಶಸ್ತಿ ವಿಜೇತ ಬಿ.ಜಿ ಮೋಹನದಾಸ್ ಬೀಜೆಯವರಿಗೆ ಹಟ್ಟೂರು ಸನ್ಮಾನ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಬಿಜೂರಿನಲ್ಲಿ ಅದ್ಧೂರಿಯಾಗಿ ನಡೆಯಿತು.

ಕರ್ನಾಟಕ ರಾಜೋತ್ಸವ ಪ್ರಶಸ್ತಿ ವಿಜೇತ ಬಿ.ಜಿ ಮೋಹನದಾಸ್ ರೊಡನೆ ಉದ್ಯಮ ಕ್ಷೇತ್ರದಲ್ಲಿ ಸಾದನೆಗೈದ ಗೋವಿಂದ ಪೂಜಾರಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾದನೆಗೈದ ಶಂಕರ ಪೂಜಾರಿ ಕಾಡಿನತಾರು ಅವರುಗಳನ್ನು ಸನ್ಮಾನಿಸಲಾಯಿತು.

ಬಿ ಜೆ ಮೋಹನದಾಸ್ ರವರು ಇಂಟರ್‍ನೆಟ್‍ಮ ಸೌಲಭ್ಯವಿಲ್ಲದ, ವಾಟ್ಸಪ್-ಪೇಸ್ ಬುಕ್ ಮೊದಲಾದ ಸಾಮಜಿಕ ಜಾಲತಾಣಗಳಿಲ್ಲದ ಕಾಲದಲ್ಲ ವಿದೇಶೀ ನೆಲದಲ್ಲ ಕನ್ನಡವನ್ನು ಕಟ್ಟಿ ಬೆಳೆಸಿದರು. ಸುಮುದಾಯದ ಅಭಿವೃದ್ದಿಗೆ ಅವರ ಶ್ರಮ ದೊಡ್ಡದೆಂದು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪದಾಯ ವಿಶ್ವೇಶ್ವರ ಅಡಿಗ ಹೇಳಿದರು.

ಬೈಂದೂರು ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಐ.ಎಪ್.ಎಸ್. ಜಗನ್ನಾಥ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಅಣ್ಣಯ್ಯ ಶೇರುಗಾರ್ ಪುಣೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉಡುಪಿ ಭಾ.ಜ.ಪ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ಜಿ.ಪಂ ಮಾಜಿ ಉಪಧ್ಯಾಕ್ಷೆ ಶಾರದ ಬಿಜೂರು, ಬೈಂದೂರು ಭಾ.ಜ.ಪ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಬೈಂದೂರು ಭಾ.ಜ.ಪ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ ಶೆಟ್ಟಿ, ಜಿಜೂರು ಮಂಡಲ ಪಂಚಾಯತ್ ಮಾಜಿ ಸದಸ್ಯೆ ಅನುಸೂಯ ಕೆ ಬಿಜೂರು, ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಸಂಚಾಲಕ ಹಿರಿಯಡ್ಕ ಮೋಹನದಾಸ್, ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ಮಂಗಳೂರು) ಅಧ್ಯಕ್ಷ ಡಾ. ದೇವರಾಜ್ ಕೆ., ಮಾತಾ ಫರ್ನಿಚರ್ಸ್, ಎಲಿಕ್ಟ್ರಿಕಲ್ಸ್ & ಹೋಮ್ ಅಪ್ಲಾಯನ್ಸಸ್ ಉಪ್ಪುಂದ ಮಾಲಿಕರು ಆನಂದ ಪೂಜಾರಿ ಹಾಗೂ ಮಾಲತಿ ಗೋವಿಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಲಕ್ಷ್ಮೀಕಾಂತ ಬೆಸ್ಕೂರು ಸ್ವಾಗತಿಸಿ ಪ್ರಿಯದರ್ಶಿನಿ ಕಮಲೇಶ್ ವಂದಿಸಿದರು, ಶಿಕ್ಷಕ ಸುಬ್ರಮಣ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು,

ರಾಘವೇಂದ್ರ ಆಚಾರ್ಯ ಜನ್ಸಾಲ್, ಪಟ್ಲ ಸತೀಸ್ ಶೆಟ್ಟಿ ಮತ್ತು ಕಾವ್ಯಶ್ರೀ ಅಜೇರು ಇವರ ಸಾರತ್ಯದಲ್ಲಿ ಯಕ್ಷಗಾನ, ನಾಟ್ಯ ವೈಭವ, ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಸ್ಮಾರ್ಟ್ ಡ್ಯಾನ್ಸ್ ಗ್ರೂಪ್ ಶಿರಿಸಿ ಇವರಿಂದ ಡ್ಯಾನ್ಸ ಧಮಾಕ ಕಾರ್ಯಕ್ರಮ ಜರುಗಿತು.

           

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)