ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯು 1969ರಲ್ಲಿ ಪ್ರಾರಂಭಗೊಂಡು 2019ಕ್ಕೆ 50ವರ್ಷಗಳನ್ನು ಪೂರೈಸುತ್ತಿದ್ದು ಸುವರ್ಣ ಮಹೋತ್ಸವ ಸಂಭ್ರಮಾಚರಣೆಯು ಡಿ. 20ರಿಂದ 22ರ ತನಕ ಕೊಲ್ಲೂರಿನ ಶಾಲಾ ಮೈದಾನದಲ್ಲಿ ನಡೆಯಲಿದೆ.
ಡಿಸೆಂಬರ್ 20ರಂದು ಸುವರ್ಣ ಸಂಭ್ರಮಾಚರಣೆ, ಡಿ.21ರಂದು ಪೂರ್ವ ವಿದ್ಯಾರ್ಥಿ ಸುವರ್ಣ ಸಂಗಮ, ಡಿ. 22ರಂದು ಸುವರ್ಣ ಸಾಂಸ್ಕೃತಿಕ ಹಬ್ಬ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.