ಡಿ.3; ಬಿಜೂರು ನಂದಿಕೇಶ್ವರ ಫ಼್ರಂಡ್ಸ್ ರಿಂದ ಹುಟ್ಟೂರು ಸನ್ಮಾನ

0
1619

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಡಿ.3; ಬಿಜೂರು ನಂದಿಕೇಶ್ವರ ಫ಼್ರಂಡ್ಸ್ ರಿಂದ ಬೀಜಿಯವರಿಗೆ ಹಾಗೂ ಇನ್ನಿಬ್ಬರಿಗೆ ಹುಟ್ಟೂರು ಸನ್ಮಾನ

ಶ್ರೀ ನಂದಿಕೇಶ್ವರ ಫ್ರೆಂಡ್ಸ್, ಬಿಜೂರು ವತಿಯಿಂದ ಬೀಜೆಯವರಿಗೆ ಹಾಗೂ ಇನ್ನಿಬ್ಬರಿಗೆ ಹಟ್ಟೂರು ಸನ್ಮಾನ ಕಾರ್ಯಕ್ರಮ ಡಿ. 3 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಬಿಜೂರಿನಲ್ಲಿ ನಡೆಯಲಿದೆ.

ಕರ್ನಾಟಕ ರಾಜೋತ್ಸವ ಪ್ರಶಸ್ತಿ ವಿಜೇತ ಬಿ.ಜಿ ಮೋಹನದಾಸ್ ರೊಡನೆ ಉದ್ಯಮ ಕ್ಷೇತ್ರದಲ್ಲಿ ಸಾದನೆಗೈದ ಗೋವಿಂದ ಪೂಜಾರಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾದನೆಗೈದ ಶಂಕರ ಪೂಜಾರಿ ಕಾಡಿನತಾರು ಇವರೂ ಹೂಟ್ಟೂರು ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಗೊಳ್ಳಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ-ಬೈಂದೂರು ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ, ಹಾಗೆ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ವಹಿಸಲಿದ್ದಾರೆ.

ಸಂದೀಪನ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾದ್ಯಾಯ ವಿಶ್ವೇಶ್ವರ ಅಡಿಗ ಬಿಜೂರು ಇವರು ಅಭಿನಂದನಾ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಯಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರು ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಐ.ಎಪ್.ಎಸ್. ಜಗನ್ನಾಥ, ಉಡುಪಿ ಭಾ.ಜ.ಪ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಉಡುಪಿ ಜಿ.ಪಂ ಮಾಜಿ ಉಪಧ್ಯಾಕ್ಷೆ ಶಾರದ ಬಿಜೂರು, ಬೈಂದೂರು ಭಾ.ಜ.ಪ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಬೈಂದೂರು ಭಾ.ಜ.ಪ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ ಶೆಟ್ಟಿ, ಜಿಜೂರು ಮಂಡಲ ಪಂಚಾಯತ್ ಮಾಜಿ ಸದಸ್ಯೆ ಅನುಸೂಯ ಕೆ ಬಿಜೂರು, ಅಖಿಲ ಭಾರತದ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು ದೇವಾಡಿಗ, ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಸಂಚಾಲಕ ಹಿರಿಯಡ್ಕ ಮೋಹನದಾಸ್, ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ಮಂಗಳೂರು) ಅಧ್ಯಕ್ಷ ಡಾ. ದೇವರಾಜ್ ಕೆ., ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ಮಂಗಳೂರು) ಮಾಜಿ ಅಧ್ಯಕ್ಷ ವಾಮನ್ ಮುರೋಳಿ, ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಜನಾರ್ಧನ ದೇವಾಡಿಗ, ಬೆಂಗಳೂರು ಖ್ಯಾತ ಜ್ಯೋತಿಷ್ಯರು ಡಾ. ಮಹೇಂದ್ರ ಭಟ್, ಮಾತಾ ಫರ್ನಿಚರ್ಸ್, ಎಲಿಕ್ಟ್ರಿಕಲ್ಸ್ & ಹೋಮ್ ಅಪ್ಲಾಯನ್ಸಸ್ ಉಪ್ಪುಂದ ಮಾಲಿಕರು ಆನಂದ ಪೂಜಾರಿರರೆಲ್ಲರೂ ಭಾಗವಹಿಸಲಿದ್ದಾರೆ.

ಸಂಜೆ 6.00ರಿಂದ ರಾತ್ರಿ 8.30ರ ವರೆಗೆ ರಾಘವೇಂದ್ರ ಆಚಾರ್ಯ ಜನ್ಸಾಲ್, ಪಟ್ಲ ಸತೀಸ್ ಶೆಟ್ಟಿ ಮತ್ತು ಕಾವ್ಯಶ್ರೀ ಅಜೇರು ಇವರ ಸಾರತ್ಯದಲ್ಲಿ ಯಕ್ಷಗಾನ, ನಾಟ್ಯ ವೈಭವ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 9.30ರಿಂದ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಸ್ಮಾರ್ಟ್ ಡ್ಯಾನ್ಸ್ ಗ್ರೂಪ್ ಶಿರಿಸಿ ಇವರಿಂದ ಡ್ಯಾನ್ಸ ಧಮಾಕ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕೆಉ ತಿಳಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)