ಮುಂಗಾರು ಮುಗಿಸಿ, ಹಿಂಗಾರು ಬೆಳೆಗೆ ಮರಳಿದ ಕೃಷಿಕರು

0
563

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ತುಸು ವಿಳಂಬವಾಗಿ ಆರಂಭವಾದ ಮಳೆಗಾಲ ಉತ್ತಮ ರೀತಿಯಲ್ಲಿ ಮಳೆ ಸುರಿದಿದ್ದು ಬೆಳೆಯು ಕೆಲ ಕೃಷಿಕರಿಗೆ ಖುಷಿ ಕೊಟ್ಟರೆ ಇನ್ನೂ ಕೆಲವರಿಗೆ ಕಹಿ ಕೊಟ್ಟಿದೆ. ಕೂಲಿ ಆಳುಗಳ ಸಮಸ್ಯೆಗಳ ನಡುವೆಯೂ ಯಾಂತ್ರಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡು ಮುಂಗಾರು ಬೆಳೆಯನ್ನು ಬೆಳೆದ ರೈತರ ಫಸಲಿಗೆ ಉತ್ತಮ ಧಾರಣೆ ಇಲ್ಲದೆ ಕೃಷಿಯು ಕೈ ಸುಟ್ಟುಕೊಳ್ಳುವ ಅನುಭವ ಉಂಟುಮಾಡುತ್ತಿದೆ. ಒಂದು ಕಿಂಟ್ವಾಲ್ ಭತ್ತಕ್ಕೆ ಸಾವಿರದ ಏಳುನೂರು ರೂಪಾಯಿ ಇದ್ದು ಇದು ಏನು ಸಾಲುವುದಿಲ್ಲ ಎನ್ನುವುದು ರೈತರ ಅಳಲು ಕನಿಷ್ಠ ಎರಡು ಸಾವಿರ ರೂಪಾಯಿ ಆದರೂ ಮಾಡಿದ ಖರ್ಚನ್ನು ಹೊಂದಿಸಬಹುದು. ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದೆ ಆದರೆ ಖರಿದಿ ಕೆಂದ್ರ ತೆರೆಯದೆ ಬೆಂಬಲ ಬೆಲೆಗೆ ಹೇಗೆ ಮಾರುವುದು ಎನ್ನುವುದು ರೈತರ ಅಳಲು.

ಮುಂಗಾರು ಮುಗಿಸಿ ಹಿಂಗಾರು ಬೆಳೆಯ ಕಡೆಗೆ ಮುಖಮಾಡಿರುವ ಕೃಷಿಯನ್ನೇ ಮೂಲ ಕಸುಬಾಗಿಸಿಕೊಂಡ ಹೊಸಾಡು ಗ್ರಾಮದ ಕೊಪ್ಪರಿಗೆ ಬೈಲು, ಕಮ್ಮಾರ ಕೊಡ್ಲು, ಮೂಗಿನ ಬೈಲು,ಕೋಟೆಮಕ್ಕಿ,ಮೈರ್ ಮನೆ,ಹೋಕ್ಕೊಳಿ ಬೈಲು ಸುಮಾರು ನಾಲ್ಕು ನೂರು ಎಕ್ರೆ ಭೂ ಪ್ರದೇಶದಲ್ಲಿ ಎರಡನೇ ಬೆಳೆಯಾಗಿ ಸುಗ್ಗಿನ್ನು ಕಡುಬಿನ ಕೆರೆಯ ನೀರಿನ ಆಶ್ರಯದಲ್ಲಿ ಮಾಡಲಾಗುತ್ತದೆ.

ಕೂಲಿ ಆಳುಗಳ ಸಮಸ್ಯೆಗಳ ನಡುವೆವೂ ಎರಡೆರಡು ಭತ್ತದ ಬೆಳೆಯನ್ನು ಅಳವಡಿಸಿ ಕೊಂಡು,ಒಣ ಭೂಮಿಯಲ್ಲಿ ಧವಸ ಧಾನ್ಯಗಳನ್ನು ಬಿತ್ತಿ ವರ್ಷ ಪೂರ್ತಿ ಕೃಷಿಯಲ್ಲಿ ತೊಡಗಿ ಕೊಂಡಿರುವ ಹೊಸಾಡಿನ ಕೃಷಿಕರು ಕೃಷಿಯ ಮುಖಾಂತರ ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುತ್ತಾರೆ.

ಕಡುಬಿನ ಕೆರೆಯ ಹುಳನ್ನು ಎತ್ತಿ ಅಭಿವೃದ್ಧಿ ಗೋಳಿಸಿದರೆ ಸುಗ್ಗಿಯ ಬೆಳೆಗೆ ನೀರಿನ ತಾಪತ್ರಯ ತಪ್ಪುವುದು. ಏಳುವರೇ ಎಕ್ರೆಯಷ್ಟು ವಿಶಾಲವಾದ ಕೆರೆ ಅಭಿವೃದ್ಧಿ ಗೋಳಿಸದೆ ಇಪ್ಪತ್ತೈದಕ್ಕೂ ಹೆಚ್ಚು ವರುಷಗಳೇ ಕಳೆದಿವೆ. ಕೊಟ್ಟಂತಹ ಮನವಿಗೆ ಯಾರು ಕೂಡ ಸ್ಪಂದಿಸುತ್ತಿಲ್ಲ
ಕುಡುಬಿನ ಕೆರೆ ಅಭಿವೃದ್ಧಿ ಆಗಬೇಕ್ಕೆನ್ನುವುದು ರೈತರಾದ ಶಿವರಾಮ ಶೆಟ್ಟಿ, ಜಗದೀಶ ದೇವಾಡಿಗ, ಆನಂದ ಶೆಟ್ಟಿ, ಮಹೇಶ್, ರಾಘವೇಂದ್ರ, ರಾಮಕೃಷ್ಣ ಮೈರು,ಆನಂದ ಮೊಗವೀರ. ಆಗ್ರಹಿಸಿದ್ದಾರೆ.

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)