ರಿಕ್ಷಾ ಚಾಲಕರು & ಮಾಲಕರು ಹೊಸ ಬಸ್ ನಿಲ್ದಾಣ ಕುಂದೇಶ್ವರ ದೀಪೋತ್ಸವ ಪ್ರಯುಕ್ತ 9ನೇ ವರ್ಷದ ವಾರ್ಷಿಕೋತ್ಸವ

0
142

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ರಿಕ್ಷಾ ಚಾಲಕರು & ಮಾಲಕರು ಹೊಸ ಬಸ್ ನಿಲ್ದಾಣ ಕುಂದೇಶ್ವರ ದೀಪೋತ್ಸವ ಪ್ರಯುಕ್ತ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರನ ಡಾl ವೆಂಕಟರಮಣ ಉಡುಪ ಕಾರ್ಯಕ್ರಮ ಉದ್ಘಾಟನೆ ಮಾಡಿ, ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಯುವ ಜನತೆ ತಾಯ್ನಾಡನ್ನು ಯಾವತ್ತೂ ಮರೆಯಬಾರದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಭಿನಂದನ್ ಶೆಟ್ಟಿ ಇವರು ಕುಂದಾಪುರ ಹೊಸ ಬಸ್ ನಿಲ್ದಾಣದ ರಿಕ್ಷಾ ಚಾಲಕರು ಸದಾ ಚಟುವಟಿದೆಯಿಂದ ಇದ್ದು, ಪ್ರಾಮಾಣಿಕರು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಅಮೃತೇಶ್ವರಿ ಆಯುರ್ವೇದಿಕ್ ಕ್ಲಿನಿಕ್ ನ ಡಾ ಸೋನಿ ಡಿ.ಕೋಸ್ಟ ಮಾತನಾಡುತ್ತಾ ಸಮಾಜದ ಋಣವನ್ನು ನಾವು ಯಾವುದೇ ರೀತಿಯ ಸೇವೆಯ ಮೂಲಕ ತೀರಿಸಬಹುದಾಗಿದೆ. ಅದನ್ನು ಆಟೋ ರಿಕ್ಷಾ ಚಾಲಕ/ಮಾಲಕರು ಪ್ರಾಮಾಣಿಕವಾಗಿ ತೀರಿಸುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಬೈಂದೂರು ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಶ್ ಖಾರ್ವಿ ಇವರು ಕುಂದಾಪುರ ಇತಿಹಾಸದ ಬಗ್ಗೆ ಮಾತನಾಡಿದರು.

ಸಂಘದ ಅಧ್ಯಕ್ಷರಾದ ಸತೀಶ್ ಖಾರ್ವಿ ಇವರು ಕಾರ್ಯಕ್ರಮ ನಡೆಸಲು ಸಹಕಾರ ನೀಡಿದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ವಿಶೇಷ ಚೇತನರಿಗೆ ಸಹಾಯ ಧನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮತ್ತು ಚಾಲಕ/ಮಾಲಕರ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರರಣೆ ಮಾಡಲಾಯಿತು.

ದೀಪೋತ್ಸವ ಪ್ರಯುಕ್ತ ಲಕ್ಕಿಡಿಪ್ ಮಾಡಿದ್ದು, 55 ಪುಸ್ತಕ ಮಾರಾಟ ಮಾಡಿದ ಚಾಲಕರಾದ ಜನಾರ್ಧನ ಇವರನ್ನು ಗುರುತಿಸಲಾಯಿತು.
ದೀಪ ಮತ್ತು ವೆಂಕಟೇಶ್ ದೇವಾಡಿಗ ವಿವರ ವಾಚಿಸಿದರು. ನಾಗರಾಜ್ ಖಾರ್ವಿ ಇವರು ತಾವು ಸಾಗಿ ಬಂದ ಹಾದಿಯ ಅವಲೋಕನವನ್ನು ವರದಿ ಮೂಲಕ ವಾಚಿಸಿದರು.

ಮುಕುಂದ ಖಾರ್ವಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಲೋಹಿತ್ ಖಾರ್ವಿ ಸ್ವಾಗತಿಸಿ, ರಾಘವೇಂದ್ರ ಖಾರ್ವಿ ವಂದಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಉತ್ತರ ಕನ್ನಡ ಜಿಲ್ಲಾ(ಕುಮಟಾ) MIS ಯೋಜನಾಧಿಕಾರಿ ಸ್ವಪ್ನ ಪ್ರಕಾಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಘದ ಪ್ರಸನ್ನ ಖಾರ್ವಿ ಮತ್ತು ರಾಜೇಶ್ ಶೇರಿಗಾರ್ ಉಪಸ್ಥಿತರಿದ್ದರು.

ವರದಿ : ರಕ್ಷಿತ್ ಕುಮಾರ್ ಶೆಟ್ಟಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)