ಕೊಲ್ಲೂರು : 150 ಲಕ್ಷದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

0
143

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹೊಸೂರು ಕೊಲ್ಲೂರು ದೇವಳದ ಪ್ರೌಢಶಾಲೆಯಿಂದ ಕಾನ್ಬೇರು ಮಹಿಷಮರ್ದಿನಿ ದೇವಸ್ಥಾನದವರೆಗಿನ ರಸ್ತೆಗೆ ಬೈಂದೂರು ಹೆಮ್ಮೆಯ ಶಾಸಕರಾದ, ಶಿಕ್ಷಣ ಪ್ರೇಮಿ ಬಿ ಎಮ್ ಸುಕುಮಾರ ಶೆಟ್ಟಿಯವರು150 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿಸಿ, ಅದರ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ನಂತರ ಮಾತನಾಡಿದ ಅವರು, ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗ ನಾನು ಶಾಸಕನಾಗಿರುವುದು ಕೊಲ್ಲೂರು ಮುಕಾಂಬಿಕೆಯ ಆಶೀರ್ವಾದ. ಕಳೆದ ಕೆಲವು ತಿಂಗಳಿನಿಂದ ಹಲವು ಅತೀ ಅಗತ್ಯ ರಸ್ತೆಗಳನ್ನು ಗಮನದಲ್ಲಿರಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಇದು ಅದರ ಮುಂದುವರೆದ ಭಾಗ ಎಂದರು. ಹೊಸೂರು ಭಾಗಕ್ಕೆ ಈಗಾಗಲೇ ಹಲವು ಯೋಜನೆಗಳನ್ನು ಮಂಜೂರು ಮಾಡಿದ್ದು, ಮುಂದಿನ ದಿನಗಳಲ್ಲಿ ಮಲೆನಾಡು ಕರಾವಳಿ ಭಾಗಕ್ಕೆ ಸೇರಿದಂತೆ ಸಮಗ್ರ ಬೈಂದೂರಿಗೆ ಪಣತೊಡುತ್ತೇನೆ ಎಂದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)