ಜನವಾದಿ ಮಹಿಳಾ ಸಂಘಟನೆಯ ಹೋರಾಟದ ಬಿತ್ತಿ ಪತ್ರ ಬಿಡುಗಡೆ

0
258

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆ ಸಮಪ೯ಕ ಜ್ಯಾರಿಗಾಗಿ,ದಿನಕೂಲಿ ರೂ:700/ ನೀಡಲು ಆಗ್ರಹಿಸಿ, ಪಟ್ಟಣ ಮತ್ತುನಗರ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಜ್ಯಾರಿಗೆ ಒತ್ತಾಯಿಸಿ, ಮೈಕ್ರೊ ಪೈನಾನ್ಸ್ ಸಂಸ್ಥೆ ಗಳ ಸುಲಿಗೆಯಿಂದ ಮಹಿಳೆಯರನ್ನು ರಕ್ಷಿಸಿ, ಶೇಕಡಾ 4 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಸುತ್ತು ನಿಧಿ, ಸಹಾಯ ಧನ, ತರಬೇತಿಯಲ್ಲಿ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ ಖಾತ್ರಿ ಒದಗಿಸಬೇಕು, ಮಹಿಳೆಯರ ಸುರಕ್ಷತೆಯನ್ನು ಖಾತ್ರಿಗೊಳಿಸಲು, ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ನೇತೃತ್ವದಲ್ಲಿ ದಿನಾಂಕ 16, ಡಿಸೆಂಬರ್ 2019 ರಂದು ಬೆಂಗಳೂರಿನಲ್ಲಿ ಮಹಿಳೆಯರ ಬೃಹತ್ ಪ್ರತಿಭಟನಾ ಮೆರವಣಿಗೆ ಜರಗಲಿರವುದರ ಹೋರಾಟದ ಭಿತ್ತಿ ಪತ್ರದ ಬಿಡುಗಡೆ ಸಮಾರಂಭವು ಇಂದು ಹಡವು ಗ್ರಾಮದ ಶೀಲಾವತಿ ಮನೆಯ ವಠಾರದಲ್ಲಿ ಯಶಸ್ವಿಯಾಗಿ ಜರಗಿತು.

ಭಿತ್ತಿಪತ್ರ ಬಡುಗಡೆಯನ್ನು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ ನೆರವೇರಿಸಿದರು. ಉಪಾಧ್ಯಕ್ಷೆ ಕಿರಣ ಪ್ರಭಾ ಮಂಗಳೂರು, ತಾಲೂಕು ಅಧ್ಯಕ್ಷೆ ಶೀಲಾವತಿ, ಮುಖಂಡರಾದ ನಾಗರತ್ನ, ಮನೋರಮಾ ಭಂಡಾರಿ ಕಾಯ೯ಕ್ರಮದ ಯಶಸ್ಸಿಗೆ ಶ್ರಮಿಸಿದರು.

ವರದಿ : ವೆಂಕಟೇಶ ಕೋಣಿ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)